This page has been fully proofread once and needs a second look.

ಚತುರ್ಥೋಽಧ್ಯಾಯಃ
 
೨೦೯
 
ಶಾಸ್ತ್ರಪ್ರವಚನವನ್ನು ಮಾಡುವವನಿಗಿಂತ ನನಗೆ ಹೆಚ್ಚು ಪ್ರಿಯವುಂಟು ಮಾಡುವ
ಮತ್ತೊಬ್ಬ ಭಕ್ತನು ಇಲ್ಲಿಯವರೆಗೂ ಹುಟ್ಟಿಲ್ಲ. ಮುಂದೆಯೋ ಹುಟ್ಟಲಾರನು.
 

 
ಪ್ರಾಣಾಯಾಮಾದಿಧರ್ಮಗಳಲ್ಲಿ ತಾರತಮ್ಯ;
 

ಶೌಚಾಸನಗಳು ಕೇವಲ ಅಂಗಗಳು
 

 
ಶೌಚಾಸನೇ ತ್ವಂಗಮಾತ್ರಂ ನ ಪೃಥಕ್ ಧರ್ಮಕಾರಣಮ್ ।

ಪ್ರಾಣಾಯಾಮಾದಯಸ್ತುಷ್ಟಿಪರ್ಯಂತಾ ದ್ವಿಗುಣಾಧಿಕಾಃ ॥145
 
೧೪೫ ॥
 
ಸ್ವಾಧ್ಯಾಯಕ್ಕೆ ಪ್ರಾಧಾನ್ಯತೆ
 

 
ಸ್ವಾಧ್ಯಾಯೋಽತಃ ಕೋಟಿಗುಣಸ್ತತೋಽನಂತಗುಣಾ ಹರೇಃ ।

ಪೂಜಾಪತऽತಸ್ತ್ರಿಗುಣಂ ಧ್ಯಾನಮಿತಿ ಧರ್ಮಕ್ರಮಃ ಸ್ಮೃತಃ ॥146 ೧೪೬
 

 
ಅರ್ಥ
 
- ಬಾಹ್ಯಾಂತರಶುದ್ಧಿರೂಪ ಶೌಚಾಸನಗಳು ಸಕಲಕರ್ಮ- ಗಳಿಗೂ
ಅಂಗವಾಗಿರುತ್ತವೆ ಹೊರತು ಸ್ವತಂತ್ರವಾಗಿ ಅವುಗಳೇ ಧರ್ಮಸಾಧನಗಳಲ್ಲ.
ಪ್ರಾಣಾಯಾಮ, ವಿಷಯವೈರಾಗ್ಯ, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,
ತಪಸ್ಸು, ತುಷ್ಟಿ ಇವುಗಳಲ್ಲಿ ಹಿಂದು ಹಿಂದಿನವುಗಳಿಗಿಂತ ಮುಂದು ಮುಂದಿನ
-
ವುಗಳು ಎರಡು ಪಟ್ಟು ಹೆಚ್ಚು ಫಲವುಳ್ಳವುಗಳು.
 

 
ಕಡೆಯಲ್ಲಿ ಹೇಳಿದ ತುಷ್ಟಿ ಗುಣಕ್ಕಿಂತಲೂ ತಾನು ಗುರುಗಳಲ್ಲಿ ನಡೆಸುವ
ಶಾಸ್ತ್ರಾಧ್ಯಯನವು ಕೋಟಿಪಟ್ಟು ಹೆಚ್ಚು ಫಲವುಳ್ಳದ್ದು, ಶಾಸ್ತ್ರಾಧ್ಯಯನಕ್ಕಿಂತಲೂ
ಭಗವಂತನ ಪೂಜೆಯು ಅನಂತಾ- ನಂತ ಫಲಾಧಿಕ್ಯವುಳ್ಳದ್ದು. ಭಗವಂತನ ಪೂಜೆ-
ಗಿಂತಲೂ ಧ್ಯಾನವು ಮೂರು ಪಟ್ಟು ಫಲಾಧಿಕವಾದದ್ದು. ಇವು ಪರಂಪರಯಾ

ಧರ್ಮಸಾಧನಗಳೆನಿಸಿದ ಪ್ರಾಣಾಯಾಮಾದಿಗಳಲ್ಲಿರುವ ಫಲತಾರತಮ್ಯವು.
 

 
ಆಸನಲಕ್ಷಣಗಳು
 

 
ಊರ್ವೋರದಃಧಃ ಪದೋರೂರ್ಧ೦ಧ್ವಂ ವಿಭಾಗೇನೇತಿ ಚ ತ್ರಿಧಾ ।

ಆಸನತ್ರಯಮುದ್ದಿಷ್ಟಂ ಮಂತ್ರಸ್ಮರಣಪೂರ್ವಕಮ್ ॥147
 
೧೪೭ ॥
 
ಅರ್ಥ ತನ್ನ ಎರಡು ಕಾಲುಗಳನ್ನೂ ತೊಡಗಳ ಕೆಳಗೆ ಇಟ್ಟುಕೊಂಡು
ನೇರವಾಗಿ ಕುಳಿತರೆ 'ಸ್ವಸ್ತಿಕಾಸನವು'. ಎರಡು ಕಾಲುಗಳನ್ನು ತೊಡೆಗಳ ಮೇಲಿರಿಸಿ