This page has not been fully proofread.

೨೧೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಶರೀರದಲ್ಲಿರುವ ಷಟ್ ಪದ್ಯಗಳು
 
ಮೂಲೇ ಚ ನಾಭೌ ಹೃದಯೇಂದ್ರಯೋನಿಭೂಮಧ್ಯಮೂರ್ಛಿ ದ್ವಿಷಡಂತಕೇಷು ।
ಚತುಃಷಡಷ್ಟಚತುರ್ದ್ದಿಷಟ್ಟದಲೇಷು ಪಷು ಸಿತಾರುಣೇಷು ।
ಪಂಚಾತ್ಮಕೋಸ್ ಭಗವಾನದೈವ ಧೈಯೋ ಹೃದಂತಾರುಣಾನಿ ತಾನಿ 153
 
ಅರ್ಥ - ಶರೀರದಲ್ಲಿ ಆರು ಪದಗಳಿವೆ. ಮೂಲಾಧಾರದಲ್ಲಿ ನಾಲ್ಕುದಳದ
ಪದವು, ನಾಭಿಯಲ್ಲಿ ಆರುದಳದ ಪದ್ಮ, ಹೃದಯದಲ್ಲಿ ಅಷ್ಟದಳಪದವು,
ಕಂಠದಲ್ಲಿ ಎರಡು ದಳ ಪದವು, ಹುಬ್ಬುಗಳ ಮಧ್ಯೆ ನಾಲ್ಕುದಳ ಪದವು,
ತಲೆಯಲ್ಲಿ ಹನ್ನೆರಡು ದಳಪದವಿರುತ್ತದೆ. ಹೀಗೆ ಶರೀರದ ನಾನಾಭಾಗಗಳಲ್ಲಿರುವ
ಆರುಪದಗಳಲ್ಲಿರುವ ವಾಸುದೇವಾದಿ ಪಂಚಮೂರ್ತಿಗಳನ್ನು ಚಿಂತಿಸಬೇಕು.
 
ಈ ಪದ್ಯಗಳಲ್ಲಿ ಮೂಲಾಧಾರ, ನಾಭಿ, ಹೃದಯ ಪದ್ಮಗಳು ಕೆಂಪಾಗಿದ್ದರೆ ಉಳಿದ
ಕಂಠ, ಹಣೆ, ಶಿರಸ್ಸಿನಲ್ಲಿರುವ ಪದಗಳು ಶ್ವೇತವರ್ಣವಾಗಿವೆ.
 
ಪದ್ಮಗಳಲ್ಲಿರುವ ಮಂಡಲಗಳು
 
ತ್ರಿಕೋಣವಪ್ರೌ ಚ ಷಡಶ್ರವಾಯ್
ದ್ವಿಸ್ತಾವದರವಿವೃತ್ತಶಶಿಸ್ಥವ
 
ವೃತ್ತೇ ವಿಧಾವಪಿ ವಿಚಿಂತ್ಯಮಿದಂ ದಶಾರ್ಧ-
ರೂಪಂ ಸಿತಂ ತದಖಿಲಂ ಹೃದಯಾತರಮ್ ॥154
 
ಅರ್ಥ - ಮೂಲಾಧಾರದಲ್ಲಿ ತ್ರಿಕೋಣವಮಂಡಲದಲ್ಲಿಯೂ, ನಾಭಿ-
ಯಲ್ಲಿರುವ ಷಟ್ಟೋಣವಾಯುಮಂಡಲದಲ್ಲಿಯೂ, ಹೃದಯದಲ್ಲಿರುವ ದ್ವಾದಶ-
ಕೋಣಗಳಿರುವ ವೃತ್ತಾಕಾರದ ಸೂರ್ಯಮಂಡಲದಲ್ಲಿ ವೃತ್ತಾಕಾರದ ಚಂದ್ರ
ಮಂಡಲವು, ಅದರ ಮೇಲೆ ತ್ರಿಕೋಣವಹಿಮಂಡಲ, ಅದರಲ್ಲಿ ಭಗವಂತನನ್ನು
ಧ್ಯಾನಿಸಬೇಕು.
 
ಕಂಠ, ಭೂಮಧ್ಯ ಹಾಗೂ ಶಿರಸ್ಸುಗಳಲ್ಲಿ ವೃತ್ತಾಕಾರದ ಚಂದ್ರಮಂಡಲ,
ಅದರಲ್ಲಿ ಭಗವಂತನನ್ನು ಧ್ಯಾನಿಸಬೇಕು. ಈ ಆರುಮಂಡಲಗಳಲ್ಲಿ ಧ್ಯಾನ
ಮಾಡಬೇಕಾಗಿರುವ ಪಂಚರೂಪಗಳಲ್ಲಿ ಮೂಲಾಧಾರ, ನಾಭಿ, ಹೃದಯದಲ್ಲಿರುವ
ಭಗವದ್ರೂಪಗಳು ಕಮಲಗಳಂತೆಯೇ ಕೆಂಪುಬಣ್ಣದ್ದಾದರೆ ಉಳಿದವು ಬಿಳಿಯ