2023-05-06 12:06:12 by jayusudindra
This page has been fully proofread once and needs a second look.
ತದ್ಭೇದಃ ಪೌರುಷಂ ಸೂಕ್ತಂ ವೇದಾಃ ಪುರುಷಸೂಕ್ತಗಾಃ ॥ ೧೫ ॥
ಅರ್ಥ - ಗಾಯತ್ರಿಯ ಇಪ್ಪತ್ತನಾಲ್ಕು 'ತತ್' ಮೊದಲಾದ ಅಕ್ಷರ- ಗಳಿಗೆ ಕೇಶವಾದಿ ಇಪ್ಪತ್ತನಾಲ್ಕು ಮೂರ್ತಿಗಳು ವರ್ಣದೇವತೆ- ಗಳೆನಿಸಿವೆ. ಗಾಯತ್ರಿಯ ಮೂರುಪಾದಗಳಿಂದ ಪುರುಷಸೂಕ್ತದ ಮೂರುವರ್ಗಗಳೂ ಅಭಿವ್ಯಕ್ತವಾದವು. ವರ್ಗತ್ರಯಾತ್ಮಕವಾದ ಪುರುಷಸೂಕ್ತದಿಂದ ಋಕ್,ಯಜುಃ,ಸಾಮವೆಂಬ ಮೂರು
ವೇದಗಳು ಅಭಿವ್ಯಕ್ತವಾದವು.
ವ.ಟೀ.- ಗಾಯತ್ರ್ಯಕ್ಷರದೇವತಾಃ ಕೇಶವಾದಿಕೃಷ್ಣಾಂತಾಃ ಚತುರ್ವಿಂಶತಿಮೂರ್ತಯಃ । ತದ್ಭೇದಃ = ಗಾಯತ್ರೀಭೇದಃ ।
ಟೀಕಾರ್ಥ- ಗಾಯತ್ರಿಯಲ್ಲಿರುವ ಇಪ್ಪತ್ತನಾಲ್ಕು ತತ್ಸವಿತುಃ ಮೊದಲಾದ ಅಕ್ಷರಗಳಿಗೆ ಕೇಶವ ಮೊದಲಾಗಿಶ್ರೀಕೃಷ್ಣಪರ್ಯಂತ ರೂಪಗಳು ದೇವತೆಗಳು. ತದ್ಭೇದಃ ಎಂದರೆ ತ್ರಿಪಾದವುಳ್ಳ ಗಾಯತ್ರಿ ಯಿಂದ ಭಿನ್ನವೆಂದರ್ಥ; ಅಭಿವ್ಯಕ್ತವಾಗಿವೆ ಎಂದು ಭಾವ.
ವೈದಿಕಾಸ್ಸರ್ವಶಬ್ದಾಶ್ಚ ತಸ್ಮಾತ್ ಸರ್ವಾಭಿಧೋ ಹ್ಯಹಮ್ ।
ಪಂಚಾಶದ್ವರ್ಣಭಿನ್ನಾಶ್ಚ ಸರ್ವಶಬ್ದಾ ಅತೋಽಪಿ ಚ ॥ ೧೬ ॥
ಅರ್ಥ - ಪುರಾಣೇತಿಹಾಸಾದಿಗಳು, ವಿಷ್ಣುಷಡಕ್ಷರ ಮೊದಲಾದ ಮಂತ್ರಪ್ರಪಂಚ, ಸಂಸ್ಕೃತಶಬ್ದಗಳೆಲ್ಲವೂ ವೇದಗಳಿಂದಲೇ ಅಭಿವ್ಯಕ್ತಗಳಾಗಿವೆ. ಆದ್ದರಿಂದಲೇ ನಾನು ಸರ್ವಶಬ್ದವಾಚ್ಯನಾಗಿ- ದ್ದೇನೆ. ನನ್ನನ್ನು ಪ್ರಧಾನವಾಗಿ ತಿಳಿಸುವ ಓಂಕಾರದಿಂದ
ಅಭಿವ್ಯಕ್ತಿ ಹೊಂದಿದ ಐವತ್ತು ಅಕ್ಷರಗಳೇ ಶಬ್ದಪ್ರಪಂಚವನ್ನೆಲ್ಲ ವ್ಯಾಪಿಸಿರುವುದರಿಂದಲೂ ನಾನುಸರ್ವಶಬ್ದವಾಚ್ಯನಾಗಿರುವೆನು.
ವ.ಟೀ.- ಯುಕ್ತಾಂತರ ಚಾಹ - ಪಂಚಾಶದಿತಿ ॥ ಅತಶ್ಚ ಸರ್ವ- ಶಬ್ದಾಭಿಧೇಯೋsಸ್ತೀತಿ ಸಂಬಂಧಃ ।
ಟೀಕಾರ್ಥ –ಸಮಸ್ತಶಬ್ದಪ್ರಪಂಚವೂ ವೇದಗಳಿಂದಲೇ ಅಭಿವ್ಯಕ್ತ ಗಳಾಗಿವೆ. ಆದ್ದರಿಂದ ನಾನು ಸರ್ವಶಬ್ದವಾಚ್ಯನಾಗಿರುವೆನು. ಇದು ಸರ್ವಶಬ್ದವಾಚ್ಯತ್ವದಲ್ಲಿ ಒಂದು ಯುಕ್ತಿಯಾಯಿತು. 'ಪಂಚಾಶತ್' ಎಂಬುದರಿಂದ ಮತ್ತೊಂದು ಯುಕ್ತಿಯನ್ನು ಹೇಳುತ್ತಿರುವರು. ನನ್ನನ್ನು ತಿಳಿಸುವ ಓಂಕಾರದಿಂದ ಅಭಿವ್ಯಕ್ತ- ಗಳಾದ ಐವತ್ತು ಅಕ್ಷರಗಳಿಂದಲೇ ಶಬ್ದ ಪ್ರಪಂಚವೆಲ್ಲ ತುಂಬಿರು ವುದರಿಂದಲೂ ನಾನು ಸರ್ವಶಬ್ದವಾಚ್ಯನೆಂದು ಭಾವ.
ಪ್ರಣವಾದಿಮಂತ್ರಗಳ ಋಷಿದೇವತೆಗಳು