This page has not been fully proofread.

ಚತುರ್ಥೋಽಧ್ಯಾಯಃ
 
ವೈದ್ಯುತಾ ಬ್ರಹ್ಮನಾಡೀತಿ ಸೈವ ಪಂಚಪ್ರಭೇದಿನೀ।
 
ಅರ್ಥ - ವೃಷಣದ ಮೂಲಭಾಗದಿಂದ ನೆತ್ತಿಯವರೆಗೂ ನೇರವೂ, ದೀರ್ಘವೂ
ಆಗಿರುವ ನಾಡಿಯೇ 'ಸುಷುಮ್ನಾ' ನಾಡಿಯು. ಒಂದೇ ಸುಷುಮ್ಮಾ ನಾಡಿಯು
ವಜ್ರಕಾ, ಆರ್ಯಾ, ಅವಭಾಸಿನೀ, ವೈದ್ಯುತಾ, ಬ್ರಹ್ಮನಾಡೀ ಎಂಬ ಐದು ಪ್ರಭೇದ
ವುಳ್ಳದ್ದಾಗಿದೆ.
 
ಸುಷುಮ್ಮೆಯ ಐದು ವಿಭಾಗಗಳು
ಪೃಷ್ಠವಾಮಾಗ್ರದಕ್ಷಾಂತಃ ಭೇದಾನ್ತೇ ಚ ಕ್ರಮೇಣ ತು ॥151॥
ಲೋಹಿತಶ್ಚಾತ್ರ ಕೇಶವಃ ।
 
ಹರಿರ್ನಿಲಃ ಸಿತಃ ಪಿಂಗೋ
 
ಪ್ರದ್ಯುಮ್ನಾದಿಸ್ವರೂಪೇಣ ಧೈಯಃ ಸಿದ್ಧಿಮಭೀಪ್ಪತಾ ॥152॥
 
೨೧೧
 
ಅರ್ಥ
 
ಸುಷುಮ್ಮಾ ನಾಡಿಯ ಹಿಂಬದಿಗೆ ವಜ್ರಕೆ ಎಂದೂ, ಎಡಬದಿಗೆ
ಆರ್ಯಾ ಎಂದೂ, ಎದುರಿಗೆ ಅವಭಾಸಿನಿ ಎಂದೂ, ಬಲಭಾಗಕ್ಕೆ ವೈದ್ಯುತಾ
ಎಂದೂ, ಮಧ್ಯ ಭಾಗಕ್ಕೆ ಬ್ರಹ್ಮನಾಡೀ ಎಂದೂ ಒಂದೊಂದು ದಿಕ್ಕಿನಲ್ಲಿರುವ
ಸುಷುಮ್ಮಾನಾಡಿಯೇ ಐದು ಪ್ರಭೇದವುಳ್ಳದ್ದಾಗಿದೆ. ಅಭೀಷ್ಟಸಿದ್ಧಿಯನ್ನು ಇಚ್ಛಿಸುವ
ಸಾಧಕನು, ವಜ್ರಕಾದಿ ಐದುಪ್ರದೇಶಗಳಲ್ಲಿ ಪ್ರದ್ಯುಮ್ಮಾದಿ ಐದು ರೂಪಗಳುಳ್ಳ
ಭಗವಂತನನ್ನು ಧ್ಯಾನಿಸಬೇಕು. ವಜ್ರಕಾ ಎಂಬ ಹಿಂಬದಿಯ ನಾಡಿಯಲ್ಲಿ
ಪೀತವರ್ಣದ ಪ್ರದ್ಯುಮ್ನನನ್ನೂ, ಎಡದಲ್ಲಿರುವ ಆರ್ಯಾ ನಾಡಿಯಲ್ಲಿ ನೀಲ-
ವರ್ಣದ ಅನಿರುದ್ಧನನ್ನೂ, ಅಗ್ರಭಾಗದಲ್ಲಿರುವ ಅವಭಾಸಿನೀ ಅಥವಾ ಪ್ರಕಾಶಿನೀ
ನಾಡಿಯಲ್ಲಿ ಬಿಳಿ ಬಣ್ಣದ ವಾಸುದೇವನನ್ನು, ಬಲಭಾಗದ ವೈದ್ಯುತಾ ನಾಡಿಯಲ್ಲಿ
ಅರುಣಬಣ್ಣದ ಸಂಕರ್ಷಣನನ್ನು ಧ್ಯಾನಿಸಿ ಮಧ್ಯದ ಬ್ರಹ್ಮನಾಡಿಯಲ್ಲಿರುವ
ರಕ್ತವರ್ಣದ ನಾರಾಯಣನನ್ನು ಧ್ಯಾನಿಸಬೇಕು.
 
1. ಪಂಚಮೂರ್ತಿಗಳನ್ನು ಆರುದಳಗಳಿಗೆ ಹಂಚುವ ವಿಷಯದಲ್ಲಿ ಎರಡು ಅಭಿಪ್ರಾಯಗಳಿವೆ.
ಮೂಲಾಧಾರ ಹಾಗೂ ನಾಭಿಗಳಲ್ಲಿ ನಾರಾಯಣರೂಪವು, ಹೃದಯ ಅನಿರುದ್ಧ, ಕಂಠ
ಪ್ರದ್ಯುಮ್ನ, ಭೂಮಧ್ಯ - ಸಂಕರ್ಷಣ, ಶಿರಸ್ಸು - ವಾಸುದೇವ.
 
ಮೂಲಾಧಾರದಲ್ಲಿಯೇ ಐದುಮೂರ್ತಿಗಳನ್ನು ಉಳಿದ ಐದು ಕಮಲಗಳಲ್ಲಿ ಅನಿರುದ್ಧಾದಿ
ಪಂಚರೂಪಗಳನ್ನು ಧ್ಯಾನಿಸುವುದು.
 
ಎರಡೂ ಪಕ್ಷಗಳಲ್ಲಿಯೂ ದೋಷವೇನೂ ಇರುವುದಿಲ್ಲವೆಂದು ತಿಳಿಯುವುದು.