This page has been fully proofread once and needs a second look.

ಆಸನಾದಿಗಳಲ್ಲಿ ತಾರತಮ್ಯ
 
ಆಸಾ ಶೌಚಂ ಪ್ರಾಣಯಮೋ ನಿಷ್ಪರಿಗ್ರಹಪೂರ್ವಕಾಃ ।
ತಪ ಆದ್ಯಾಃ ಕ್ರಮಾತ್ ಸರ್ವೇ ಉತ್ತರೋತ್ತರತೋSಧಿಕಾಃ ।
ಸರ್ವಸ್ಮಾತ್ ಶ್ರವಣಾದ್ಯಾಸ್ತು ಮುಖ್ಯಾ ಮುಕ್ತಿಪ್ರಸಾಧನೇ II ೧೪೦ ॥
 
ಅಜ್ಞಸ್ಯ ಶ್ರವಣಂ ಶ್ರೇಷ್ಠಮ್ ಅಯುಕ್ತೇಃ ಮನನಂ ತಥಾ ।
ಧ್ಯಾನಂ ನಿಶ್ಚಿತತತ್ತ್ವಸ್ಯ ತಸ್ಮಾತ್ ಶಾಸ್ತ್ರಾವಮರ್ಶನಮ್ ॥ ೧೪೧ ॥
 
ಅರ್ಥ - ಆಸನ, ಶೌಚ, ಪ್ರಾಣಾಯಾಮ, ವೈರಾಗ್ಯ, ಅಹಿಂಸೆ, ಸತ್ಯ,
ಆಸ್ತೇಯ ಮೊದಲಾದವುಗಳು, ತಪಸ್ಸು, ತುಷ್ಟಿ ಇವುಗಳೆಲ್ಲವೂ ಕ್ರಮವಾಗಿ ಮೊದಲು ಮೊದಲು ಉಕ್ತವಾದವುಗಳಿಗಿಂತ ಮುಂದು ಮುಂದು ಹೇಳಿದವುಗಳು ಶ್ರೇಷ್ಠವಾಗಿರುತ್ತವೆ.
 
ಹಿಂದೆ ಹೇಳಿದ ಎಲ್ಲಾ ಆಸನಾದಿಗಳಿಗಿಂತಲೂ ಶ್ರವಣ, ಮನನ, ಶಾಸ್ತ್ರಾರ್ಥವಿಮರ್ಶೆಯೆಂಬ ನಿದಿಧ್ಯಾಸನಗಳು ಮೋಕ್ಷಸಾಧನೆ ಯಲ್ಲಿ ಪ್ರಧಾನಸಾಧನಗಳು. ಶಾಸ್ತ್ರಜ್ಞಾನರಹಿತರಾದವರಿಗೆ ಗುರುಮುಖದಿಂದ ಶಾಸ್ತ್ರಾರ್ಥಶ್ರವಣವೇ ಮುಖ್ಯವಾಗಿರುತ್ತವೆ ಹೊರತು ಮನನಾದಿಗಳಲ್ಲ. ಶಾಸ್ತ್ರಶ್ರವಣಮಾಡಿದ್ದರೂ ಶಾಸ್ತ್ರ-
ಪ್ರಮೇಯದಲ್ಲಿ ಸಂಶಯವಿರುವವನಿಗೆ ದಾರ್ಢ್ಯಕ್ಕಾಗಿ ಮನನವು ಮುಖ್ಯವಾಗಿರುತ್ತದೆ.
 
ಶ್ರವಣ-ಮನನಾದಿಗಳಿಂದ ಅಜ್ಞಾನ, ಸಂಶಯ, ವಿಪರ್ಯಯ- ಗಳನ್ನು ಕಳೆದುಕೊಂಡು ತತ್ವನಿಶ್ಚಯವುಳ್ಳವನಿಗೆ ಧ್ಯಾನವು ಹಾಗೂ ಶಾಸ್ತ್ರಾವಿಮರ್ಶವು ಮಾಡಬೇಕು. (???))
 
ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾ ಚ ವಾಮತಃ ।
ಕುಂಭಕಶ್ಚ ಸುಷುಮ್ನಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥
ಪ್ರಾಣಾಯಾಮ ಮಾಡುವಾಗ ಮಂತ್ರ, ಮಂತ್ರದೇವತೆ, ವಾಯು, ಭಗವಂತ ಇವರನ್ನು ಸ್ಮರಿಸುತ್ತಾ ಇದ್ದರೆ ಈ ಪ್ರಾಣಾಯಾಮ 'ನಿದಿಧ್ಯಾಸನ'ವೆನಿಸುತ್ತದೆ.
ಕೇವಲ ವಿಷ್ಣುವಿನ ಸ್ಮರಣೆ ಮಾತ್ರವಿದ್ದರೆ ಇದು 'ಧ್ಯಾನ' ಎಂಬ ಪ್ರಕಾರದ ಪ್ರಾಣಾಯಾಮ.
ಭಗವಂತನ ಸ್ಮರಣೆಯಿಲ್ಲದೆ ಕೇವಲ ಮಂತ್ರಸ್ಮರಣೆಯು 'ನಿಯಮ'ವೆನಿಸುತ್ತದೆ.