This page has not been fully proofread.

ಚತುರ್ಥೋಽಧ್ಯಾಯಃ
 
L
 
ವ.ಟೀ. - ಸತ್ತಾಬೀಜಮ್ = ಭೂರಿತಿ ದುರ್ಬಿಜಂ = ದುಃ ಇತಿ ।
 
ಪಂಚಾಕ್ಷರ ಭೂಮಂತ್ರ - ದುರ್ಗಾಷಡಕ್ಷರಮಂತ್ರ
ನಮೋಹಂತಂ ಸ್ಟೇನ ಸಹಿತಸ್ತದೇವಾಸ್ಕೋ ಮನುಃ ಸ್ಮೃತಃ ।
ದುರ್ಗಾ ತ್ರಿಷ್ಟುಪ್ ಕಶ್ಯಪೋಕ್ತಾ ತತ್ರ ವರ್ಣೋಹಗ್ನಿವತ್ ಸ್ಮೃತಃ ॥62॥
 
ಅರ್ಥ - ನಮಸ್ಕಾರಯುಕ್ತವಾದ, ಚತುರ್ಥ್ಯಂತ ಪದವಾದ ದುರ್ಗಾಪದದಿಂದ
ಕೂಡಿರುವ ದುಃಎಂಬ ಬೀಜಾಕ್ಷರವುಳ್ಳ 'ದುಂ ದುರ್ಗಾಯ್ಯಃ ನಮಃ' ಎಂಬ
ಮಂತ್ರ; ಹಾಗೂ 'ಭೂಂ ಭುವೇ ನಮಃ' ಎಂಬ ಭೂಪಂಚಾಕ್ಷರಮಂತ್ರವೇರ್ಪಡು
ತದೆ. ದುರ್ಗೆಯ ಮತ್ತೊಂದು ಮಂತ್ರವೆಂದರೆ ದುರ್ಗಾಷ್ಟುಪ್ ವೇದಮಂತ್ರ.
ಇದು ಕಶ್ಯಪ ಋಷಿಯಿಂದ ದೃಷ್ಟವಾಗಿದ್ದು 'ಜಾತವೇದಸೇ ಸುನವಾಮ ಸೋಮ'
ಇತ್ಯಾದಿ ಋಜಂತ್ರವು. ಧ್ಯಾನದಲ್ಲಿ ಅಗ್ನಿಯಂತೆ ಬಣ್ಣವುಳ್ಳದ್ದು ಧೈಯದುರ್ಗಾ-
ರೂಪವೆಂದು ತಿಳಿಯುವುದು.
 
ವ.ಟೀ. ನಮಸ್ಕಾರಯುತೈಃ । ಚತುರ್ಥ್ಯಂತೇನ ದುರ್ಗಾಪದೇನ ಸಂಯುಕ್ತಂ
ದುರ್ಬಿಜಮ್ । ಅನ್ನೋ ಮನುಃ ಸ್ಮೃತಃ । ದುರ್ಗಾ ತ್ರಿಷ್ಟುಪ್ ।
 
1
 
ದುರ್ಗಾಸ್ವರೂಪ
 
ತ್ರಿನೇತ್ರತ್ವಂ ಚ ದುರ್ಗಾಯಾಃ ಪ್ರಾಯಃ ಸರ್ವತ್ರ ಕಥ್ಯತೇ ।
ಪಾದೈಃ ಸಮಸ್ತೇನ ತಥಾ ಷರ್ಡ್ವನಾಂಗಮುಚ್ಯತೇ ॥63॥
 
೧೭೩
 
ಅರ್ಥ ದುರ್ಗಾದೇವಿಯ ಮಂತ್ರಧ್ಯಾನದಲ್ಲಿ ಧೈಯಮೂರ್ತಿಯನ್ನು
ಧ್ಯಾನಿಸುವಾಗ ಅವಳು ತ್ರಿನೇತ್ರಳೆಂದೇ ಧ್ಯಾನಮಾಡುವುದು ಬಹುಶ ಎಲ್ಲಕಡೆ
ಕಂಡುಬರುತ್ತದೆ.
 
-
 
ವೈದಿಕದುರ್ಗಾಮಂತ್ರದ ಅಂಗನ್ಯಾಸವನ್ನು 'ಜಾತವೇದಸೇ' ಇತ್ಯಾದಿ ಪದ-
ಗಳಿಂದಲೂ ಹಾಗೂ ಸಮಸ್ತಪಾದಗಳಿಂದಲೂ ಸೇರಿಸಿ ಮಾಡಬೇಕು. ಹಾಗೆಯೇ
ದುರ್ಗಾಷಡಕ್ಷರಮಂತ್ರಕ್ಕೂ ಮಂತ್ರದ ಅಕ್ಷರಗಳಿಂದಲೇ ಅಂಗನ್ಯಾಸ ಮಾಡಿಕೊಳ್ಳ-
ಬೇಕು!.
 
1. ವೈದಿಕದುರ್ಗಾಮಂತ್ರದ ಅಂಗನ್ಯಾಸ -
 
ಓಂ ಜಾತವೇದಸೇ ಸುನವಾಮ ಸೋಮಂ ಹೃದಯಾಯ ನಮಃ ।