This page has not been fully proofread.

ಅಷ್ಟಾಕ್ಷರ- ವ್ಯಾಹೃತಿಮಂತ್ರಗಳು
 
9
 
ಅನಿರುದ್ಧಾದಿಕಾಸ್ತಾಸಾಂ
 
ದೇವತಾ ವ್ಯತ್ಯಮೇಣ ವಾ ।
 
ತಾಶ್ಚತುಮೂರ್ತಯವ ದ್ವಾದಶಾರ್ಣಪದೋದಿತಾಃ ॥12॥
ಅರ್ಥ - ಈ ನಾಲ್ಕು ವ್ಯಾಹೃತಿಗಳಿಗೆ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ,
ವಾಸುದೇವ ಎಂಬ ನಾಲ್ಕು ಭಗವಂತನ ರೂಪಗಳು ದೇವತೆಗಳಾಗಿವೆ. ಈ ನಾಲ್ಕು
ಭಗವದ್ರೂಪಗಳೇ 'ಓಂ ನಮೋ ಭಗವತೇ ವಾಸುದೇವಾಯ'
ದ್ವಾದಶಾಕ್ಷರದ ಪದಗಳಿಂದ ವ್ಯತಮವಾಗಿ ಪ್ರತಿಪಾದ್ಯವಾಗಿವೆ. ಓಂಕಾರದಿಂದ
ವಾಸುದೇವ, ನಮೋ - ಸಂಕರ್ಷಣ, ಭಗವತೇ - ಪ್ರದ್ಯುಮ್ನ, ವಾಸುದೇವಾಯ
ಪದದಿಂದ ಅನಿರುದ್ಧ ಹೀಗೆ ಹಿಂದು ಹೇಳಿದ ಕ್ರಮಕ್ಕಿಂತ ವ್ಯತ್ಯಸ್ತವಾಗಿ ಪ್ರತಿಪಾದಿತ
 
ಎಂಬ
 
ವಾಗಿವೆ.
 
ವ.ಟೀ. ವ್ಯಾಹೃತೀನಾಂ ದೇವತಾಮಾಹ ಅನಿರುದ್ಧಾದೀತಿ ॥ ತಾಸಾಂ
ವ್ಯಾಹೃತೀನಾಮ್ ಅನಿರುದ್ಧ-ಪ್ರದ್ಯುಮ್ನ ಸಂಕರ್ಷಣ-ವಾಸುದೇವಾ: ವ್ಯತ್ಯಮೇಣ
ವಾಸುದೇವಾದಿಕಾ ವಾ ಜೇಯಾ ಇತಿ ಶೇಷಃ । ಅನಿರುದ್ಧಾದ್ಯಾಃ ಚತಸ್ರೋ ಮೂರ್ತಯೋ
ದ್ವಾದಶಾಕ್ಷರಚತುಷ್ಟಯಪ್ರತಿಪಾದ್ಯಾಃ
 
। ।
 
ಟೀಕಾರ್ಥಃ
 
ವ್ಯಾಹೃತಿಗಳಿಂದ ಪ್ರತಿಪಾದ್ಯದೇವತೆಯನ್ನು ಅನಿರುದ್ಧಾದಿಕಾಸ್ತಾಸಾಂ
ಇತ್ಯಾದಿ ಪದ್ಯದಿಂದ ತಿಳಿಸುವರು. ತಾಸಾಂ ಎಂದರೆ ವ್ಯಾಹೃತೀನಾಂ ಎಂದರ್ಥ. ಈ ನಾಲ್ಕು
ಭೂರಾದಿ ವ್ಯಾಹೃತಿಗಳಿಗೆ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ಈ
ಕ್ರಮದಿಂದಾಗಲೀ ಅಥವಾ ವ್ಯತ್ಯಮದಿಂದಾಗಲೀ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ,
ಅನಿರುದ್ಧ ಎಂದಾಗಲೀ ಪ್ರತಿಪಾದ್ಯದೇವತೆಗಳಾಗಿರುತ್ತವೆ. 'ಹೀಗೆ ತಿಳಿಯಬೇಕು' ಎಂದು
ಶೇಷಪೂರಣಮಾಡಿಕೊಳ್ಳಬೇಕು. ಅನಿರುದ್ಧಾದಿ ನಾಲ್ಕು ಮೂರ್ತಿಗಳೇ ಓಂ ನಮೋ
ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರ ಮಂತ್ರದ ನಾಲ್ಕು ಪದಗಳಿಂದ ಪ್ರತಿ
ಪಾದ್ಯವಾಗಿವೆ.
 
ನಾರಾಯಣಾಷ್ಟಾಕ್ಷರಾಚ್ಚ ವ್ಯಾಹೃತಿಭ್ಯಸ್ತಥೈವ ಚ ।
 
ವಿಭೇದೋ ದ್ವಾದಶಾರ್ಣಾನಾಂ ಕೇಶವಾದ್ಯಾಶ್ಚ ದೇವತಾಃ ॥13॥
ಅರ್ಥ - ವಾಸುದೇವಾದಶಾಕ್ಷರ ಮಂತ್ರದಲ್ಲಿರುವ ಹನ್ನೆರಡು ವರ್ಣಗಳಲ್ಲಿ
ಎಂಟು ವರ್ಣಗಳು ಅಷ್ಟಾಕ್ಷರಮಂತ್ರದ ಎಂಟು ಅಕ್ಷರಗಳಿಂದಲೂ, ನಾಲ್ಕು
ವ್ಯಾಹೃತಿಗಳಿಂದಲೂ ಅಭಿವ್ಯಕ್ತವಾಗಿವೆ. ಈ ದ್ವಾದಶಾಕ್ಷರಮಂತ್ರದ ಹನ್ನೆರಡು
ಅಕ್ಷರಗಳಿಗೆ ಕೇಶವಾದಿ ಹನ್ನೆರಡು ರೂಪಗಳು ವಾಚ್ಯವಾಗಿವೆ.