This page has been fully proofread once and needs a second look.

೨೦೮
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಪ್ರವಚನದ ಶ್ರೇಷ್ಠತೆ
 

 
ವರಂ ದಶಗುಣಂ ತಸ್ಮಾದ್ ವ್ಯಾಖ್ಯೆಕಸ್ಯ ಶತೋತ್ತರಾ

ಅಪರೋಕ್ಷದೃಶಾऽಪ್ಯೇಷಾ ಕರ್ತವ್ಯಾ ವಿಷ್ಣುತುಷ್ಟಿದಾ 142
 

 
ಅರ್ಥ
 
-ಧ್ಯಾನಕ್ಕಿಂತಲೂ ಶಾಸ್ತ್ರಾವಲೋಕನಾದಿನಿದಿಧ್ಯಾಸನವು ಶ್ರೇಷ್ಠವು.
ಹೇಗೆಂದರೆ ವಿಷ್ಣುಶಾಸ್ತ್ರವಾದ ಭಾರತಭಾಗವತಾದಿ ಗ್ರಂಥಾವಲೋಕನ ಪಾಠ-
ಪ್ರವಚನಾದಿಗಳಿಂದ ಭಗವಂತನು ಸರ್ವೋತ್ತಮನೆಂದು ಈ ಶಾಸ್ತ್ರಗಳೆಲ್ಲ ಶ್ರೀಹರಿ-
ಸರ್ವೋತ್ತಮ- ಪ್ರತಿಪಾದಕಗಳೆಂದು ನಿಶ್ಚಯವಾಗುವುದರಿಂದ ಧ್ಯಾನಕ್ಕಿಂತಲೂ
 

ಶಾಸ್ತ್ರವಿಚಾರವೇ ಹತ್ತುಪಟ್ಟು ಮಿಗಿಲಾಗಿರುತ್ತದೆ.
 

 
ತಾನೊಬ್ಬನೇ ಶಾಸ್ತ್ರಾವಲೋಕನ ಮಾಡುವುದಕ್ಕಿಂತ ಅದನ್ನೇ ಒಬ್ಬ ಶಿಷ್ಯನಿಗಾ-
ದರೂ ಪಾಠ ಹೇಳುವುದರಲ್ಲಿ ನೂರುಪಟ್ಟು ಫಲ ಅಧಿಕವಾಗಿರುತ್ತದೆ. ಅಪರೋಕ್ಷ
ಜ್ಞಾನಿಯಾದವನೂ ಸಹ ವಿಷ್ಣುಪ್ರೀತಿಯನ್ನುಂಟುಮಾಡುವ ಶಾಸ್ತ್ರಪಾಠಪ್ರವಚನಾದಿ-

ಗಳನ್ನು ನಡೆಸುತ್ತಲೇ ಇರಬೇಕು'.
 
[^1]
 
ಪ್ರವಚನದ ಸಾಫಲ್ಯತೆ; ಶ್ರವಣಯೋಗ್ಯ ಅಧಿಕಾರಿ

 
ಯ ಇಮಂ ಪರಮಂ ಗುಹ್ಯಂ ಮದ್ದಷ್ಟಭಕ್ತೇಷ್ವಭಿಧಾಸ್ತಿ ।

ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯ ಸಂಶಯಃ ॥143 ೧೪೩

 
ನ ಚ ತಸ್ಮಾನ್‌ಮನುಷ್ಯೇಷು ಕಶ್ಚಿನ್ ಮೇ ಪ್ರಿಯಕೃತ್ತಮಃ ।

ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತಮೋ ಭುವಿ II144 ೧೪೪
 

 
ಅರ್ಥ - ಯಾರು ಈ ಪರಮಗೋಪ್ಯವಾದ ಸರ್ವಶಾಸ್ತ್ರಾರ್ಥ- ನಿರ್ಣಯವನ್ನು
ನನ್ನ ಭಕ್ತರಲ್ಲಿ ಪ್ರವಚನಾದಿಗಳಿಂದ ಉಪದೇಶಿಸುವನೋ ಅಂತಹ ಭಕ್ತನು ನನ್ನಲ್ಲಿ
ಉತ್ತಮವಾದ ಭಕ್ತಿಯನ್ನು ಮಾಡಿ ನನ್ನನ್ನೇ ಹೊಂದುತ್ತಾನೆ. ಪ್ರವಚನದಿಂದ

ಭಗವದ್ಭಕ್ತಿ, ಭಗವದ್ಭಕ್ತಿಯಿಂದ ಭಗವಂತನ ಸಾನ್ನಿಧ್ಯಲಾಭ- ವೆಂದು ಭಾವ.
 

 
[^
1]. ಸ್ವಾಧ್ಯಾಯ ಹಾಗೂ ಪ್ರವಚನವನ್ನು ನಿರಂತರ ಮಾಡುತ್ತಲೇ ಇರಬೇಕು. ಶ್ರವಣಾದಿಗಳಿರದೆ
ಒಂದು ಕ್ಷಣವನ್ನೂ ವ್ಯರ್ಥಮಾಡಬಾರದು. ಈ ರೀತಿ ಸ್ವಾಧ್ಯಾಯ, ಪ್ರವಚನ ಮಾಡಿದವನೇ
ನಿರಂತರ ತಪಸ್ವೀ ಎನಿಸುವನು. 'ಸ್ವಾಧ್ಯಾಯಪ್ರವಚನೇ ಏವೇತಿ ನಾಕೋ ಮೌದ್ಗಲ್ಯ:ಯಃ ತದ್ಧಿ
ತಪಃ ತದ್ಧಿ ತಪಃ' – ತೈತ್ತರೀಯ ಉಪನಿಷತ್