This page has not been fully proofread.

ಚತುರ್ಥೋಽಧ್ಯಾಯಃ
 
ಎಂದು ನಾಲ್ಕು ವಿಧವಾದ ಅಂಗಗಳಿವೆ.
 
ಯಮ, ನಿಯಮ, ಆಸನಗಳು
 
ಅಹಿಂಸಾ ಸತ್ಯಮಸ್ತೇಯಂ ಬ್ರಹ್ಮಚರ್ಯಾಪರಿಗ್ರಹ
ಯಮಾಃ ಶೌಚಂ ತಪಸ್ತುಷ್ಟಿ ಸ್ವಾಧ್ಯಾಯೋ ಹರಿಪೂಜನಮ್ ।
 
ನಿಯಮಾ
 
ಅರ್ಥ ಕಾಯಾ, ವಾಚಾ, ಮನಸಾ ಸಮಸ್ತಪ್ರಾಣಿಗಳಿಗೂ ಹಿಂಸೆ ಮಾಡ
ದಿರುವುದೇ ಅಹಿಂಸೆಯು, ಸಮಸ್ತಪ್ರಾಣಿಗಳಿಗೂ ಹಿತವನ್ನು ಬಯಸುವುದೇ ಸತ್ಯವು.
ಪರರ ಸ್ವತ್ತುಗಳನ್ನು ಅಪಹರಿಸದಿರುವುದೇ ಆಸ್ತೇಯ, ಸರ್ವಾವಸ್ಥೆಗಳಲ್ಲಿಯೂ
ಎಂಟುವಿಧವಾದ ಮೈಥುನತ್ಯಾಗವೇ ಬ್ರಹ್ಮಚರ್ಯವು. ವಿಷಯವೈರಾಗ್ಯವೇ
ಅಪರಿಗ್ರಹವು. ಹೀಗೆ ಐದು ನಿಯಮಗಳು.
 
ಬಾಹ್ಯ-ಅಭ್ಯಂತರ ಶುದ್ದಿ, ಜಪ, ಹೋಮ, ಅತಿಥಿಸತ್ಕಾರಾದಿರೂಪವಾದ
ತಪಸ್ಸು, ವಿಷಯಾಲಂಬುದ್ದಿ, ವೇದಾಧ್ಯಯನ, ಗುರುಸೇವೆ, ಭಗವಂತನ ಪೂಜೆ
ಇವುಗಳು ನಿಯಮಗಳು.
 
.............
 
೨೦೫
 
ಆಸನಗಳು
 
ವೀರಪದ್ಮ ಚ ಸ್ವಸ್ತಿಕಾದ್ಯಾನಿ ಚಾಸನಮ್ ॥137
 
1. ಯಮನಿಯಮಗಳಲ್ಲಿ ಪ್ರಮಾಣಗಳು -
 
-
 
ಅಹಿಂಸಾ - ಭೂತಪೀಡಾ ಹ್ಯಹಿಂಸಾ ಸ್ಯಾದ್ ಅಹಿಂಸಾ ಧರ್ಮ ಉತ್ತಮಃ ।
ಸತ್ಯ - ಯಸ್ಪೂತಹಿತಮತ್ಯಂತಂ ವಚಃ ಸತ್ಯಸ್ಯ ಲಕ್ಷಣಮ್ ।
ಬ್ರಹ್ಮಚರ್ಯ – ಮೈಥುನಸ್ಯ ಪರಿತ್ಯಾಗೋ ಬ್ರಹ್ಮಚರ್ಯ೦ ತದಷ್ಟಧಾ ।
ಶೌಚ – ಶೌಚಂ ತು ದ್ವಿವಿಧಂ ಪ್ರೋಕ್ತಂ ಬಾಹ್ಯಮಾಭ್ಯಂತರಂ ತಥಾ ।
ಮೃಲಾಭ್ಯಾಂ ಸ್ಮೃತಂ ಬಾಹ್ಯಂ ಭಾವಶುದ್ಧಿರಥಾಂತರಮ್ ॥
ತೃಪ್ತಿ - ಯಥಾ ಕಥಂಚಿತ್ ಪ್ರಾಪ್ಯಾಚ ಸಂತೋಷಃ ತುಷ್ಪರಿಷ್ಯತೇ ।
ತಪಸ್ಸು - ಮನಸಶ್ಚಂದ್ರಿಯಾಣಾಂ ಚ ಐಕಾಗ್ರಂ ತಪ ಉಚ್ಯತೇ ।
ಹರಿಪೂಜೆ - ವೈದಿಕೋ ತಾಂತ್ರಿಕೋ ಮಿಶ್ರ ವಿಷ್ಟೋರ್ವೈ ತ್ರಿವಿಧೋ ಮಖಃ ।