This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಕುಳಿತುಕೊಳ್ಳುವುದು 'ಪದ್ಮಾಸನವು'. ಒಂದು ಕಾಲನ್ನು ತೊಡೆಯ ಮೇಲೂ
ಮತ್ತೊಂದನ್ನು ತೊಡೆಯ ಕೆಳಗೂ ಹಾಕಿ ಚಕ್ಕಳಬಕ್ಕಳ ಕೂತರೆ ವೀರಾಸನವೆಂದು
ಕರೆಯಲ್ಪಡುತ್ತದೆ. ಎಂಟು ವಿಧ ಆಸನಗಳಲ್ಲಿ ಈ ಮೂರು ಅತ್ಯಂತ ಶ್ರೇಷ್ಠವಾಗಿರುತ್ತವೆ.
ಈ ಆಸನಗಳನ್ನು ಭೂಮಿಶುದ್ಧಿಮಂತ್ರದೊಂದಿಗೆ ರಚಿಸಿಕೊಳ್ಳಬೇಕು.
 

 
ರೇಚಕಾದಿಗಳ ಮಾತ್ರಾ ಕಾಲ; ಪ್ರಾಣಾಯಾಮವಿಧಿ
 

 
ದ್ವಿಗುಣೋತ್ತರಂ ರೇಚಕಾದಿ ಷೋಡಶಾದಿಕ್ರಮೇಣ ತು।

ಮಾತ್ರಾಣಾಂ ಪ್ಹ್ರಸ್ವವರ್ಣಸ್ಯ ಕಾಲೋ ಮಾತ್ರೇತಿ ಶಬ್ದತೇ ॥1481
 

 
೪೮ ॥
ಕ್ರಮೇಣೈವಾಭ್ಯಸೇನ್ಮಾತ್ರಾವೃದ್ಧಿಮೇಕಾಗ್ರಧೀಃ ಪುನಃ ।
 

 
ಅರ್ಥ - ಪ್ಹ್ರಸ್ವ ಆಕಾರವನ್ನು ಉಚ್ಚಾರಣೆ ಮಾಡುವಷ್ಟು ಕಾಲಕ್ಕೆ (ಸುಮಾರು
ಒಂದು ಸೆಕೆಂಡ್) ಮಾತ್ರಾಕಾಲವೆಂದು ಹೆಸರು. ಇಂತಹ ಹದಿನಾರು ಮಾತ್ರಾ
ಕಾಲದಷ್ಟು ಒಳಗಿರುವ ಗಾಳಿ- ಯನ್ನು ಹೊರಹಾಕಲು ಉಪಯೋಗಿಸಬೇಕು. ಅದರ
ಎರಡರಷ್ಟು ಅಂದರೆ 32 ಮಾತ್ರಾಗಳಷ್ಟು ಕಾಲ ಶುದ್ಧಗಾಳಿಯನ್ನು ಸೆಳೆದು
-
ಕೊಳ್ಳಬೇಕು. ಪೂರಕಪ್ರಾಣಾಯಾಮದ ಎರಡರಷ್ಟು ಕಾಲ ಅಂದರೆ 64ಮಾತ್ರೆಗಳಷ್ಟು
ಕಾಲ ಕುಂಭಕದಲ್ಲಿ ವಾಯುವನ್ನು ನಿಲ್ಲಿಸಬೇಕು. ಹೀಗೆ ಸಾಧಕರು ರೇಚಕ, ಪೂರಕ,
ಕುಂಭಕಗಳಲ್ಲಿ ಎರಡೆರಡು ಪಟ್ಟು ಹೆಚ್ಚಿಸುತ್ತಾ ಸಿದ್ಧಿಯನ್ನು ಪಡೆಯಬೇಕು.
 

 
ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾ ಚ ವಾಮತಃ ।
 

ಕುಂಭಕಂ ಚ ಸುಷುಮ್ನಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥149
 
೧೪೯ ॥
 
ಅರ್ಥ - ಬಲಭಾಗದ ಮೂಗಿನ ಹೊಳ್ಳೆಯಿಂದ ಒಳಗಿರುವ ಗಾಳಿಯನ್ನು
ಹೊರದೂಡಬೇಕು. ಎಡಭಾಗದ ನಾಸಾರಂಧ್ರದಿಂದ ಶುದ್ಧವಾಯುವನ್ನು ಸೆಳೆದು
ಕೊಂಡು, ಸುಷುಮ್ಮಾನಾನಾಡಿಯಲ್ಲಿ ವಾಯುವನ್ನು ಸ್ಥಿರಗೊಳಿಸಿ, ಹರಿವಾಯುಗಳನ್ನು
ಭಕ್ತಿಯಿಂದ ಸ್ಮರಿಸುತ್ತಿರಬೇಕು.
 

 
ನಾಡೀವಿಚಾರ; ವಿಶೇಷನಾಡಿಗಳು
 

 
ಮೂಲಾಧಾರಂ ಸಮಾರಭ್ಯ ತ್ಯಾವಾಮೂರ್ಧಾನಮೃಜುಸ್ಥಿತಾ ।

ಮಧ್ಯೆಯೇ ಸುಷುಮ್ನಾ ವಿಜೇಜ್ಞೇಯಾ ವಜ್ರಿಕಾಽಽರ್ಯಾ ಪ್ರಕಾಶಿನೀ ॥150 ೧೫೦