This page has been fully proofread once and needs a second look.

ಆದ್ಯೈಸ್ತಾರಚತುವರ್ಣೈರ್ಭಿನ್ನಾವ್ಯಾಹೃತಯಃ ಕ್ರಮಾತ್ ॥ ೧೧ ॥
 
ಅರ್ಥ- 'ಓಂ ನಮೋ ನಾರಾಯಣಾಯ' ಎಂಬ ಅಷ್ಟಾಕ್ಷರ ಮಂತ್ರದ ಎಂಟು ಅಕ್ಷರಗಳೂ ಓಂಕಾರದ ಎಂಟು ಅಕ್ಷರಗಳಿಂದ ವ್ಯಕ್ತವಾಗಿವೆ. ಹಾಗೆಯೇ ಓಂಕಾರದ ಮೊದಲಿನ ಅ-ಉ-ಮ-ನಾದಗಳಿಂದ ಕ್ರಮವಾಗಿ ಭೂಃ, ಭುವಃ, ಸ್ವಃ, ಭೂರ್ಭುವಸ್ಸ್ವಃ ಎಂಬ ವ್ಯಸ್ತಸಮಸ್ತವ್ಯಾಹೃತಿಗಳು ಅಭಿವ್ಯಕ್ತವಾಗಿವೆ.
 
ವ.ಟೀ.- ಅಧುನಾ ನಾರಾಯಣಾಷ್ಟಾಕ್ಷರೋತ್ಪತ್ತಿಮಾಹ- ನಾರಾಯಣೇತಿ ॥ ತಾರಾಷ್ಟಾಕ್ಷರೇಭ್ಯಃ = ಪ್ರಣವಾಷ್ಟಾಕ್ಷರೇಭ್ಯಃ, ಕ್ರಮೇಣ ನಾರಾಯಣಾಷ್ಟಾಕ್ಷರೋ ಜಾತ ಇತ್ಯರ್ಥಃ ।
ವ್ಯಾಹೃತ್ಯು- ತ್ಪತ್ತಿಮಾಹ - ಆದ್ಯೈರಿತಿ ॥ ತಾರಸ್ಯ = ಪ್ರಣವಸ್ಯ, ಆದ್ಯೈಃ ಚತುರ್ವರ್ಣೈಃ ಅಕಾರೋಕಾರಮಕಾರಬಿಂದುಭಿಃ ವ್ಯಾಹೃತಯೋ ವ್ಯಸ್ತ-ಸಮಸ್ತ-ನ್ಯಾಯೇನ ಚತಸ್ರಃ ಕ್ರಮಾದುತ್ಪನ್ನಾಃ ॥
 
ಟೀಕಾರ್ಥ - ಈಗ ನಾರಾಯಣಾಷ್ಟಾಕ್ಷರವು ಉತ್ಪನ್ನವಾದ ರೀತಿ- ಯನ್ನು ಹೇಳುವರು ನಾರಾಯಣ ಇತ್ಯಾದಿ ಶ್ಲೋಕದಿಂದ, ತಾರಾಷ್ಟಾಕ್ಷರೇಭ್ಯಃ ಎಂದರೆ ಪ್ರಣವದ ಎಂಟು ಅಕ್ಷರಗಳಿಂದ ಎಂದರ್ಥ. ಕ್ರಮೇಣ ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರಮಂತ್ರವು ಉತ್ಪನ್ನವಾಯಿತು. ಇನ್ನು ವ್ಯಾಹೃತಿಯು ಉತ್ಪನ್ನವಾದ ಬಗೆಯನ್ನು ಆದ್ಯೈಃ ಎಂಬುದರಿಂದ ಹೇಳುವರು.
 
ಪ್ರಣವದ ಮೊದಲಿನ ನಾಲ್ಕು ಅಕ್ಷರಗಳಾದ ಅಕಾರ, ಉಕಾರ, ಮಕಾರ, ಬಿಂದುಗಳಿಂದ ಭೂಃ, ಭುವಃ, ಸ್ವಃ ಎಂಬ ಮೂರು ವ್ಯಸ್ತ ವ್ಯಾಹೃತಿಗಳೂ, ಭೂರ್ಭುವಸ್ಸ್ವಃ ಎಂಬ ಸಮಸ್ತವ್ಯಾಹೃತಿಯೂ ಕ್ರಮವಾಗಿ ಅಂದರೆ ಅಕಾರದಿಂದ ಭೂಃ, ಉಕಾರದಿಂದ ಭುವಃ,
ಮಕಾರದಿಂದ ಸ್ವಃ, ಬಿಂದುವಿನಿಂದ ಅಥವಾ ನಾದದಿಂದ ಭೂರ್ಭುವಸ್ವಃ ಎಂಬ ವ್ಯಾಹೃತಿಯೂ ಹುಟ್ಟಿತು.[^1]
 
ವಾಸುದೇವದ್ವಾದಶಾಕ್ಷರಮಂತ್ರದ ಉತ್ಪತ್ತಿ
 

 
[^1]. ವಿಶೇಷಾಂಶ - ವಸುಧೇಂದ್ರರು ಅಕಾರ, ಉಕಾರ, ಮಕಾರ, ಬಿಂದು, ನಾದವೆಂದು; ಬಿಂದುವು ನಾಲ್ಕನೆ ಅಕ್ಷರವಾಗಿಯೂ, ನಾದವು ಐದನೆ ಅಕ್ಷರವಾಗಿಯೂ ಹೇಳಿದ್ದಾರೆ. ರಾಘವೇಂದ್ರರೂ ಸಹ ನಾದವನ್ನೇ ಮೊದಲು ಹೇಳಿದ್ದಾರೆ. ಇದಕ್ಕೆ ಮಾಂಡೂಕೋಪನಿಷತ್ತಿನ ಸಮಾಖ್ಯೆ ಇದೆ.
 
ಶ್ರೀಮದಾಚಾರ್ಯರೂ ಸಹ 'ಬಿಂದುರ್ವಕ್ತ್ಯನಿರುದ್ಧಕಮ್, ಪ್ರದ್ಯುಮ್ನಾದೀನ್ ನಾದಪೂರ್ವಾಃ' ಎಂದು ಬಿಂದುವನ್ನೇ ಮೊದಲು ಹೇಳಿದ್ದಾರೆ. ಇದನ್ನೇ ಬಳಸಿಕೊಂಡಿರುವಂತಿದೆ.