This page has not been fully proofread.

ಚತುರ್ಥೋಽಧ್ಯಾಯಃ
 
ಸ್ವಯಮುದ್ದೇಶನತ್ಯಂತಃ
 
ಪೂರ್ವಪೂರ್ವ: ಷಡಕ್ಷರಃ ।
 
ಸನತ್ಕುಮಾರದೃಷ್ಟಿಯಂ ಮಂತ್ರಃ ಶೇಷಸ್ಯ ಕಾಮದಃ ॥80।
 
ವ.ಟಿ. - ಶೇಷಪೂರ್ವಃ । ಪೂರ್ವಾಕ್ಷರಃ ಸ ಪೂರ್ವೋ ಯಸ್ಯ ಸಃ ಪೂರ್ವಪೂರ್ವ-
ನಮಸ್ಕಾರಯುತಃ ಷಡಕ್ಷರ ಇತಿ ಭಾವ
 
ಟೀಕಾರ್ಥ
 
೧೮೧
 
-
 
ಪೂರ್ವಪೂರ್ವ ಎಂದರೆ ಶೇಷಶಬ್ದದ ಪೂರ್ವವಾದ ಶೇಂ ಎಂಬ
ಪದವು ಎಂದರ್ಥ. ಮೊದಲಲ್ಲಿರುವ ಚತುರ್ಥ್ಯಂತವಾದ ಶೇಷ ಎಂಬ ಶಬ್ದ. ಕೊನೆಯಲ್ಲಿ
'ನಮಃ' ಎಂಬ ಪದವು ಸೇರಿಸಿದರೆ ಸನತ್ಕುಮಾರನಿಂದ ಕಂಡು ಹಿಡಿದಿರುವ 'ಓಂ ಶೇಂ
ಶೇಷಾಯ ನಮಃ' ಎಂದಾಗುತ್ತದೆ. ಈ ಮಂತ್ರಪದದಿಂದ ಸಕಲೇಪಿತಗಳನ್ನೂ ಪಡೆಯ-
ಬಹುದಾಗಿದೆ.
 
ಶೇಷಮಂತ್ರದ ಧ್ಯಾನಶ್ಲೋಕ
 
ದಧಾನೋ ಹಲ ಸೌನಂದ್ ಶ್ವೇತವರ್ಣಃ ಕೃತಾಂಜಲಿಃ ।
ಸಹಸ್ರಮೂರ್ಧಾರ ದ್ವಿತೀಯಕರ್ಣಭೂಷಃ ಪ್ರಿಯಾಯುತಃ ।
ವನಮಾಲೀ ನೀಲವಾಸಾ ಧೈಯೋ ವಿಷ್ಣಸ್ತು ಪೃಷ್ಠತಃ 81॥
 
ಅರ್ಥ - ನೇಗಿಲು ಮತ್ತು ಮುಸಲವನ್ನು ಧರಿಸಿರುವ, ಶ್ವೇತವರ್ಣದವನಾದ,
ಕೈಜೋಡಿಸಿ ಅಂಜಲಿಬದ್ಧನಾದ, ಸಾವಿರಹೆಡೆಗಳುಳ್ಳ, ಒಂದು ಕಿವಿಯಲ್ಲಿ ಮಾತ್ರ
ಕರ್ಣಾಭರಣವನ್ನು ಧರಿಸಿರುವ, ನೀಲಾಂಬರಧಾರಿಯಾದ, ಭಗವಂತನ ಹಿಂಭಾಗ-
ದಲ್ಲಿ ನಿಂತಿರುವ ಶೇಷದೇವನನ್ನು ಧ್ಯಾನಿಸಬೇಕು.
 
1. ಶೇಷಮಂತ್ರದ ಅಂಗನ್ಯಾಸ -
 
ಓಂ ಶೇಂ ಹೃದಯಾಯ ನಮಃ । ಓಂ ಶೇಷಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯ್ಕೆ
ವೌಷಟ್ । ಓಂ ಶೇಂ ಕವಚಾಯ್ ಹುಮ್ । ಓಂ ಶೇಷಾಯ ನೇತ್ರಾಭ್ಯಾಂ ವಷಟ್ । ಓಂ
ನಮಃ ಅಸ್ರಾಯ ಫಟ್ । ಇತಿ ದಿಬ್ಬಂಧಃ
 
1
 
2. ವಿಶೇಷಾಂಶ - ಶೇಷದೇವನು ಸಾವಿರಹೆಡೆಯಿಂದ ಕೂಡಿದ್ದು, ಬಿಳಿಬಣ್ಣದವನಾಗಿರುವನು.
ತನ್ನ ಎಡಭಾಗದ ಕಿವಿಯಲ್ಲಿ ಮಾತ್ರ ಕರ್ಣಭೂಷಣಧರಿಸಿರುವನು. ಎಡಗೈಯಲ್ಲಿ ನೇಗಿಲು
ಹಾಗೂ ಬಲಗೈಯಲ್ಲಿ ಒನಕೆ ಹಿಡಿದಿರುವನು. ಶತ್ರುವನ್ನು ನೇಗಿಲಿನಿಂದ ತನ್ನೆಡೆಗೆ ಎಳೆದು,
ಮಣ್ಣಿನ ಹೆಂಟೆಯನ್ನು ಒಡೆಯುವಂತೆ ಒನಕೆಯಿಂದ ತಲೆಯನ್ನು ಒಡೆದು ಹಾಕುವನು.
ನೀಲವಾದ ವಸ್ತ್ರಧರಿಸಿರುವವನು. ಕುತ್ತಿಗೆಯಿಂದ ಆರಂಭಿಸಿ ಪಾದಗಳವರೆಗೂ ಜೋಲಾ-
ಡುತ್ತಿರುವ ವನಮಾಲೆಯನ್ನು ಧರಿಸಿರುವನು.