This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
(ಲಯನ್ಯಾಸ) ಈ ಕ್ರಮವನ್ನೇ ಪಾದ, ಜಾನು, ನಾಭಿ, ಹೃದಯ, ಬಾಯಿ,
ಮೂಗು, ಕಣ್ಣು, ತಲೆಗಳಲ್ಲಿ ಕೆಳಗಿನಿಂದ ನ್ಯಾಸ ಮಾಡಿದರೆ 'ಲಯನ್ಯಾಸವು'.
 
೧೯೮
 
(ಸ್ಥಿತಿನ್ಯಾಸ) ಅರ್ಧಕ್ರಮವಾಗಿ ಸೃಷ್ಟಿನ್ಯಾಸದಿಂದಲೂ, ಉಳಿದರ್ಧ ವ್ಯತ್ಯಮವಾಗಿ
ಲಯನ್ಯಾಸದಿಂದಲೂ ಅಂದರೆ ತಲೆ, ಕಣ್ಣು, ಮೂಗು, ಬಾಯಿ ಈ ನಾಲ್ಕು
ಸ್ಥಾನಗಳಲ್ಲಿ ಕ್ರಮವಾಗಿಯೂ; ಪಾದ, ಜಾನು, ನಾಭಿ, ಹೃದಯಗಳಲ್ಲಿ ವ್ಯತ್ಯಮ-
ವಾಗಿಯೂ ನ್ಯಾಸಮಾಡುವುದು 'ಸ್ಥಿತಿನ್ಯಾಸವು' ಎಂದು ಕರೆಯಲ್ಪಡುತ್ತದೆ.
 
ಗೃಹಸ್ಥರು ಸೃಷ್ಟಿಸ್ಥಿತಿಲಯನ್ಯಾಸಗಳನ್ನು ನಾಲ್ಕು ಬಾರಿ ಮಾಡಿ, ಪುನಃ ಸೃಷ್ಟಿನ್ಯಾಸ
ಹಾಗೂ ಸ್ಥಿತಿನ್ಯಾಸ ಮಾಡಿದಾಗ ಸ್ಥಿತಿನ್ಯಾಸವು ಅಂತ್ಯದಲ್ಲಿರುವ ಹದಿನಾಲ್ಕು ಬಾರಿ
ನ್ಯಾಸ ಮಾಡಿದಂತಾಗುತ್ತದೆ'.
 
1. ವಿಶೇಷಾಂಶ -
 
ಮೂಲಮಂತ್ರದಲ್ಲಿ ವರ್ಣನ್ಯಾಸ ಸೃಷ್ಟಿಸ್ಥಿತಿಲಯನ್ಯಾಸಗಳ ಕ್ರಮ ಹೀಗಿದೆ.
ಓಂ ನಮೋ ನಾರಾಯಣಾಯ ಎಂಬುದು ಮೂಲಮಂತ್ರವು.
 
ಓಂ ಓಂ ವಿಶ್ವಾಯ ನಮಃ (ಶಿರಸ್ಸು)
ಓಂ ನಂ ತೈಜಸಾಯ ನಮಃ (ನೇತ್ರ)
ಓಂ ಮೋಂ ಪ್ರಾಜ್ಞಾಯ ನಮಃ (ಮೂಗು)
ಓಂ ನಾಂ ತುರ್ಯಾಯ ನಮಃ (ಬಾಯಿ)
ಓಂ ರಾಂ ಆತ್ಮನೇ ನಮಃ (ಹೃದಯ)
ಓಂ ಯಂ ಅಂತರಾತ್ಮನೇ ನಮಃ (ನಾಭಿ)
ಓಂ ಣಾಂ ಪರಮಾತ್ಮನೇ ನಮಃ (ಜಾನು)
ಓಂ ಯಂ ಜ್ಞಾನಾತ್ಮನೇ ನಮಃ (ಪಾದಗಳು) - ಇದು ಸೃಷ್ಟಿಕ್ರಮ.
 
ಓಂ ಓಂ ವಿಶ್ವಾಯ ನಮಃ (ಶಿರಸ್ಸು)
 
ಓಂ ನಂ ತೈಜಸಾಯ ನಮಃ (ನೇತ್ರ)
ಓಂ ಮೋಂ ಪ್ರಾಜ್ಞಾಯ ನಮಃ (ಮೂಗು)
ಓಂ ನಾಂ ತುರೀಯಾಯ ನಮಃ (ಬಾಯಿ)
ಓಂ ರಾಂ ಆತ್ಮನೇ ನಮಃ (ಪಾದಗಳು)
ಓಂ ಯಂ ಅಂತರಾತ್ಮನೇ ನಮಃ (ಜಾನು)
ಓಂ ಣಾಂ ಪರಮಾತ್ಮನೇ ನಮಃ (ನಾಭಿ)
ಓಂ ಯಂ ಜ್ಞಾನಾತ್ಮನೇ ನಮಃ (ಹೃದಯಾಯ) - ಇದು ಸ್ಥಿತಿಕ್ರಮ
 
ಓಂ ಓಂ ವಿಶ್ವಾಯ ನಮಃ (ಪಾದ)