This page has not been fully proofread.

ಚತುರ್ಥೋಽಧ್ಯಾಯಃ
 
೧೮೭
 
ಜನರ ಸಮಸ್ತವ್ಯಾಧಿಗಳನ್ನು ಪರಿಹರಿಸಿ, ಕಡೆಗೆ ಸಂಸಾರವ್ಯಾಧಿಯನ್ನು ಪರಿ-
ಹರಿಸುತ್ತದೆ.
 
-
 
ವ.ಟೀ. - ಸ್ವಯಂ ಧನ್ವಂತರಿಃ । ಉದ್ದೇಶವಾನ್ = ಚತುರ್ಥ್ಯಂತಃ ವರ್ಣಃ । ಪೂರ್ವ-
ಬಿಂದಂತಃ । ಧಕಾರಪೂರ್ವೋ ಹೃದಯಸಂಯುತಃ । ನಮಸ್ಕಾರಯುಗಿತಿ ಭಾವಃ ।
ಅಯಮಷ್ಟಾಕ್ಷರೋ ಮಂತ್ರ: । ಸರ್ವವ್ಯಾಧಿವಿನಾಶನಃ । ಅಷ್ಟಮಂತ್ರಾಃ ಹಾರಾಣಾಂ
ನಾಯಕೋಪಲಸನ್ನಿಭಃ ।
 
ಟೀಕಾರ್ಥ - ಶ್ಲೋಕದಲ್ಲಿರುವ 'ಸ್ವಯಂ'ಪದಕ್ಕೆ ಧನ್ವಂತರಿ ಎಂಬ ಪದವನ್ನು,
ಉದ್ದೇಶವಾನ್ ಎಂದರೆ ಚತುರ್ಥ್ಯಂತವಾದ ಎಂದರ್ಥ. 'ಧನ್ವಂತರಯೇ' ಎಂದಾಗುತ್ತದೆ.
ಧನ್ವಂತರಿ ಎಂಬ ಪದದ ಪೂರ್ವವರ್ಣವಾದ 'ಧ'ಎಂಬ ವರ್ಣವು, ಬಿಂದು
ಸಹಿತವಾಗಿದ್ದು, ಹೃದಯಸಂಯುತಃ ನಮಃ ಎಂಬ ಪದದಿಂದ ಕೂಡಿದಾಗ 'ಓಂ ಧಂ
ಧನ್ವಂತರಯೇ ನಮಃ' ಎಂದಾಗುತ್ತದೆ. ವಸುಧೇಂದ್ರರು 'ಪೂರ್ವಪೂರ್ವೋ
ಹೃದಯಸಂಯುತಃ' ಎಂಬ ಪಾಠವನ್ನು ಸ್ವೀಕರಿಸಿದ್ದಾರೆ. ಅವರ ಪ್ರಕಾರ ಪೂರ್ವ ಎಂಬ
ಪದಕ್ಕೆ 'ಧನ್ವಂತರಿ' ಎಂಬ ಪದದ ಪೂರ್ವದಲ್ಲಿರುವ ಬಿಂದು ಎಂದರ್ಥ. ಅದನ್ನು
ಕಡೆಯಲ್ಲಿ ಹೊಂದಿರುವ ಪೂರ್ವವರ್ಣವೆಂದರೆ ಧಕಾರವು. ಒಟ್ಟು ಧಂ ಎಂದಾಯಿತು.
 
ಇದು ಅಷ್ಟಾಕ್ಷರಮಂತ್ರವಾಗಿದೆ. 'ಸರ್ವವ್ಯಾಧಿವಿನಾಶನಃ' ಎಂಬ ಪಾಠವನ್ನು
ವಸುಧೇಂದ್ರರು ಸ್ವೀಕರಿಸಿದ್ದಾರೆ. ಅಷ್ಟಮಹಾಮಂತ್ರಗಳು ಹಾರದಂತಿದ್ದರೆ, ಧನ್ವಂತರೀ
ಮಂತ್ರವು ಇವುಗಳಿಗೆಲ್ಲಾ ನಾಯಕಮಣಿಯಂತೆ ರಾರಾಜಿಸುತ್ತಿದೆ.
 
ಧನ್ವಂತರೀಮಂತ್ರದ ಧ್ಯಾನಶ್ಲೋಕ
 
ಚಂದ್ರಘಕಾಂತಿಮಮೃತಾತ್ಮಕರೈರ್ಜಗಂತಿ
ಸಂಜೀವಯಂತಮಮಿತಾತಸುಖಂ ಪರೇಶಮ್ ।
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ
ಶೀತಾಂಶುಮಂಡಲಗತಂ ಸರತಾತ್ಮಸಂಸ್ಥಮ್ 194
 
ಅರ್ಥ ಅನೇಕ ಚಂದ್ರಕಾಂತಿಯನ್ನು ಹೊಂದಿರುವ, ತನ್ನ ಅಮೃತದಂತಿರುವ
ಕಿರಣಗಳಿಂದ ಜಗಜೀವನಪ್ರದನಾದ, ಒಂದು ಕೈಯಲ್ಲಿ ಜ್ಞಾನಮುದ್ರೆಯನ್ನು,
 
1. ವಿಶೇಷಾಂಶ
 
ಗಣಪತ್ಯಾದಿ ಮಂತ್ರಗಳಿಂದ ಕೊನೆಮಾಡಲು ಇಚ್ಛಿಸದ ಆಚಾರ್ಯರು
ಕಡೆಯಲ್ಲಿ ಧನಂತರೀಮಂತ್ರವನ್ನು ನಿರೂಪಿಸಿದ್ದಾರೆ.