This page has not been fully proofread.

ಚತುರ್ಥೋಽಧ್ಯಾಯಃ
 
ಅಭಿಮಂತ್ರಿಸಿದ ನೀರನ್ನು ಕುಡಿಯುವಿಕೆಯಿಂದ ವಿದ್ಯೆಯನ್ನು ಹೊಂದಬಹುದಾಗಿದೆ.
ಇದೇ ರೀತಿ ಅಭಿಮಂತ್ರಿತ ಬಜೆಯನ್ನೋ, ತುಲಸಿಯನ್ನೋ, ಒಂದೆಲಗವನ್ನೂ
ಸಾಣೆಕಲ್ಲಿನಲ್ಲಿ ಸುವರ್ಣವನ್ನು ಉಜ್ಜಿ ತೇದು ಬಂದರಸವನ್ನೋ ಕುಡಿಯಬೇಕು.
 
ಅಕುರ್ವಂಶ್ಚ ಕ್ರಿಯಾ ಭಾ ನಿರಪೇಕ್ಷೆ ಭಜನ್ ಹರಿಮ್ ।
ಸರ್ವಮೇತದವಾಪೋತಿ ವಿಶೇಷೇಣ ನ ಸಂಶಯಃ ॥121॥
 

 
-
 
೧೯೭
 
ಅರ್ಥ
 
ಯಾವ ಭಕ್ತನು ಕೇವಲ ಐಶ್ವರ್ಯಾದಿವಿಷಯಕ ಕಾಮನೆ ಇಲ್ಲದೆ,
ಯಾವುದೇ ಈ ಹಿಂದೆ ಹೇಳಿದ ಹವನಾದಿಗಳನ್ನು ಮಾಡದಿದ್ದರೂ ಭಕ್ತಿಯಿಂದ
ನಿಷ್ಕಾಮನೆಯಿಂದ ಭಗವಂತನನ್ನು ಭಜಿಸಿದರೆ ಇಲ್ಲಿ ಹೇಳಿದ ಐಶ್ವರ್ಯ,
ಶತ್ರುವಿಜಯಾದಿ ಸಕಲಾಭೀಷ್ಟಗಳನ್ನೂ ಹೊಂದಬಲ್ಲನು. ಇದರಲ್ಲಿ ಸಂಶಯ ಬೇಡ.
 
ನ್ಯಾಸಪ್ರಭೇದಗಳು
 
ಸೃಷ್ಟಿಸ್ಥಿತಿಲಯನ್ಯಾಸಾಃ ಪ್ರಾತಿಲೋಮ್ಯಾನುಲೋಮತಃ ।
ಸ್ಥಿತ್ಯಂತಾ ಏವ ವರ್ಣಾನಾಂ ಶ್ರೇಷ್ಠಾ ಏವ ಚತುರ್ದಶ ।
ಸಂಹೃತ್ಯಂತಾ ಮೋಕ್ಷಿಣಾಂ ತೇ ಏಕವಿಂಶತಿರೇವ ವಾ 122
 
ಅರ್ಥ - ಮೂಲಮಂತ್ರವೇ ಮೊದಲಾದ ಮಂತ್ರಜಾಪಕನು ಮಂತ್ರಗಳಲ್ಲಿರುವ
.
ವರ್ಣಗಳಿಗೆ ಪ್ರಾತಿಲೋಮ್ಯ, ಅನುಲೋಮ್ಮ, ಪ್ರತಿಲೋಮ್ಯಾನುಲೋಮ್ಯ-
ಕ್ರಮದಿಂದ ಜಪವನ್ನು ಮಾಡುವವರೆಲ್ಲರೂ ಸೃಷ್ಟಿನ್ಯಾಸ, ಸ್ಥಿತಿನ್ಯಾಸ, ಲಯನ್ಯಾಸ-
ಗಳನ್ನು ಮಾಡಿಕೊಳ್ಳಬೇಕು.
 
(ಸೃಷ್ಟಿನ್ಯಾಸ) ತಲೆಯಿಂದಾರಂಭಿಸಿ ಶಿರಸ್ಸು, ಕಣ್ಣು, ಮೂಗು, ಬಾಯಿ,
ಹೃದಯ, ನಾಭಿ, ಜಾನು, ಪಾದಗಳಲ್ಲಿ ಮೇಲಿನಿಂದಾರಂಭಿಸಿ ಕೆಳಗಿನವರೆಗೂ
ವರ್ಣಗಳ ನ್ಯಾಸವು 'ಸೃಷ್ಟಿನ್ಯಾಸ'ವೆನಿಸುತ್ತದೆ.
 
1. ವಿಶೇಷಾಂಶ
 
ಗೃಹಸ್ಥರಿಗೆ ಸ್ಥಿತಿನ್ಯಾಸವು; ಬ್ರಹ್ಮಚಾರಿಗಳಿಗೆ ಸೃಷ್ಟಿನ್ಯಾಸವು, ಯತಿಗಳಿಗೆ
ಲಯನ್ಯಾಸವು. ಗೃಹಸ್ಥರು ಹದಿನಾಲ್ಕು ಬಾರಿ ನಡೆಸಿದರೆ ಶ್ರೇಷ್ಠ, ಸ್ಥಿತಿ, ಲಯ, ಸೃಷ್ಟಿ
ಮಾಡಿಕೊಂಡು ಪುನಃ ಸ್ಥಿತಿನ್ಯಾಸಮಾಡಿಕೊಂಡರೆ
ಇಷ್ಟಾದರೂ ಕಡೇ ಪಕ್ಷ ಮಾಡಲೇ ಬೇಕು. ಬ್ರಹ್ಮಚಾರಿಗಳಾದರೋ
ಸ್ಥಿತಿಲಯ ಮಾಡಿ ಪುನಃ ಸೃಷ್ಟಿನ್ಯಾಸ ಮಾಡಬೇಕು. ಯತಿಗಳಾದರೋ ಲಯವೇ
ಕೊನೆಯಾಗುವಂತೆ ಮೂರುನ್ಯಾಸಗಳನ್ನು ಏಳು ಬಾರಿ ಮಾಡಿಕೊಳ್ಳಬೇಕು.
 
ಮುಗಿಸಬಹುದು.
 
ಸ್ಥಿತ್ಯಂತವಾಗಿ
 
ಸೃಷ್ಟಿಯಿಂದಾರಂಭಿಸಿ