This page has been fully proofread once and needs a second look.

ಕೈಯ್ಯನ್ನಿಟ್ಟು, ಈ ಧನ್ವಂತರಿ ಮಂತ್ರವನ್ನು ಜಪಿಸಿದ್ದೇ ಆದರೆ ಆ ರೋಗಿಯು ತನ್ನ ರೋಗವನ್ನು ಕಳೆದುಕೊಂಡು ನೀರೋಗಿ- ಯಾಗುವನು. ಆದರೆ ಭಗವದ್ಭಕ್ತರಿಗೆ ಮಾತ್ರ ಫಲ ಅಭಕ್ತರಿಗಲ್ಲ.
 
ರೋಗಾದಿಗಳಲ್ಲಿ ಧನ್ವಂತರಿ ಜಪದ ಮಹಿಮೆ
 
ಶತಂ ಸಹಸ್ರಮಯುತಂ ಲಕ್ಷಂ ವಾಽऽರೋಗಸಂಕ್ಷಯಾತ್ ।
ಇಮಮೇವ ಜಪೇನ್ಮಂತ್ರಂ ಸಾಧೂನಾಂ ದುಃಖಶಾಂತಯೇ ॥ ೯೮ ॥
 
ಅರ್ಥ - ಭಗವದ್ಭಕ್ತರ ರೋಗಾದಿದುಃಖನಿವೃತ್ತಿಗಾಗಿ ಇದೇ ಮಂತ್ರವನ್ನೇ ರೋಗದ ತೀವ್ರತೆಯನ್ನು ಲಕ್ಷಿಸಿ ಅದಕ್ಕೆ ತಕ್ಕಂತೆ ನೂರು, ಸಾವಿರ, ಹತ್ತು ಸಾವಿರ, ಲಕ್ಷಬಾರಿ ಜಪಿಸಬೇಕು.
 
ಜ್ವರದಾಹಾದಿಶಾಂತ್ಯರ್ಥಂ ತರ್ಪಯೇನ್ ಮನುನಾಽಮುನಾ ।
ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾತ್ ಜೂರ್ತಿರ್ವಿನಶ್ಯತಿ ॥ ೯೯ ॥
ಅರ್ಥ - ಜ್ವರಮೊದಲಾದ ತಾಪವನ್ನು ಪರಿಹರಿಸಿಕೊಳ್ಳುವವರು ಸಪ್ತದಿನ ಪರ್ಯಂತ ಜಲದಲ್ಲಿ ಧನ್ವಂತರಿಯನ್ನು ಧ್ಯಾನಿಸಿ, ಆ ನೀರಿನಿಂದಲೇ ಧನ್ವಂತರಿಯನ್ನುದ್ದೇಶಿಸಿ ತರ್ಪಣವನ್ನಿತ್ತರೆ ಜ್ವರತಾಪವು ಇಲ್ಲದಂತಾಗುವುದು.
 
ಧನ್ವಂತರಿಮಂತ್ರಹೋಮದ ಮಹಿಮ
 
ಅಯುತಾಮೃತಸಮಿದ್ಧೋಮಾದ್ಗೋಘೃತಕ್ಷೀರಸಂಯುತಾತ್ ।
ಸರ್ವರೋಗಾ ವಿನಶ್ಯಂತಿ ವಿಮುಖೋ ನ ಹರೇರ್ಯದಿ ॥ ೧೦೦ ॥
 
ಅರ್ಥ ಹಸುವಿನ ಘೃತ, ಗೋಕ್ಷೀರಗಳಿಂದ ಮಿಶ್ರವಾದ ಅಮೃತ- ಬಳ್ಳಿ ಸಮಿತ್ತುಗಳಿಂದ ಹತ್ತು ಸಾವಿರ ಬಾರಿ ಧನ್ವಂತರಿ ಮಂತ್ರ- ದಿಂದ ಹೋಮಿಸಿದರೆ ರೋಗಿಯು ಭಗವದ್ಭಕ್ತನಾಗಿದ್ದ ಪಕ್ಷದಲ್ಲಿ ರೋಗಿಯ ಸಮಸ್ತರೋಗಗಳೂ ಹೇಳ ಹೆಸರಿಲ್ಲದಂತಾಗುತ್ತವೆ.
 
ಭೂತಾಭಿಚಾರಶಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ ।
ದ್ವಿಗುಣಾಽಮೃತಯಾ ಪಶ್ಚಾತ್ ಕೇವಲೇನ ಘೃತೇನ ವಾ ॥ ೧೦೧॥