This page has not been fully proofread.

ಚತುರ್ಥೋಽಧ್ಯಾಯಃ
 
ಏಕಸ್ಯ ಶಿಷ್ಯತಾಂ ಪ್ರಾಪ್ಯ ತದಾಜ್ಞಾಂ ನ ವಿನಾ ಸಮಮ್ ।
ಅವರಂ ವಾ ವ್ರಜೇದುಚ್ಚಗುಣಸ್ಟೇನ್ ನೈವ ದುಷ್ಯತಿ 1113311
 
೨೦೩
 
ಅರ್ಥ - ಒಬ್ಬ ಗುರುವಿನ ಶಿಷ್ಯತನವನ್ನು ಹೊಂದಿ, ಅವರ ಅನುಮತಿಯಿಲ್ಲದೆ
ಅವರ ಸಮಾನನನ್ನಾಗಲೀ, ಅವರಿಗಿಂತ ಅಧಮಗುರುಗಳನ್ನಾಗಲೀ ಹೊಂದ-
ಬಾರದು. ಹಿಂದಿನ ಗುರುಗಳು ಅನುಮತಿ ನೀಡಿದಲ್ಲಿ ಹೊಂದಬಹುದು. ಆದರೆ
ಮೊದಲಿನ ಗುರುಗಳಿಗಿಂತ ಜ್ಞಾನಭಕ್ತಾದಿಗಳಲ್ಲಿ ಅಧಿಕರಾದ ಗುರುಗಳು ದೊರೆತರೆ
ಹಿಂದಿನ ಗುರುಗಳ ಅನುಮತಿಯಿಲ್ಲದೇನೇ ಉತ್ತಮಗುರುವನ್ನು ಹೊಂದಿದರೂ
ದೋಷವಿಲ್ಲ.
 
ವಿಶೇಷತೋ ಗುಣತ್ವ ಸ್ಯಾದ್ ದೇವೇಷ್ಟವಮೇವ ಹಿ
ತಸ್ಮಾದುತ್ತಮವಾಚಾರ್ಯಂ ದೇವೇಶಂ ಚಾಶ್ರಯೇದ್ ಹರಿಮ್ 1134॥
 
ಅರ್ಥ - ಉತ್ತಮಗುರುಗಳನ್ನು ಹೊಂದುವುದರಿಂದ ವಿಶೇಷವಾದ ಜ್ಞಾನಾದಿ-
ಗಳನ್ನು ಸಂಪಾದಿಸಬಹುದು. ಗುರುಗಳನ್ನು ಸ್ವೀಕರಿಸುವ ವಿಷಯದಲ್ಲಿ ಮಾನವರಲ್ಲಿ
ಮಾತ್ರವಲ್ಲದೆ ದೇವತೆಗಳಲ್ಲಿಯೂ ಇದೇ ನ್ಯಾಯವನ್ನು ಇಟ್ಟುಕೊಳ್ಳಬೇಕು.
ಆದ್ದರಿಂದ ಸರ್ವರಿಗೂ ಉತ್ತಮರಾದ ಗುರುಗಳು ಬ್ರಹ್ಮ-ವಾಯುಗಳು, ನಂತರ
ವಿದ್ಯಾಭಿಮಾನಿನಿಯರಾದ ಸರಸ್ವತೀಭಾರತಿಯರು, ನಂತರ ಗರುಡಾದಿಗಳನ್ನು
ಗುರುತೇನ ಸ್ವೀಕರಿಸಬೇಕು. ಹೀಗೆ ಉತ್ತಮರಾದ ಗುರುಗಳನ್ನೂ, ಸರ್ವೋತ್ತಮ-
ನಾದ ಶ್ರೀಹರಿಯನ್ನು ಆಶ್ರಯಿಸಿ ಕೃತಾರ್ಥರಾಗಬೇಕು.
 
1. ವಿಶೇಷಾಂಶ -
 
ಬ್ರಹ್ಮದೇವರೇ ಸರ್ವದಾ ಸರ್ವರಿಗೂ ಮುಖ್ಯಗುರುವೆನಿಸಿದ್ದಾರೆ. ಇತರ ದೇವತೆಗಳೂ ಸಹ
ತಾರತಮ್ಯಾನುಸಾರವಾಗಿ ಗುರುಗಳೇ ಆಗಿರುವರು.
 
ತಸ್ಮಾದ್ ಬ್ರಹ್ಮಾ ಗುರುರ್ಮುಖ್ಯಃ ಸರ್ವಷಾಮೇವ ಸರ್ವದಾ ।
 
ಅನ್ವೇSಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ ಗುರವ ಈರಿತಾಃ ॥ ಮ.ಭಾ.ತಾ.ನಿ. ೧/೧೧೯
ಹಿಂದೆ ಹೊಂದಿದ್ದ ಗುರುವಿಗಿಂತ ಉತ್ತಮನು ದೊರೆತಾಗ ವಿಚಾರವಿಲ್ಲದೆ ಸ್ವೀಕರಿಸಬಹುದು.
ಪೂರ್ವಗುರುವಿಗೆ ಸಮಾನನಾದರೆ ವಿಕಲವು. ಅನುಜ್ಞೆ ಪಡೆಯಬೇಕಿಲ್ಲ. ಪೂರ್ವಗುರುವಿನ
ಅನುಮತಿ ಇಲ್ಲದೆ ಇತರ ಅಧಮಗುರುವನ್ನು ಪಡೆಯುವುದಾದಲ್ಲಿ ಗುರುಲಂಘನದೋಷವು.
ಇದರ ಪರಿಣಾಮ ಗೌರವನರಕವು.
 
"ಗುರುಮಂತ್ರಪರಿತ್ಯಾಗೀ ರೌರವಂ ನರಕಂ ವ್ರಜೇತ್''