This page has not been fully proofread.

ಚತುರ್ಥೋಽಧ್ಯಾಯಃ
 
೨೦೯
 
ಶಾಸ್ತ್ರಪ್ರವಚನವನ್ನು ಮಾಡುವವನಿಗಿಂತ ನನಗೆ ಹೆಚ್ಚು ಪ್ರಿಯವುಂಟು ಮಾಡುವ
ಮತ್ತೊಬ್ಬ ಭಕ್ತನು ಇಲ್ಲಿಯವರೆಗೂ ಹುಟ್ಟಿಲ್ಲ. ಮುಂದೆಯೋ ಹುಟ್ಟಲಾರನು.
 
ಪ್ರಾಣಾಯಾಮಾದಿಧರ್ಮಗಳಲ್ಲಿ ತಾರತಮ್ಯ;
 
ಶೌಚಾಸನಗಳು ಕೇವಲ ಅಂಗಗಳು
 
ಶೌಚಾಸನೇ ತ್ವಂಗಮಾತ್ರಂ ನ ಪೃಥಕ್ ಧರ್ಮಕಾರಣಮ್ ।
ಪ್ರಾಣಾಯಾಮಾದಯಸ್ತುಷ್ಟಿಪರ್ಯಂತಾ ದ್ವಿಗುಣಾಧಿಕಾಃ ॥145
 
ಸ್ವಾಧ್ಯಾಯಕ್ಕೆ ಪ್ರಾಧಾನ್ಯತೆ
 
ಸ್ವಾಧ್ಯಾಯೋಽತಃ ಕೋಟಿಗುಣಸ್ತತೋಽನಂತಗುಣಾ ಹರೇಃ ।
ಪೂಜಾಪತಗುಣಂ ಧ್ಯಾನಮಿತಿ ಧರ್ಮಕ್ರಮಃ ಸ್ಮೃತಃ ॥146॥
 
ಅರ್ಥ
 
ಬಾಹ್ಯಾಂತರಶುದ್ಧಿರೂಪ ಶೌಚಾಸನಗಳು ಸಕಲಕರ್ಮಗಳಿಗೂ
ಅಂಗವಾಗಿರುತ್ತವೆ ಹೊರತು ಸ್ವತಂತ್ರವಾಗಿ ಅವುಗಳೇ ಧರ್ಮಸಾಧನಗಳಲ್ಲ.
ಪ್ರಾಣಾಯಾಮ, ವಿಷಯವೈರಾಗ್ಯ, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,
ತಪಸ್ಸು, ತುಷ್ಟಿ ಇವುಗಳಲ್ಲಿ ಹಿಂದು ಹಿಂದಿನವುಗಳಿಗಿಂತ ಮುಂದು ಮುಂದಿನ
ವುಗಳು ಎರಡು ಪಟ್ಟು ಹೆಚ್ಚು ಫಲವುಳ್ಳವುಗಳು.
 
ಕಡೆಯಲ್ಲಿ ಹೇಳಿದ ತುಷ್ಟಿ ಗುಣಕ್ಕಿಂತಲೂ ತಾನು ಗುರುಗಳಲ್ಲಿ ನಡೆಸುವ
ಶಾಸ್ತ್ರಾಧ್ಯಯನವು ಕೋಟಿಪಟ್ಟು ಹೆಚ್ಚು ಫಲವುಳ್ಳದ್ದು, ಶಾಸ್ತ್ರಾಧ್ಯಯನಕ್ಕಿಂತಲೂ
ಭಗವಂತನ ಪೂಜೆಯು ಅನಂತಾನಂತಫಲಾಧಿಕ್ಯವುಳ್ಳದ್ದು. ಭಗವಂತನ ಪೂಜೆ-
ಗಿಂತಲೂ ಧ್ಯಾನವು ಮೂರು ಪಟ್ಟು ಫಲಾಧಿಕವಾದದ್ದು. ಇವು ಪರಂಪರಯಾ
ಧರ್ಮಸಾಧನಗಳೆನಿಸಿದ ಪ್ರಾಣಾಯಾಮಾದಿಗಳಲ್ಲಿರುವ ಫಲತಾರತಮ್ಯವು.
 
ಆಸನಲಕ್ಷಣಗಳು
 
ಊರ್ವೋರದಃ ಪದೋರೂರ್ಧ೦ ವಿಭಾಗೇನೇತಿ ಚ ತ್ರಿಧಾ ।
ಆಸನತ್ರಯಮುದ್ದಿಷ್ಟಂ ಮಂತ್ರಸ್ಮರಣಪೂರ್ವಕಮ್ ॥147
 
ಅರ್ಥ ತನ್ನ ಎರಡು ಕಾಲುಗಳನ್ನೂ ತೊಡಗಳ ಕೆಳಗೆ ಇಟ್ಟುಕೊಂಡು
ನೇರವಾಗಿ ಕುಳಿತರೆ 'ಸ್ವಸ್ತಿಕಾಸನವು'. ಎರಡು ಕಾಲುಗಳನ್ನು ತೊಡೆಗಳ ಮೇಲಿರಿಸಿ