2023-05-15 10:43:49 by jayusudindra
This page has been fully proofread once and needs a second look.
ಚತುರ್ಥೋಽಧ್ಯಾಯಃ
ಅರ್ಥ - ಕುದುರೆಯ ಮುಖವುಳ್ಳ, ಚಂದ್ರಬಿಂಬದಲ್ಲಿರುವ, ಚಂದ್ರನಂತೆಯೇ
ಕಾಂತಿ ಹೊಂದಿರುವ, ಅಮೃತವನ್ನೇ ಸುರಿಸುತ್ತಿರುವ, ತನ್ನ ಕಿರಣಗಳಿಂದ
ಬ್ರಹ್ಮಾಂಡದ ಒಳಹೊರಗೂ, ಎಲ್ಲೆಡೆಯೂ ಬೆಳಗುತ್ತಿರುವ, ಕೈಯ್ಯಲ್ಲಿ ಶಂಖ,
ಅಕ್ಷಮಾಲೆ, ಪುಸ್ತಕ, ಜ್ಞಾನಮುದ್ರೆ ಧರಿಸಿರುವ, ಮೂಗು ಹಾಗೂ ಬಾಯಿ- ಯಿಂದ
ನಿರಂತರವಾಗಿ ಸಕಲವಿದ್ಯೆಗಳನ್ನು ಹೊರಗೆಡಹುತ್ತಿರುವ, ಭಕ್ತಿಯಿಂದ ಬಗ್ಗಿರುವ
ಬ್ರಹ್ಮಾದಿದೇವತೆಗಳಿಂದ ಸೇವಿಸಲ್ಪಡು- ತ್ತಿರುವ, ಪಕ್ಕದಲ್ಲಿರುವ ಲಕ್ಷ್ಮೀದೇವಿಯಿಂದ
ಅಮೃತಾಭಿಷೇಕ- ವನ್ನು ಪಡೆಯುತ್ತಿರುವ ಹಯಗ್ರೀವ ಭಗವಂತನನ್ನು ನಮ
ಸ್ಕರಿಸು ತ್ತೇನೆ.
೧೬೯
ಕಪಿಲ - ದತ್ತಾತ್ರೇಯ ಮಂತ್ರ; ಧೈ ಧ್ಯೇಯಸ್ವರೂಪವಿಚಾರ
ಸ್ವಯಮುದ್ದೇಶವಾನ್ ಪೂರ್ವವರ್ಣಪೂರ್ವೊವೋ ನಮೋಯುತಃ ।
ಸತಾರೋSಷ್ಟಾಕ್ಷರಶೈಶ್ಚೈವ ನವಾರ್ಣಶ್ಚ ಮನೂ ಸ್ಮೃತ್ತೌ II521
೫೨ ॥
ಅರ್ಥ - ಸ್ವಯಂ ಎಂದರೆ ಕಪಿಲ ಹಾಗೂ ದತ್ತಾತ್ರೇಯ ಎಂಬ ಶಬ್ದಗಳೆಂದರ್ಥ.
ಓಂಕಾರದಿಂದ ಕೂಡಿರುವ, ತನ್ನ ಮೊದಲನೆಯ ಅಕ್ಷರಗಳಿಂದ ಕೂಡಿರುವ,
ಚತುರ್ಥ್ಯಂತಗಳಾದ ಕಪಿಲ, ದತ್ತಾತ್ರೇಯ ಶಬ್ದಗಳ ಕಡೆಯಲ್ಲಿ ನಮಃಶಬ್ದದಿಂದ
ಕೂಡಿದಾಗ ಕಪಿಲಾಷ್ಟಾಕ್ಷರ ಹಾಗೂ ದತ್ತಾತ್ರೇಯಾಷ್ಟಕ್ಷರ ಮಂತ್ರಗಳ ಆದಿ ಅಕ್ಷರಗಳು ಕ
ಮತ್ತು ದ ಎಂದು ಅಭಿಪ್ರಾಯ.
ವ.ಟಿ. - ಸ್ವಯಂ ಕಪಿಲದತ್ತಾತ್ರೇಮ್ ಯೌ। ಸ್ವಪೂರ್ವಾಕ್ಷರ- ಪೂರ್ವಾಕ್ಟರ್‌ಷರೌ । ಸಪ್ರಣವ್ವೌ ।
ನಮಸ್ಕಾರಯುತ್ತೌ । ಕ್ರಮೇಣಾಷ್ಟಾಕ್ಷರೌ ಕ, ದ ಪೂರ್ವಾರ್ಣ್ಣೌ ಇತಿ ಭಾವಃ ॥
1
ಉಭಯೋರಪ್ಯೇಕಪ್ರಕಾರಂ ಧ್ಯಾನಮಾಹ - ಪ್ರೋದ್ಯದಿತಿ ॥
ಅರ್ಥ - ಕಪಿಲ ಹಾಗೂ ದತ್ತಾತ್ರೇಯ ಈ ಎರಡೂ ಮಂತ್ರಗಳಿಗೆ ಸಮಾನವಾದ
ಧ್ಯಾನಶ್ಲೋಕವನ್ನು 'ಪ್ರೋದ್ಯತ್' ಎಂದು ಹೇಳುತ್ತಾರೆ.
ಪ್ರೋದ್ಯದ್ದಿವಾಕರಸಮಾನತನುಂ ಸಹಸ್ರ-
ಸೂರ್ಯೋರುದೀಧಿತಿಭಿರಾಪ್ತಸಮಸ್ತಲೋಕಮ್ ।
ಜ್ಞಾನಾಭಯಾಂಕಿತಕರಂ ಕಪಿಲಂ ಚ ದತ್ತಂ
ಧ್ಯಾಯೇದಜಾದಿಸಮಿತಿಂ ಪ್ರತಿ ಬೋಧಯಂತಮ್ ॥53 ೫೩ ॥