This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಕುಳಿತುಕೊಳ್ಳುವುದು 'ಪದ್ಮಾಸನವು'. ಒಂದು ಕಾಲನ್ನು ತೊಡೆಯ ಮೇಲೂ
ಮತ್ತೊಂದನ್ನು ತೊಡೆಯ ಕೆಳಗೂ ಹಾಕಿ ಚಕ್ಕಳಬಕ್ಕಳ ಕೂತರೆ ವೀರಾಸನವೆಂದು
ಕರೆಯಲ್ಪಡುತ್ತದೆ. ಎಂಟು ವಿಧ ಆಸನಗಳಲ್ಲಿ ಈ ಮೂರು ಅತ್ಯಂತ ಶ್ರೇಷ್ಠವಾಗಿರುತ್ತವೆ.
ಈ ಆಸನಗಳನ್ನು ಭೂಮಿಶುದ್ಧಿಮಂತ್ರದೊಂದಿಗೆ ರಚಿಸಿಕೊಳ್ಳಬೇಕು.
 
ರೇಚಕಾದಿಗಳ ಮಾತ್ರಾ ಕಾಲ; ಪ್ರಾಣಾಯಾಮವಿಧಿ
 
ದ್ವಿಗುಣೋತ್ತರಂ ರೇಚಕಾದಿ ಷೋಡಶಾದಿಕ್ರಮೇಣ ತು।
ಮಾತ್ರಾಣಾಂ ಪ್ರಸ್ವವರ್ಣಸ್ಯ ಕಾಲೋ ಮಾತ್ರೇತಿ ಶಬ್ದತೇ ॥1481
 
೨೧೦
 
ಕ್ರಮೇಣೈವಾಭ್ಯಸೇನ್ಮಾತ್ರಾವೃದ್ಧಿಮೇಕಾಗ್ರಧೀಃ ಪುನಃ ।
 
ಅರ್ಥ - ಪ್ರಸ್ವ ಆಕಾರವನ್ನು ಉಚ್ಚಾರಣೆ ಮಾಡುವಷ್ಟು ಕಾಲಕ್ಕೆ (ಸುಮಾರು
ಒಂದು ಸೆಕೆಂಡ್) ಮಾತ್ರಾಕಾಲವೆಂದು ಹೆಸರು. ಇಂತಹ ಹದಿನಾರು ಮಾತ್ರಾ
ಕಾಲದಷ್ಟು ಒಳಗಿರುವ ಗಾಳಿಯನ್ನು ಹೊರಹಾಕಲು ಉಪಯೋಗಿಸಬೇಕು. ಅದರ
ಎರಡರಷ್ಟು ಅಂದರೆ 32 ಮಾತ್ರಾಗಳಷ್ಟು ಕಾಲ ಶುದ್ಧಗಾಳಿಯನ್ನು ಸೆಳೆದು
ಕೊಳ್ಳಬೇಕು. ಪೂರಕಪ್ರಾಣಾಯಾಮದ ಎರಡರಷ್ಟು ಕಾಲ ಅಂದರೆ 64ಮಾತ್ರೆಗಳಷ್ಟು
ಕಾಲ ಕುಂಭಕದಲ್ಲಿ ವಾಯುವನ್ನು ನಿಲ್ಲಿಸಬೇಕು. ಹೀಗೆ ಸಾಧಕರು ರೇಚಕ, ಪೂರಕ,
ಕುಂಭಕಗಳಲ್ಲಿ ಎರಡೆರಡು ಪಟ್ಟು ಹೆಚ್ಚಿಸುತ್ತಾ ಸಿದ್ಧಿಯನ್ನು ಪಡೆಯಬೇಕು.
 
ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾ ಚ ವಾಮತಃ ।
 
ಕುಂಭಕಂ ಚ ಸುಷುಮ್ನಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥149
 
ಅರ್ಥ - ಬಲಭಾಗದ ಮೂಗಿನ ಹೊಳ್ಳೆಯಿಂದ ಒಳಗಿರುವ ಗಾಳಿಯನ್ನು
ಹೊರದೂಡಬೇಕು. ಎಡಭಾಗದ ನಾಸಾರಂಧ್ರದಿಂದ ಶುದ್ಧವಾಯುವನ್ನು ಸೆಳೆದು
ಕೊಂಡು, ಸುಷುಮ್ಮಾನಾಡಿಯಲ್ಲಿ ವಾಯುವನ್ನು ಸ್ಥಿರಗೊಳಿಸಿ, ಹರಿವಾಯುಗಳನ್ನು
ಭಕ್ತಿಯಿಂದ ಸ್ಮರಿಸುತ್ತಿರಬೇಕು.
 
ನಾಡೀವಿಚಾರ; ವಿಶೇಷನಾಡಿಗಳು
 
ಮೂಲಾಧಾರಂ ಸಮಾರಭ್ಯ ತ್ಯಾಮೂರ್ಧಾನಮೃಜುಸ್ಥಿತಾ ।
ಮಧ್ಯೆ ಸುಷುಮ್ನಾ ವಿಜೇಯಾ ವಕಾಽಽರ್ಯಾ ಪ್ರಕಾಶಿನೀ ॥150॥