This page has been fully proofread once and needs a second look.

೧೮೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಗರುಡಮಂತ್ರ - ಋಷ್ಯಾದಿಗಳು, ಧ್ಯಾನಪ್ರಕಾರ

 
ವ್ಯತ್ಯಸ್ತಪಕ್ಷಿತಾರ್‌ರೌ ಚ ಸ್ವಾಹಾಂತೋ ಗಾರುಡೋ ಮನುಃ ।

ಕಶ್ಯಪೋಽಸ್ಯ ಮುನಿರ್ಧ್ಯೆಯೇಯಃ ಸುಧಾಪೂರ್ಣ೦ ಹಿರಣ್ಯಮ್ ॥82 ೮೨
 

 
ದಧಾನಃ ಕುಂಭಮಭಯಂ ಪೀತಶುಕಾಕ್ಲಾರುಣೋ ಹರಿತ್ ।

ಕೃಷ್ಣಶಾಶ್ಚಾಜಾನುತೋ ನಾಭೇಃ ಕಂಠಾತ್ ಕಾದಂತ ಏವ ಚ ॥83 ೮೩
 

 
ಪ್ರಿಯಾಯುಕ್ ಪುರತೋ ವಿಷ್ಟೂಣೋಃ ಪಕ್ಷತುಂಡಸಮನ್ವಿತಃ ।

ಜಂಗಮಸ್ಥಾವರವಿಷಹೃದಯಂ ಸರ್ವಕಾಮದಃ
 
84।1
 
೮೪ ॥
 
ಅರ್ಥ
 
- ಪಕ್ಷಿಶಬ್ದವನ್ನು ತಿರುಗಿಸಿ ಹೇಳಿ, ಅದರೊಂದಿಗೆ ಓಂಕಾರ ಹಾಗೂ
ಸ್ವಾಹಾ ಎಂಬ ಪದವನ್ನು ಸೇರಿಸಬೇಕು. 'ಕ್ಷಿಪ ಓಂ ಸ್ವಾಹಾ' ಎಂದಾಗುತ್ತದೆ. ಇದು
ಕಾಶ್ಯಪಋಷಿಯು ಕಂಡ ಗರುಡಮಂತ್ರ,
 
.
 
ಗರುಡನು ಸುವರ್ಣದ ಅಮೃತಕಲಶವನ್ನು, ಅಭಯಮುದ್ರೆ ಯನ್ನು ಧರಿಸಿ-
ರುವನು. ದೇಹದಲ್ಲಿ ಪಾದದಿಂದ ಮೊಣಕಾಲಿನ- ವರೆಗೆ ಹಳದಿಬಣ್ಣವು, ಅಲ್ಲಿಂದ
ನಾಭಿಪರ್ಯಂತ ಬಿಳಿಯ ಬಣ್ಣವು, ಅಲ್ಲಿಂದ ಕಂಠದವರೆಗೂ ಕೆಂಪು ಬಣ್ಣವು,
ಅಲ್ಲಿಂದ ಶಿರಸ್ಸಿನವರೆಗೂ ಹಸಿರುಬಣ್ಣ, ಶಿರಸ್ಸಾದರೋ ಕಪ್ಪುಬಣ್ಣ ಹಾಗೂ ತನ್ನ
ಪತ್ನಿಯಾದ ಸೌಪರ್ಣಿಯ ಜೊತೆಗೆ ಕುಳಿತು ಭಗವಂತನ ಮುಂಭಾಗದಲ್ಲಿರುತ್ತಾನೆ.
ರೆಕ್ಕೆ ಹಾಗೂ ಕೊಕ್ಕುಗಳಿಂದ ಶೋಭಿಸು- ತ್ತಿರುವ ಗರುಡನನ್ನು ಧ್ಯಾನಿಸಬೇಕು. ಈ
ಮಂತ್ರಜಪದಿಂದ ಸ್ಥಾವರಗಳೆನಿಸಿದ ವಿಷವೃಕ್ಷಗಳ ಭಯವನ್ನು, ಜಂಗಮವೆನಿಸಿದ

ಸರ್ಪಾದಿಗಳ ವಿಷಯಭಯದಿಂದಲೂ ರಕ್ಷಿಸುತ್ತದೆ. ಇದಲ್ಲದೆ ಯಾವುದೇ
ಇಷ್ಟಾರ್ಥವನ್ನೂ ಗರುಡಮಂತ್ರಜಪದಿಂದ ಹೊಂದಬಹುದಾಗಿದೆ.
 
[^1].
 
ದಿಕ್ಷಾಲಕರ ಮಂತ್ರಗಳು
 

 
ಮಂತ್ರಾಶ್ಚ ಲೋಕಪಾಲಾನಾಂ ನಮೋಂತಾಃ ಸರ್ವಕಾಮದಾಃ
ಪೀತರಕ್ತಾಸಿತಶ್ವೇತರಕ್ತಶುಕ್ಲಾಶ್ಚ ವರ್ಣತಃ
 
118511
 
॥ ೮೫ ॥
 
ಸಪ್ರಿಯಾಃ ಸಾಭಯಾ ವಜ್ರಶಕ್ತಿದಂಡಾಸಿಪಾಶಿನಃ ।
 

 
[^
1]. ಗಾರುಡೋ ಮನುರಾಖ್ಯಾತಃ ವಿಷದ್ವಯವಿನಾಶನಃ ।