This page has not been fully proofread.

ಚತುರ್ಥೋಽಧ್ಯಾಯಃ
 
೨೦೧
 
ಬೀಜಾಕ್ಷರವನ್ನು ಬರೆದು, ಅದರ ಸುತ್ತಲೂ 'ಮಮ ಗೃಹಾದಿಸಿದ್ಧಿಃ ಸ್ಯಾತ್' ಇತ್ಯಾದಿ
ಅಪೇಕ್ಷಿತ ಪ್ರಯೋಜನವನ್ನು ತಿಳಿಸುವ ವಾಕ್ಯವನ್ನು ಬರೆಯಬೇಕು. ನಂತರ ಜಪ-
ಮಂತ್ರಗಳಲ್ಲಿರುವ ಅಕ್ಷರಸಂಖ್ಯೆಗೆ ಅನುಗುಣವಾಗಿ ಪದ್ಮದಳಗಳಂತಿರುವ ಮನೆಯ
ರೂಪದ ದಳಗಳನ್ನು ಬರೆದು, ಆ ದಳಗಳಲ್ಲಿ ಮಂತ್ರಗಳ ವರ್ಣಗಳನ್ನು ಕ್ರಮವಾಗಿ
ಬರೆಯಬೇಕು. ದಳಗಳ ಮಧ್ಯಭಾಗಗಳಲ್ಲಿ ಅಕಾರದಿಂದಾರಂಭಿಸಿ ಕ್ಷಕಾರಪರ್ಯಂತ
ಐವತ್ತು ಅಕ್ಷರಗಳನ್ನು ಕ್ರಮವಾಗಿ ಹಾಗೂ ವ್ಯತ್ಯಮವಾಗಿ ಬರೆಯಬೇಕು. ಅದರಿಂದ
ಹೊರಗೆ ವೃತ್ತಾಕಾರದ ದ್ವಾರರೇಖೆಯನ್ನೂ, ವೃತ್ತದ ಹೊರಗೆ ಎರಡು ಗೆರೆಗಳ
ಚತುರಸ್ರಮಂಡಲ ಬರೆಯಬೇಕು. ಇದು ದ್ವಾರಗಳಿಂದ ಕೂಡಿದ ಭೂಪುರಗಳಿಂದ
ಕೂಡಿರಬೇಕು. ಈ ಮಂಡಲದ ಮೂಲೆಗಳಲ್ಲಿ ಮಂತ್ರದ ಬೀಜಾಕ್ಷರಗಳು, ಹಾಗೂ
ದಿಕ್ಷಾಲಕರ ಬೀಜಾಕ್ಷರವನ್ನು ಬರೆಯಬೇಕು.
 
ಈ ಯಂತ್ರವು ಸರ್ವತಃರಕ್ಷೆಯನ್ನೂ, ಜ್ಞಾನಾದಿ ಅನೇಕಫಲಗಳನ್ನೂ ನೀಡುವುದು.
 
ಎಲ್ಲಾ
 
ಅರ್ಥ
 
ಸಮಂ ತತ್ ಸರ್ವಮಂತೇಷು ಜಪ್ತಂ ಧಾರ್ಯ೦ತು ವಾ ಭುವಿ
ವಿಲಿಖ್ಯ ಮಂಡಲೇ ವಾ ತತ್ ಪೂಜಯೇದ್‌ಹರಿಮಂಜಸಾ ॥1291
ಯಂತ್ರವನ್ನು ಬರೆಯುವ ವಿಧಾನವು ವಾರಾಹಾದಿ
ಮಂತ್ರಗಳಲ್ಲಿಯೂ ಸಮಾನವೇ ಆಗಿರುತ್ತದೆ. ಇಂತಹ ಯಂತ್ರವನ್ನು 'ಯಂತ್ರ-
ಗಾಯತ್ರಿ ಮಂತ್ರದಿಂದ ಅಭಿಮಂತ್ರಿಸಿ ಧರಿಸಬಹುದು. ಅಥವಾ ಭೂಮಿ-
ಯಲ್ಲಾಗಲೀ, ಮಂಡಲದಲ್ಲಿಯಾಗಲೀ ಬರೆದು ಆ ಯಂತ್ರದಲ್ಲಿ ಆಯಾಯ
ಮಂತ್ರಪ್ರತಿಪಾದ್ಯನಾದ ಶ್ರೀಹರಿಯನ್ನು ವಿಧಿವತ್ತಾಗಿ ಪೂಜಿಸಬೇಕು.
 
ಆಚಾರ್ಯಲಕ್ಷಣ
 
-
 
1. ಯಂತ್ರಗಾಯ -
'ಯಂತ್ರರಾಜಾಯ ವಿದ್ಮಹೇ ದೇವಗ್ರಹಾಯ ಧೀಮಹಿ ।
ತನ್ನೋ ಯಂತ್ರಃ ಪ್ರಚೋದಯಾತ್ ॥'
 
ವಿಶೇಷಾಂಶ - ಯಂತ್ರವೆಂದರೆ ನಿಯಂತ್ರಿಸುವುದು ಎಂದರ್ಥ. ಕಾಮಕ್ರೋಧಾದಿ ದೋಷ-
ಗಳಿಂದುಂಟಾಗುವ ದುಃಖಗಳನ್ನು ನಿಯಂತ್ರಿಸುವುದರಿಂದ ಯಂತ್ರವೆಂದು ಹೆಸರು. ಈ
ಯಂತ್ರದಲ್ಲಿ ಮಂತ್ರಪ್ರತಿಪಾದ್ಯ ಭಗವಂತನು ಪೂಜಿತನಾದರೆ ಪ್ರೀತನಾಗುವನು.
 
ಕಾಮಕ್ರೋಧಾದಿದೋಷೋತಸರ್ವದುಃಖನಿಯಂತ್ರಣಾತ್ ।
ಯಂತ್ರಮತ್ಯಾಹುರೇತಸ್ಮಿನ್ ದೇವಃ ಪ್ರೀಣಾತಿ ಪೂಜಿತಃ ॥ - ಗೌತಮೀ ತಂತ್ರ .