This page has been fully proofread once and needs a second look.

೨೧೪
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ವಿಸ್ತಾರವಾಗುವುದೆಂಬ ಕಾರಣದಿಂದಲೂ ನನಗೆ ತಿಳಿದಿದ್ದರೂ ತಿಳಿಸುತ್ತಿಲ್ಲ.
 

 
ಸ್ಮೃತಿವಿಭಾಗ
 

 
ಖಂಡಸ್ಮೃತಿರ್ಧಾರಣಾ ಸ್ಯಾದ್ ಅಖಂಡಾ ಧ್ಯಾನಮುಚ್ಯತೇ ।

ಅಪ್ರಯತ್ನಾತ್ ಸಮಾಧಿಶ್ಚ ದರ್ಶನಂ ಚಿರಯಾನಯಾ
ऽನಯಾ।
ಅಥವಾ ಸತತಂ ಶಾಸ್ತ್ರವಿಮರ್ಶೆಶೇನ ಭವಿಷ್ಯತಿ
 
158 ೧೫೮
 

 
ಪರಮಸ್ನೇಹಸಂಯುಕ್ತಯಥಾರ್ಥಜ್ಞಾನತೋ ಭವೇತ್ ।
 

ಸಾ ಭಕ್ತಿರಿತಿ ವಿಜೇಜ್ಞೇಯಾ ಸಾಧನಂ ಭೋಗಮೋಕ್ಷಯೋಃ ॥159 ೧೫೯

 
ಅರ್ಥ- ಸಚ್ಛಾಸ್ತ್ರವನ್ನು ಕೇಳುವುದು, ದರ್ಶನಾದಿಗಳಿಂದ ಉಂಟಾಗುವ
ವಾಸನಾಮಯವಾದ ವಸ್ತುವನ್ನು ಮನಸ್ಸಿನಿಂದ ತಿಳಿಯುವುದು ಸ್ಮೃತಿಯು. ಇದು
ಖಂಡಸ್ಕೃಮೃತಿ ಮತ್ತು ಅಖಂಡಸ್ಕೃ- ಸ್ಮೃತಿ ಎಂದು ಎರಡು ವಿಧವಾಗಿರುತ್ತದೆ.
ಅಖಂಡಸ್ಕೃಮೃತಿಯೂ ಸಹ ಧ್ಯಾನರೂಪವಾದದ್ದು ಹಾಗೂ ಸಮಾಧಿರೂಪವಾದದ್ದು

ಎಂದು ಎರಡು ವಿಧವು. ಇವುಗಳಲ್ಲಿ ಭಗವಂತನ ಯಾವುದಾದ- ರೊಂದು
ಅವಯವಗಳ ಸ್ಮರಣೆ, ಅಥವಾ ಕೆಲವು ಕಾಲ ಸ್ಮರಣೆ ಮತ್ತೆ ಕೆಲವು ಕಾಲ ವಿಸ್ಮರಣೆ
ಇರುವಿಕೆಯು ಸಾಧಾರಣವಾಗಿ ಖಂಡಸ್ಕೃಮೃತಿ ಎನಿಸುತ್ತದೆ.
 

 
ಸಮಸ್ತಾವಯವಗಳ ಸ್ಮರಣೆ ಹಾಗೂ ಮಧ್ಯೆ ಖಂಡವಾಗದೆ ನಿರಂತರ
ಭಗವದ್ಗುಣಗಳ ಸ್ಮರಣೆಯು ಧ್ಯಾನ ಎನಿಸುತ್ತದೆ.
 

 
ಧ್ಯಾನಮಾಡಲು ಪ್ರಯತ್ನ ಮಾಡದಿದ್ದರೂ ಅನಾಯಾಸವಾಗಿ ನಿರಂತರ ಭಗ-
ವಂತನ ಸ್ಮರಣೆಯು ಸಮಾಧಿ ಎನಿಸುತ್ತದೆ. ಹೀಗೆ ಪ್ರಯತ್ನವಿಲ್ಲದೇನೇ ಬಹುಕಾಲ-
ದಿಂದ ಅನುವೃತ್ತವಾದ ಸಮಾಧಿ- ಯಿಂದ ಭಗವಂತನ ಅಪರೋಕ್ಷವಾಗುತ್ತದೆ.
 

 
ಭಗವಂತನ ದರ್ಶಕ್ಕೆ ಪ್ರಾಧಾನ್ಯಾದಿಗಳು ಅಮುಖ್ಯಸಾಧನಗಳಾ- ಗಿದ್ದು, ಭಗ-
ವಂತನಲ್ಲಿ ಮಾಹಾತ್ಮ್ಯ ಜ್ಞಾನಪೂರ್ವಕವಾದ ಸುದೃಢಸ್ನೇಹರೂಪವಾದ ಭಕ್ತಿಯೇ
ಭಗವಂತನ ಅಪರೋಕ್ಷ- ದಲ್ಲಿ ಪ್ರಧಾನಸಾಧನವು. ಇಂತಹ ಯಥಾರ್ಥ ಭಕ್ತಿಯೇ
ಮೋಕ್ಷವು ಹಾಗೂ ಮೋಕ್ಷದಲ್ಲಿ ಆನಂದಾತಿಶಯವು ಉಂಟಾಗಲು ಸಾಧನವು.
 

 
ಭಕ್ತಿಯ ಮಹಿಮೆ