2023-04-27 14:07:00 by ambuda-bot
This page has not been fully proofread.
೨೦೮
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಪ್ರವಚನದ ಶ್ರೇಷ್ಠತೆ
ವರಂ ದಶಗುಣಂ ತಸ್ಮಾದ್ ವ್ಯಾಖ್ಯೆಕಸ್ಯ ಶತೋತ್ತರಾ
ಅಪರೋಕ್ಷದೃಶಾಷಾ ಕರ್ತವ್ಯಾ ವಿಷ್ಣುತುಷ್ಟಿದಾ 142
ಅರ್ಥ
ಧ್ಯಾನಕ್ಕಿಂತಲೂ ಶಾಸ್ತ್ರಾವಲೋಕನಾದಿನಿದಿಧ್ಯಾಸನವು ಶ್ರೇಷ್ಠವು.
ಹೇಗೆಂದರೆ ವಿಷ್ಣುಶಾಸ್ತ್ರವಾದ ಭಾರತಭಾಗವತಾದಿ ಗ್ರಂಥಾವಲೋಕನ ಪಾಠ-
ಪ್ರವಚನಾದಿಗಳಿಂದ ಭಗವಂತನು ಸರ್ವೋತ್ತಮನೆಂದು ಈ ಶಾಸ್ತ್ರಗಳೆಲ್ಲ ಶ್ರೀಹರಿ-
ಸರ್ವೋತ್ತಮಪ್ರತಿಪಾದಕಗಳೆಂದು ನಿಶ್ಚಯವಾಗುವುದರಿಂದ ಧ್ಯಾನಕ್ಕಿಂತಲೂ
ಶಾಸ್ತ್ರವಿಚಾರವೇ ಹತ್ತುಪಟ್ಟು ಮಿಗಿಲಾಗಿರುತ್ತದೆ.
ತಾನೊಬ್ಬನೇ ಶಾಸ್ತ್ರಾವಲೋಕನ ಮಾಡುವುದಕ್ಕಿಂತ ಅದನ್ನೇ ಒಬ್ಬ ಶಿಷ್ಯನಿಗಾ-
ದರೂ ಪಾಠ ಹೇಳುವುದರಲ್ಲಿ ನೂರುಪಟ್ಟು ಫಲ ಅಧಿಕವಾಗಿರುತ್ತದೆ. ಅಪರೋಕ್ಷ
ಜ್ಞಾನಿಯಾದವನೂ ಸಹ ವಿಷ್ಣುಪ್ರೀತಿಯನ್ನುಂಟುಮಾಡುವ ಶಾಸ್ತ್ರಪಾಠಪ್ರವಚನಾದಿ-
ಗಳನ್ನು ನಡೆಸುತ್ತಲೇ ಇರಬೇಕು'.
ಪ್ರವಚನದ ಸಾಫಲ್ಯತೆ; ಶ್ರವಣಯೋಗ್ಯ ಅಧಿಕಾರಿ
ಯ ಇಮಂ ಪರಮಂ ಗುಹ್ಯಂ ಮದ್ದಷ್ಟಭಿಧಾಸ್ಕತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯ ಸಂಶಯಃ ॥143॥
ನ ಚ ತಸ್ಮಾನ್‌ಮನುಷ್ಯಷು ಕಶ್ಚಿನ್ ಮೇ ಪ್ರಿಯಕೃತ್ತಮಃ ।
ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತಮೋ ಭುವಿ II144॥
ಅರ್ಥ - ಯಾರು ಈ ಪರಮಗೋಪ್ಯವಾದ ಸರ್ವಶಾಸ್ತ್ರಾರ್ಥನಿರ್ಣಯವನ್ನು
ನನ್ನ ಭಕ್ತರಲ್ಲಿ ಪ್ರವಚನಾದಿಗಳಿಂದ ಉಪದೇಶಿಸುವನೋ ಅಂತಹ ಭಕ್ತನು ನನ್ನಲ್ಲಿ
ಉತ್ತಮವಾದ ಭಕ್ತಿಯನ್ನು ಮಾಡಿ ನನ್ನನ್ನೇ ಹೊಂದುತ್ತಾನೆ. ಪ್ರವಚನದಿಂದ
ಭಗವದ್ಭಕ್ತಿ, ಭಗವದ್ಭಕ್ತಿಯಿಂದ ಭಗವಂತನ ಸಾನ್ನಿಧ್ಯಲಾಭವೆಂದು ಭಾವ.
1. ಸ್ವಾಧ್ಯಾಯ ಹಾಗೂ ಪ್ರವಚನವನ್ನು ನಿರಂತರ ಮಾಡುತ್ತಲೇ ಇರಬೇಕು. ಶ್ರವಣಾದಿಗಳಿರದೆ
ಒಂದು ಕ್ಷಣವನ್ನೂ ವ್ಯರ್ಥಮಾಡಬಾರದು. ಈ ರೀತಿ ಸ್ವಾಧ್ಯಾಯ, ಪ್ರವಚನ ಮಾಡಿದವನೇ
ನಿರಂತರ ತಪಸ್ವೀ ಎನಿಸುವನು. 'ಸ್ವಾಧ್ಯಾಯಪ್ರವಚನೇ ಏವೇತಿ ನಾಕೋ ಮೌಲ್ಯ: ತದ್ಧಿ
ತಪಃ ತದ್ಧಿತಪಃ' – ತೈತ್ತರೀಯ ಉಪನಿಷತ್