This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಅರ್ಥ - ವೀರಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದವು ಆಸನಗಳು.
 
೨೦೬
 
ಪ್ರಾಣಾಯಾಮ
 
ರೇಚಕಃ ಪೂರಕಶೈವ ಕುಂಭಕ ಧಾ ಸ್ಮೃತಃ ।
ಪ್ರಾಣಾಯಾಮಃ ಸ್ಮೃತಿಂ ವಿಷ್ಟೊರ್ವಿನಾ ನಿಯಮ ಉಚ್ಯತೇ ॥138॥
 
ಅಧೀತಿಸ್ಮೃತಿಯು ಹಿ ನಿದಿಧ್ಯಾಸನಮೇವ ಹಿ
 
ಪ್ರಾಣಾಯಾಮೇಽಪಿ ವಿಪ್ಲೋರ್ಯತ್ ಸ್ಮರಣಂ ಧ್ಯಾನಮೇವ ಹಿII139
 
ಅರ್ಥ ಪ್ರಾಣಾಯಾಮವು ರೇಚಕ, ಪೂರಕ, ಕುಂಭಕವೆಂದು ಮೂರುವಿಧ.
ವಿಷ್ಣುವಿನ ಸ್ಮರಣಪೂರ್ವಕವಾದ ವೇದಾಧ್ಯಯನಾದಿಗಳು, ಮತ್ರೋಚ್ಚಾರಣ,
ದೇವತಾಸ್ಮರಣೆ ಇವುಗಳಿಂದ ಕೂಡಿರುವ ಪ್ರಾಣಾಯಾಮವು ನಿದಿಧ್ಯಾಸನದಲ್ಲಿ
ಸೇರುತ್ತದೆ. ವಿಷ್ಣುಸ್ಮರಣೆ ಇಲ್ಲದೆ ಕೇವಲ ವೇದಾಧ್ಯಯನಾದಿರೂಪವಾದ
ಪ್ರಾಣಾಯಾಮವು 'ನಿಯಮ'ದಲ್ಲಿ ಸೇರುತ್ತದೆ. ಪ್ರಾಣಾಯಾಮದಲ್ಲಿಯೂ
ವಿಷ್ಣುವಿನ ಸ್ಮರಣೆ ಮಾತ್ರವೇ ಇದ್ದರೆ ಪ್ರಾಣಾಯಾಮವು ಧ್ಯಾನವೆನಿಸುತ್ತದೆ.
 
1. ಆಸನಗಳು - 'ಆಸೀನಃ ಸಂಭವಾತ್' ಎಂಬ ಬ್ರಹ್ಮಸೂತ್ರವು ಆಸನದಲ್ಲಿ ಕುಳಿತೇ ಜಪಾದಿಗಳನ್ನು
ವಿಧಿಸುತ್ತದೆ.
 
ಆಸನಗಳು ಪದ್ಮ, ಭದ್ರ, ಸ್ವಸ್ತಿಕಾ, ವಜ್ರ, ವೀರಾಸನವೆಂಬ ಐದುಬಗೆಯಲ್ಲಿವೆ ಎಂದು ಅನ್ಯತ್ರ
 
ಹೇಳಿದೆ.
 
೧. ವೀರಾಸನ
 
ಒಂದು ಕಾಲನ್ನು ತೊಡೆಯ ಮೇಲೂ ಮತ್ತೊಂದು ಕಾಲನ್ನು ತೊಡೆಯ
ಕೆಳಗೂ ಇರಿಸಿ ನೇರವಾಗಿ ಕುಳಿತರೆ 'ವೀರಾಸನ', ಶ್ರೀಮದಾಚಾರ್ಯರು, ಟೀಕಾರಾಯರು
ಇದೇ ಆಸನದಲ್ಲಿ ಕುಳಿತಿರುತ್ತಾರೆ.
 
-
 
೨. ಪದ್ಮಾಸನ - ಬಲದ ತೊಡೆಯ ಮೇಲೆ ಎಡಗಾಲು, ಎಡತೊಡೆಯ ಮೇಲೆ ಬಲಗಾಲನ್ನಿರಿ-
ಸಿದರೆ ಪದ್ಮಾಸನವು.
 
೩. ಸ್ವಸ್ತಿಕಾಸನ
ಕೊಳ್ಳುವುದು.
 
2. ಪ್ರಾಣಾಯಾಮ- ಪ್ರಾಣವೆಂದರೆ ವಾಯುವು. ಅದನ್ನು ನಿರೋಧಿಸುವುದೇ ಪ್ರಾಣಾಯಾಮ.
ದಕ್ಷಿಣದ ಹೊಳ್ಳೆಯಿಂದ ವಾಯುವನ್ನು ಹೊರಬಿಡುವುದು ರೇಚಕವು. ಎಡ ಹೊಳ್ಳೆಯಿಂದ
ವಾಯುವನ್ನು ಸೆಳೆದುಕೊಳ್ಳುವುದು ಪೂರಣವು. ಸುಷುಮ್ನಾನಾಡಿಯಲ್ಲಿ ವಾಯುವನ್ನು
ನಿರೋಧ ಮಾಡುವುದೇ ಕುಂಭಕ ಎಂದು ಕರೆಯಲ್ಪಡುತ್ತದೆ.
 
-Ve
 
ಜಾನು ಹಾಗೂ ತೊಡೆಗಳ ಮಧ್ಯದಲ್ಲಿ ಪಾದಗಳಿರುವಂತೆ ಕುಳಿತು-