This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ತೊಡೆ, (12)ಎದೆ, (13)ಕುತ್ತಿಗೆ, (14)ಬಲಭುಜ, (15)ಎಡಭುಜ, (16)

ಬಲಗೈ, (17)ಎಡಗೈ, (18)ಶರೀರ, (19)ಕುತ್ತಿಗೆ ಬಲಪಾರ್ಶ್ವ, (20) ಕುತ್ತಿಗೆಯ
ಎಡಪಾರ್ಶ್ವ, (21)ಬಲಕೆನ್ನೆ, (22)ಎಡಕೆನ್ನೆ, (23)ಹಣೆ-ತಲೆಗಳ ಮಧ್ಯ,
(24)ನಾಭಿಯ ಕೆಳಭಾಗ, (25)ಭುಜಗಳ ಮಧ್ಯ ಭಾಗ, (26)ವೃಷಣ, (27)
ಗುಹ್ಯಾಂಗ, (28)ಉದರದ ಬಲಭಾಗ, (29)ಉದರದ ಎಡಭಾಗ, (30)
ಕುತ್ತಿಗೆಯ ಹಿಂಭಾಗ, (31) ಬಲಸ್ತನ, (32) ಎಡಸ್ತನ, (33) ಬೆನ್ನಿನ ಮೂಲ. ಹೀಗೆ
33ಸ್ಥಾನಗಳು ನ್ಯಾಸಸ್ಥಾನಗಳಾಗಿವೆ. ಏಕಾಕ್ಷರದಿಂದ ಆರಂಭವಾಗಿ 33ಅಕ್ಷರಾಂತ

ಇರುವ ಮಂತ್ರಗಳ ವರ್ಣಸಂಖ್ಯೆಯನ್ನನುಸರಿಸಿ ಈ ಸ್ಥಾನಗಳಲ್ಲಿ ನ್ಯಾಸ
 
ಮಾಡಬೇಕು. ಇಲ್ಲಿ ಪಾದದಿಂದ ಆರಂಭಿಸಿ ಶಿರಃಪರ್ಯಂತ ಹೇಳಿರುವ ನ್ಯಾಸವು
ಲಯನ್ಯಾಸ, ಈ ಹಿಂದೆ ಹೇಳಿದ ವರ್ಣ- ನ್ಯಾಸವು ದೇವರಪೂಜೆಯಲ್ಲಿ ತಾನು
ಪೂಜಿಸುವ ರಾಮಕೃಷ್ಣಾದಿ ಪ್ರತಿಮೆಗಳಲ್ಲಿಯೂ, ಜಪಾದಿಗಳನ್ನು ಮಾಡುವವನ
ದೇಹಾದಿ- ಗಳಲ್ಲಿಯೂ, ದೇಹಾಂತರ್ನಿಯಾಮಕನಾದ
ವರ್ಣಪ್ರತಿಪಾದ್ಯರೂಪಗಳಿಗೂ ವಿಶೇಷಸನ್ನಿಧಾನವುಂಟಾಗುತ್ತದೆ.
 
ಶ್ರೀಹರಿಯ ಮಂತ್ರ-
900
 

ವರ್ಣಪ್ರತಿಪಾದ್ಯರೂಪಗಳಿಗೂ ವಿಶೇಷಸನ್ನಿಧಾನ- ವುಂಟಾಗುತ್ತದೆ[^1]
 
ಯಂತ್ರೋದ್ಧಾರವಿಧಿ
 

 
ಬೀಜಾಂತಃ ಸಾಧ್ಯಮಧ್ಯಂ ಚ ವಿಭಕ್ತದಲಮಂತ್ರಯುಕ್ 127
 
॥ ೧೨೭ ॥
 
ವರ್ಣಾನುಪ್ರಾತಿಲೋಮೈಮ್ಯೇನ ವೃತ್ತಂ ಭೂಪುರಸಂಯುತಮ್ ।

ಬೀಜಸಂದೃಬ್ಕೋಣಂ ಚ ಯಂತ್ರಂ ರಕ್ಷಾದಿಸಾಧಕಮ್ ॥128 ೧೨೮

 
ಅರ್ಥ - ಸುವರ್ಣರಜತತಾಮ್ರಾದಿಲೋಹಗಳಿಂದ ರಚಿತವಾದ ಚತುರಪ್ರಕಾರ-
ವಾದ ಯಂತ್ರವನ್ನು ತಯಾರಿಸಿ, ಅದರ ಮಧ್ಯದಲ್ಲಿ ತಾನು ಜಪಿಸುವ ಮಂತ್ರದ
 
1

 
[^1]
. ಮಂತ್ರವು ಒಂದಕ್ಷರದ್ದಾದರೆ ವ್ಯಂಜನ, ಸ್ವರ, ಅನುಸ್ವಾರ ಹೀಗೆ ಮೂರುವರ್ಣಗಳಿಂದ
ಪಾದಾದಿಗಳಲ್ಲಿ ನ್ಯಾಸ ಮಾಡಬೇಕು. ಸೃಷ್ಟಿನ್ಯಾಸದಲ್ಲಿ ತಲೆ-ಹೃದಯ-ಪಾದಗಳು.

ನ್ಯಾಸೇ ಏಕಾಕ್ಷರೇ ಮಂತ್ರ ವ್ಯಂಜನ-ಸ್ವರಬಿಂದುಭಿಃ ।.

ಪಾದಹೃತ್‌ಕೇಷುವಿಲಯೇ ಹ್ಯುತ್ಪತ್ತೌ ವ್ಯತ್ಯಯುತ್ಕ್ರಮಾದ್ ಭವೇತ್ ॥
 

ಮೂರಕ್ಷರದ ಮಂತ್ರವಾದರೆ ಮಂತ್ರದ ವರ್ಣಗಳಿಂದಲೇ ನ್ಯಾಸ. ನಾಲ್ಕು ಅಕ್ಷರವಾದಾಗ
ನಾಭಿಯನ್ನು ಸೇರಿಸಿಕೊಳ್ಳುವುದು. ಮೂವತ್ತಮೂರು ಅಕ್ಷರವಿರುವ ವರಾಹಮಂತ್ರವನ್ನು

ಜಪಿಸುವಾಗ ಪಾದಾದಿಮೂವತ್ತಮೂರು ಸ್ಥಾನಗಳಲ್ಲಿಯೂ ನ್ಯಾಸವನ್ನು ಮಾಡಿಕೊಳ್ಳಬೇಕು.
ಈ ರೀತಿ ಆಯಾಯ ಮಂತ್ರಗಳ ವರ್ಣನ್ಯಾಸಮಾಡಿ ಮಂತ್ರಜಪಿಸಿದರೆ ವಿಶೇಷಫಲವು.