This page has been fully proofread once and needs a second look.

ಅರ್ಥ- ಧನಧಾನ್ಯಾದಿಸಂಪತ್ತುಗಳಿಂದ ತುಂಬಿರುವ ಹಸ್ತಗಳುಳ್ಳ-
ವನೂ ರತ್ನಪರ್ವತದಲ್ಲಿ ಕುಳಿತು ಬ್ರಹ್ಮರುದ್ರಾದಿಗಳಿಂದ ಸೇವಿತ-
ನಾಗಿರುವವನೂ ಆಗಿರುವನೆಂದು ಶ್ರೀಹರಿಯನ್ನು ಧ್ಯಾನಿಸಿದರೆ
ಧನಧಾನ್ಯಾದಿಸಂಪತ್ತುಗಳನ್ನು ಪಡೆಯಬಹುದಾಗಿದೆ. ಯಾವ ರೀತಿಯ ಕಾಮನೆಯೋ ಆ ರೀತಿಯ ಭಗವದ್ರೂಪಚಿಂತನೆಯು ಅವಶ್ಯವಾಗಿರುತ್ತದೆ. ಸಂಪತ್ತಿಗೆ ಅಭಿಮಾನಿನಿಯಾದ ಶ್ರೀಲಕ್ಷ್ಮೀ ದೇವಿಯರಿಂದಲೂ, ನಾನಾವಿಧಸಂಪತ್ತುಗಳಿಂದಲೂ ಯುಕ್ತ- ನಾಗಿರುವ ಭಗವಂತನನ್ನು ಚಿಂತಿಸಿದರೆ ಧನಾದಿಸಕಲೈಶ್ವರ್ಯ- ವನ್ನೂ ಪಡೆಯುವನು.
 
ಯದ್ಯನ್ಮನೋಗತಂ ತಸ್ಯ ತತ್ತದಾಪ್ನೋತ್ಯಸಂಶಯಮ್ ।
ತಥಾ ತಥಾ ಹರಿಂ ಧ್ಯಾಯನ್ ಕ್ರಿಯಾಃ ತಾಸ್ತಾಶ್ಚ ಸಾಧಯನ್ ॥ ೧೧೮ ॥
 
ಅರ್ಥ- ಫಲಕಾಮಿಗೆ ದ್ರವ್ಯಧನಧಾನ್ಯಾದಿಗಳು, ಶತ್ರುಜಯ ಮೊದಲಾದ ಯಾವ ಯಾವ ಕಾಮನೆಗಳು ಅಭಿಲಷಿತವಾಗಿ- ವೆಯೋ, ಅಂತಹ ಫಲವನ್ನು ನೀಡುವ ಭಗವದ್ರೂಪಗಳನ್ನೇ ಚಿಂತಿಸಬೇಕು. ಇದನ್ನು ಸಾಧಿಸುವ ಹೋಮ, ಹವನಾದಿಗಳನ್ನೇ ಮಾಡುತ್ತಿರಬೇಕು. ಇದರಿಂದಾಗಿ ಅಂತಹ ಅಭಿಲಷಿತಫಲಗಳೇ
ದೊರೆಯುತ್ತವೆ. ಇದು ನಿಶ್ಚಯವು.
 
ಶ್ರಿಯೇ ಪದ್ಮಾನಿ ಜುಹುಯಾತ್ ಸಂಪ್ರೀತ್ಯಾ ಉತ್ಪಲಾನಿ ಚ ।
ಶರಾನ್ ಜಯಾಯ ಜುಹುಯಾದಭಿಮಂತ್ರ್ಯ ಪ್ರಯೋಜಯೇತ್ ॥ ೧೧೯ ॥
 
ಅರ್ಥ
 
 
 
ಸಂಪತ್ತು ಹೊಂದುವ ಬಯಕೆಯಿದ್ದರೆ ಘೃತಸಹಿತವಾಗಿ ತಾವರೆ
ಹೂವುಗಳನ್ನು ಹೋಮಿಸಬೇಕು. ಇದರಿಂದ ಸಂಪತ್ತಿನ ಪ್ರಾಪ್ತಿಯಾಗುತ್ತದೆ. ಭಗವತ್ಪ್ರೀತಿ ಸಂಪಾದನೆಗಾಗಿ ನೈದಿಲೆ (ನೀಲಿಕಮಲ) ಹೂವುಗಳಿಂದ ಹೋಮಿಸಬೇಕು. ವಿಜಯವನ್ನು ಅಪೇಕ್ಷಿಸುವುದಾದರೆ ಮೊದಲು ನರಸಿಂಹಾದಿ ಮಂತ್ರಗಳಿಂದ ಹೋಮಿಸಿ, ನಂತರ ನೃಸಿಂಹಾದಿಮಂತ್ರಗಳಿಂದ ಅಭಿಮಂತ್ರಿತ-
ಬಾಣವನ್ನಾಗಲೀ, ಅಭಿಮಂತ್ರಿತ ನೀರನ್ನಾಗಲೀ ಶತ್ರುವಿನ ಮೇಲೆ ಎಸೆಯಬೇಕು.
 
ವಿದ್ಯಾಯೈ ಮಂತ್ರಿತಂ ವಾರಿ ವಚಾಂ ವಾ ತುಲಸೀಮಪಿ ।
ಬ್ರಾಹ್ಮೀಂ ಘೃತಂ ಸುವರ್ಣಂ ವಾ ಶತಾವೃತ್ತ್ಯಾ ತು ನಿತ್ಯಶಃ ॥ ೧೨೦ ॥
 
ಅರ್ಥ- ವೇದವ್ಯಾಸಾದಿಮಂತ್ರಗಳಿಂದ ಪ್ರತಿದಿನವೂ ನೂರೆಂಟು ಬಾರಿ
 
 
 
-