This page has not been fully proofread.

ಚತುರ್ಥೋಽಧ್ಯಾಯಃ
 
ವಿದ್ಯೆ ಅವನಿಗೆ ಸಿದ್ಧಿಸುತ್ತದೆ.
 
ವ.ಟಿ. ಪೂರ್ವಗುರುಃ
 
www
 
ಮೂಲಗುರುಃ
 
-
 
ಪರಮಗುರುಃ, ಆದಿಗುರುಃ =
 
ಪೂರ್ಣಪ್ರಜ್ಞ,
 
ವೇದವ್ಯಾಸಃ, ವಾಸುದೇವಾಖ್ಯಾಂ ದೇವತಾಂ ಚ ಕೃತ್ವಾ
 
ವಿದ್ಯಾಮಾರಭೇತ್ ಇತಿ ಭಾವಃ ।
 
ಟೀಕಾರ್ಥ ಪೂರ್ವಗುರುವೆಂದರೆ ಗುರುಗಳ ಗುರುಗಳೆಂದರ್ಥ; ಆದಿಗುರು-
ವೆಂದರೆ ಶ್ರೀಮದಾಚಾರ್ಯರು. ಮೂಲಗುರುವೆಂದರೆ ವೇದವ್ಯಾಸದೇವರು.
ವಾಸುದೇವನೆಂಬ ಮಂತ್ರಪ್ರತಿಪಾದ್ಯದೇವತೆಯನ್ನೂ ಸ್ಮರಿಸಿ ವಿದ್ಯಾಭ್ಯಾಸಿಯು ವಿದ್ಯೆಯ-
ನ್ನಾರಂಭಿಸಬೇಕು ಎಂದರ್ಥ.
 
೧೯೩
 
ಗುರು, ದೈವದ್ರೋಹದಿಂದಾಗುವ ಅನರ್ಥಗಳು
ಅವಜ್ಞಾತಾ ಗುರುಣಾಂ ಚ ದೇವತಾನಾಂ ನ ಸಿದ್ಧತಿ ।
ಪ್ರಯಾತಿ ಚ ತಮೋ ಘೋರಂ ಮಂತ್ರಾವಜ್ಞಾಕೃದೇವ ಚ ॥110॥
 
ಯಸ್ತಾರತಮ್ಯವೇತ್ತಾ ಸ್ಯಾದ್ ಗುರೂಣಾಂ ದೇವತಾಸ್ವಪಿ ।
ಭಕ್ತಿಮಾನ್ ಗುರುದೇವೇಷು ತದ್ಧಕ್ಷೇಷು ಚ ಸಿದ್ಧತಿ 111॥
 
ಗುರುದೇವಪ್ರತೀಪಾನಾಂ ವಿಮುಖಸ್ತತ್ತಿಯೇ ರತಃ ।
ಅಕಾಮಕ್ರೋಧಲೋಭಶ್ಚ ನ ಚಿರಾತ್ ಸಿದ್ದಿಮಾಪ್ನುಯಾತ್ ॥112॥
 
ಸಕಾಮೇಭ್ಯಃ ಅಮಿತಗುಣಾ ಯಾತಕಾಮೈಸ್ತು ಕೃತಾ ಕ್ರಿಯಾ ।
ತಸ್ಮಾದಕಾಮ ಏವಾಲಂ ಭಜೇದ್ ವಿಷ್ಣುಂ ಸನಾತನಮ್ ॥113॥
 
ಅರ್ಥ ಯಾವ ವಿದ್ಯಾಭ್ಯಾಸಕನು ಗುರು, ಪೂರ್ವಗುರು, ಆದಿಗುರು,
ಮೂಲಗುರುಗಳನ್ನು, ಮಂತ್ರಪ್ರತಿಪಾದ್ಯದೇವತೆಯನ್ನೂ ತಿರಸ್ಕರಿಸುವನೋ ಹಾಗೂ
ಮಂತ್ರವನ್ನೂ ತಿರಸ್ಕರಿಸುವನೋ ಅವನಿಗೆ ಯಾವುದೇ ಮಂತ್ರಸಿದ್ಧಿಯಾಗುವುದಿಲ್ಲ.
 
1. ಏಳು ಜನ ಮೂಲಗುರುಗಳಿರುವರೆಂದು ಪಂಚರಾತ್ರ ಹೇಳಿದೆ. ಆದ್ದರಿಂದ ಮೂಲಗುರು-
ಗಳನ್ನು ಹೇಳುವಾಗ ಈ ಏಳು ದೇವತೆಗಳನ್ನು ಹೇಳುವ ಸಂಪ್ರದಾಯವಿದೆ :
'ವ್ಯಾಸಂ ಚ ಭಾರತೀಂ ವಾಣೀಂ ವಿಧಿಂ ವಾಯುಂ ರಮಾಂ ತಥಾ ।
ತಥಾ ನಾರಾಯಣಂ ಮೂಲಗುರೂನಾಹುಃ ವಿಪಶ್ಚಿತಃ ॥