This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಸ್ವಯಮುದ್ದೇಶನತ್ಯಂತಃ
 
ಪೂರ್ವಪೂರ್ವ:ವಃ ಷಡಕ್ಷರಃ ।
 

ಸನತ್ಕುಮಾರದೃಷ್ಟಿಟೋऽಯಂ ಮಂತ್ರಃ ಶೇಷಸ್ಯ ಕಾಮದಃ ॥80।
 
೮೦ ॥
 
ವ.ಟಿ. - ಶೇಷಪೂರ್ವಃ । ಪೂರ್ವಾಕ್ಷರಃ ಸ ಪೂರ್ವೋ ಯಸ್ಯ ಸಃ ಪೂರ್ವಪೂರ್ವ-
ನಮಸ್ಕಾರಯುತಃ ಷಡಕ್ಷರ ಇತಿ ಭಾ
 
ವಃ।
 
ಟೀಕಾರ್ಥ
 
೧೮೧
 
-
 
ಪೂರ್ವಪೂರ್ವ ಎಂದರೆ ಶೇಷಶಬ್ದದ ಪೂರ್ವವಾದ ಶೇಂ ಎಂಬ
ಪದವು ಎಂದರ್ಥ. ಮೊದಲಲ್ಲಿರುವ ಚತುರ್ಥ್ಯಂತ- ವಾದ ಶೇಷ ಎಂಬ ಶಬ್ದ. ಕೊನೆಯಲ್ಲಿ
'ನಮಃ' ಎಂಬ ಪದವು ಸೇರಿಸಿದರೆ ಸನತ್ಕುಮಾರನಿಂದ ಕಂಡು ಹಿಡಿದಿರುವ 'ಓಂ ಶೇಂ

ಶೇಷಾಯ ನಮಃ' ಎಂದಾಗುತ್ತದೆ. ಈ ಮಂತ್ರಪದದಿಂದ ಸಕಲೇಪಿಪ್ಸಿತಗಳನ್ನೂ ಪಡೆಯ-
ಬಹುದಾಗಿದೆ.
 
[^1]
 
ಶೇಷಮಂತ್ರದ ಧ್ಯಾನಶ್ಲೋಕ
 

 
ದಧಾನೋ ಹಲ ಸೌನಂದ್ದೌ ಶ್ವೇತವರ್ಣಃ ಕೃತಾಂಜಲಿಃ ।

ಸಹಸ್ರಮೂರ್ಧಾದ್ವಿತೀಯಕರ್ಣಭೂಷಃ ಪ್ರಿಯಾಯುತಃ ।

ವನಮಾಲೀ ನೀಲವಾಸಾ ಧೈಧ್ಯೇಯೋ ವಿಷ್ಣೋಸ್ತು ಪೃಷ್ಠತಃ 81
 
೮೧ ॥
 
ಅರ್ಥ - ನೇಗಿಲು ಮತ್ತು ಮುಸಲವನ್ನು ಧರಿಸಿರುವ, ಶ್ವೇತವರ್ಣ- ದವನಾದ,
ಕೈಜೋಡಿಸಿ ಅಂಜಲಿಬದ್ಧನಾದ, ಸಾವಿರಹೆಡೆಗಳುಳ್ಳ, ಒಂದು ಕಿವಿಯಲ್ಲಿ ಮಾತ್ರ
ಕರ್ಣಾಭರಣವನ್ನು ಧರಿಸಿರುವ, ನೀಲಾಂಬರಧಾರಿಯಾದ, ಭಗವಂತನ ಹಿಂಭಾಗ-
ದಲ್ಲಿ ನಿಂತಿರುವ ಶೇಷದೇವನನ್ನು ಧ್ಯಾನಿಸಬೇಕು.
 
[^2]
 
[^
1]. ಶೇಷಮಂತ್ರದ ಅಂಗನ್ಯಾಸ -
 

ಓಂ ಶೇಂ ಹೃದಯಾಯ ನಮಃ । ಓಂ ಶೇಷಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯ್ಕೆ
ಯೈ ವೌಷಟ್ । ಓಂ ಶೇಂ ಕವಚಾಯ್ ಹುಮ್ । ಓಂ ಶೇಷಾಯ ನೇತ್ರಾಭ್ಯಾಂ ವಷಟ್ । ಓಂ
ನಮಃ ಅಸ್ತ್ರಾಯ ಫಟ್ । ಇತಿ ದಿಬ್ಗ್ಬಂಧಃ
 
1
 

[^
2]. ವಿಶೇಷಾಂಶ - ಶೇಷದೇವನು ಸಾವಿರಹೆಡೆಯಿಂದ ಕೂಡಿದ್ದು, ಬಿಳಿಬಣ್ಣದವನಾಗಿರುವನು.
ತನ್ನ ಎಡಭಾಗದ ಕಿವಿಯಲ್ಲಿ ಮಾತ್ರ ಕರ್ಣಭೂಷಣಧರಿಸಿರುವನು. ಎಡಗೈಯಲ್ಲಿ ನೇಗಿಲು
ಹಾಗೂ ಬಲಗೈಯಲ್ಲಿ ಒನಕೆ ಹಿಡಿದಿರುವನು. ಶತ್ರು- ವನ್ನು ನೇಗಿಲಿನಿಂದ ತನ್ನೆಡೆಗೆ ಎಳೆದು,
ಮಣ್ಣಿನ ಹೆಂಟೆಯನ್ನು ಒಡೆಯುವಂತೆ ಒನಕೆಯಿಂದ ತಲೆಯನ್ನು ಒಡೆದು ಹಾಕುವನು.

ನೀಲವಾದ ವಸ್ತ್ರಧರಿಸಿರುವವನು. ಕುತ್ತಿಗೆಯಿಂದ ಆರಂಭಿಸಿ ಪಾದಗಳವರೆಗೂ ಜೋಲಾ-
ಡುತ್ತಿರುವ ವನಮಾಲೆಯನ್ನು ಧರಿಸಿರುವನು.