This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಅಂತರ್ಯಾಮಿತಯಾ ಧೈಯಃ ಸರ್ವದೇವೇಷು ಸರ್ವದಾ ॥7811
 
ಅರ್ಥ
 
ಈ ಮೇಲೆ ಹೇಳಿದ ಮಂತ್ರಗಳ ಆದಿಯಲ್ಲಿ ಶ್ರವಣ ವಿಶರಣದೋಷ
ಪರಿಹಾರಕ್ಕಾಗಿ ಓಂಕಾರವನ್ನು ಹೇಳಲೇಬೇಕು. ಈ ಓಂಕಾರವಾಚ್ಯನಾದವನು
ಭಗವಂತನೇ ಆಗಿರುವನು. ಇದೇ ರೀತಿ ಎಲ್ಲಾ ಮಂತ್ರಪ್ರತಿಪಾದ್ಯದೇವತೆಗಳ
ಅಂತರ್ಯಾಮಿಯಾದ ಭಗವಂತನೇ ಸಮಸ್ತಮಂತ್ರಗಳಿಗೆ ಮುಖ್ಯ ಪ್ರತಿಪಾದ್ಯ-
ನಾಗಿರುವನೆಂದು ತಿಳಿಯಬೇಕು.
 
೧೮೦
 
-
 
ಪಾರ್ವತೀಪಂಚಾಕ್ಷರ ಮಂತ್ರ
 
ಸ ಏವ ವನಿತಾಲಿಂಗಃ ಪಾರ್ವತ್ಯಾ ಮನುರುಚ್ಯತೇ ।
ಗೌರೀ ವರಾಭಯಕರಾ ಧೈಯಾ ಪೀತಾಂಬರಾ ಚ ಸಾ 79
 
ಅರ್ಥ
 
ಶಿವಪಂಚಾಕ್ಷರಮಂತ್ರದಲ್ಲಿರುವ ಶಿವಶಬ್ದವನ್ನು ಸ್ತ್ರೀಲಿಂಗದಲ್ಲಿ
ಪಠಿಸಿದರೆ ಪಾರ್ವತೀಮಂತ್ರವಾಗುತ್ತದೆ. (ಓಂ ನಮಃ ಶಿವಾಯ' ಎಂದು ಮಂತ್ರ-
ಸ್ವರೂಪ), ಗೌರೀದೇವಿಯು ತನ್ನ ಕರಗಳಲ್ಲಿ ವರಮುದ್ರೆ - ಅಭಯಮುದ್ರೆ
ಧರಿಸಿದ್ದು, ಪೀತಾಂಬರಧಾರಿಯಾಗಿರುವ ಪಾರ್ವತೀದೇವಿಯನ್ನು ಧ್ಯಾನಿಸಬೇಕು.
ವ.ಟೀ - ಸ ಶಿವ ಏವ ವನಿತಾಲಿಂಗ ಪಾರ್ವತೀಮಂತ್ರ ।
 
ಶೇಷಮಂತ್ರ; ಅಂಗನ್ಯಾಸ, ಧ್ಯಾನಾದಿಗಳು
 
1. ಪಾರ್ವತೀಪಂಚಾಕ್ಷರ -
 
ಅಸ್ಯಶ್ರೀ ಪಂಚಾಕ್ಷರಮಂತ್ರಸ್ಯ, ವಾಮದೇವ ಋಷಿಃ, ಪಂಕ್ತಿಛಂದಃ, ಜಪೇ ವಿನಿಯೋಗಃ -
ಅಕ್ಷರಗಳಿಂದಲೇ ಅಂಗನ್ಯಾಸ -
 
ಓಂ ಓಂ ಹೃದಯಾಯ ನಮಃ । ಓಂ ನಮಃ ಶಿರಸೇ ಸ್ವಾಹಾ । ಓಂ ಶಿವಾಯ್ಕೆ ಶಿಖಾಯ್ಕೆ
ವೌಷಟ್ । ಓಂ ಓಂ ಕವಚಾಯ ಹುಮ್ । ಓಂ ನಮಃ ನೇತ್ರಾಭ್ಯಾಂ ವೌಷಟ್ । ಓಂ
ಶಿವಾಯ್ಕೆ ಅಸ್ರಾಯ ಫಟ್ । ಇತಿ ದಿಗ್ವಂಧಃ ।
 
ಗೌರ್ಯಂತರ್ಗತ ಭಾರತೀರಮಣಮುಖ್ಯ ಪ್ರಾಣಾಂತರ್ಗತ ಶ್ರೀಜಯಾಪತಿಸಂಕರ್ಷಣ
ಪ್ರೇರಣಯಾ ತತೀತ್ಯರ್ಥಂ ಯಥಾಶಕ್ತಿ ಪಾರ್ವತೀಪಂಚಾಕ್ಷರಜಪಾಖ್ಯಂ ಕರ್ಮ ಕರಿಷ್ಯ
ಈ ಮಂತ್ರ ಜಪದ ಫಲ – ದಾಂಪತ್ಯ ಜೀವನ ಸುಖವಾಗಿರುವುದು, ಪುತ್ರಪೌತ್ರಾದಿಸಂಪತ್ತು,
ಭಗವಂತನಲ್ಲಿ ಮನಸ್ಸು, ಭಕ್ತಾದಿಗಳು ಲಭ್ಯ.