This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಆಸನಾದಿಗಳಲ್ಲಿ ತಾರತಮ್ಯ
 

 
ಆಸಾ ಶೌಚಂ ಪ್ರಾಣಯ
 
ಮೋ ನಿಷ್ಪರಿಗ್ರಹಪೂರ್ವಕಾಃ ।
 

ತಪ ಆದ್ಯಾಯಾಃ ಕ್ರಮಾತ್ ಸರ್ವೆವೇ ಉತ್ತರೋತ್ತರತೋSಧಿಕಾಃ ।

ಸರ್ವಸ್ಮಾತ್ ಶ್ರವಣಾದ್ಯಾಸ್ತು ಮುಖ್ಯಾ ಮುಕ್ತಿಪ್ರಸಾಧನೇ II140
 
೧೪೦ ॥
 
ಅಜ್ಞಸ್ಯ ಶ್ರವಣಂ ಶ್ರೇಷ್ಠಮ್ ಅಯುಕ್ತಃತೇಃ ಮನನಂ ತಥಾ ।

ಧ್ಯಾನಂ ನಿಶ್ಚಿತತತ್ತ್ವಸ್ಯ ತಸ್ಮಾತ್ ಶಾಸ್ತಾತ್ರಾವಮರ್ಶನಮ್ 141
 
॥ ೧೪೧ ॥
 
ಅರ್ಥ
-
 
ಅರ್ಥ
ಆಸನ, ಶೌಚ, ಪ್ರಾಣಾಯಾಮ, ವೈರಾಗ್ಯ, ಅಹಿಂಸೆ, ಸತ್ಯ,

ಆಸ್ತೇಯ ಮೊದಲಾದವುಗಳು, ತಪಸ್ಸು, ತುಷ್ಟಿ ಇವುಗಳೆಲ್ಲವೂ ಕ್ರಮವಾಗಿ
ಮೊದಲು ಮೊದಲು ಉಕ್ತವಾದವುಗಳಿಗಿಂತ ಮುಂದು ಮುಂದು ಹೇಳಿದವುಗಳು
ಶ್ರೇಷ್ಠವಾಗಿರುತ್ತವೆ.
 
೨೦೭
 

 
ಹಿಂದೆ ಹೇಳಿದ ಎಲ್ಲಾ ಆಸನಾದಿಗಳಿಗಿಂತಲೂ ಶ್ರವಣ, ಮನನ, ಶಾಸ್ತ್ರಾರ್-
ವಿಮರ್ಶೆಯೆಂಬ ನಿದಿಧ್ಯಾಸನಗಳು ಮೋಕ್ಷಸಾಧನೆ ಯಲ್ಲಿ ಪ್ರಧಾನಸಾಧನಗಳು.
ಶಾಸ್ತ್ರಜ್ಞಾನರಹಿತರಾದವರಿಗೆ ಗುರುಮುಖದಿಂದ ಶಾಸ್ತ್ರಾರ್ಥಶ್ರವಣವೇ ಮುಖ್ಯ-
ವಾಗಿರುತ್ತವೆ ಹೊರತು ಮನನಾದಿಗಳಲ್ಲ. ಶಾಸ್ತ್ರಶ್ರವಣಮಾಡಿದ್ದರೂ ಶಾಸ್ತ್ರ-

ಪ್ರಮೇಯದಲ್ಲಿ ಸಂಶಯವಿರುವವನಿಗೆ ದಾರ್ಡ್ಢ್ಯಕ್ಕಾಗಿ ಮನನವು ಮುಖ್ಯವಾಗಿ-
ರುತ್ತದೆ.
 

 
ಶ್ರವಣ-ಮನನಾದಿಗಳಿಂದ ಅಜ್ಞಾನ, ಸಂಶಯ, ವಿಪರ್ಯಯ- ಗಳನ್ನು ಕಳೆದು
ಕೊಂಡು ತತ್ವನಿಶ್ಚಯವುಳ್ಳವನಿಗೆ ಧ್ಯಾನವು ಹಾಗೂ
ಹಾಗೂ
ಶಾಸ್ತ್ರಾವಿಮರ್ಶವು
ಮಾಡಬೇಕು. (???))
 

 
ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾ ಚ ವಾಮತಃ ।

ಕುಂಭಕಶ್ಚ ಸುಷುಮ್ಮಾನಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥
 

ಪ್ರಾಣಾಯಾಮ ಮಾಡುವಾಗ ಮಂತ್ರ, ಮಂತ್ರದೇವತೆ, ವಾಯು, ಭಗವಂತ ಇವರನ್ನು
ಸ್ಮರಿಸುತ್ತಾ ಇದ್ದರೆ ಈ ಪ್ರಾಣಾಯಾಮ 'ನಿದಿಧ್ಯಾಸನ'ವೆನಿಸುತ್ತದೆ.
 

ಕೇವಲ ವಿಷ್ಣುವಿನ ಸ್ಮರಣೆ ಮಾತ್ರವಿದ್ದರೆ ಇದು 'ಧ್ಯಾನ' ಎಂಬ ಪ್ರಕಾರದ ಪ್ರಾಣಾಯಾಮ.
 

ಭಗವಂತನ ಸ್ಮರಣೆಯಿಲ್ಲದೆ ಕೇವಲ ಮಂತ್ರಸ್ಮರಣೆಯು 'ನಿಯಮ'ವೆನಿಸುತ್ತದೆ.