This page has not been fully proofread.

ಚತುರ್ಥೋಽಧ್ಯಾಯಃ
 
ಅರ್ಥ - ಕುದುರೆಯ ಮುಖವುಳ್ಳ, ಚಂದ್ರಬಿಂಬದಲ್ಲಿರುವ, ಚಂದ್ರನಂತೆಯೇ
ಕಾಂತಿ ಹೊಂದಿರುವ, ಅಮೃತವನ್ನೇ ಸುರಿಸುತ್ತಿರುವ, ತನ್ನ ಕಿರಣಗಳಿಂದ
ಬ್ರಹ್ಮಾಂಡದ ಒಳಹೊರಗೂ, ಎಲ್ಲೆಡೆಯೂ ಬೆಳಗುತ್ತಿರುವ, ಕೈಯ್ಯಲ್ಲಿ ಶಂಖ,
ಅಕ್ಷಮಾಲೆ, ಪುಸ್ತಕ, ಜ್ಞಾನಮುದ್ರೆ ಧರಿಸಿರುವ, ಮೂಗು ಹಾಗೂ ಬಾಯಿಯಿಂದ
ನಿರಂತರವಾಗಿ ಸಕಲವಿದ್ಯೆಗಳನ್ನು ಹೊರಗೆಡಹುತ್ತಿರುವ, ಭಕ್ತಿಯಿಂದ ಬಗ್ಗಿರುವ
ಬ್ರಹ್ಮಾದಿದೇವತೆಗಳಿಂದ ಸೇವಿಸಲ್ಪಡುತ್ತಿರುವ, ಪಕ್ಕದಲ್ಲಿರುವ ಲಕ್ಷ್ಮೀದೇವಿಯಿಂದ
ಅಮೃತಾಭಿಷೇಕವನ್ನು ಪಡೆಯುತ್ತಿರುವ ಹಯಗ್ರೀವ ಭಗವಂತನನ್ನು ನಮ
ಸ್ಕರಿಸುತ್ತೇನೆ.
 
೧೬೯
 
ಕಪಿಲ - ದತ್ತಾತ್ರೇಯ ಮಂತ್ರ; ಧೈಯಸ್ವರೂಪವಿಚಾರ
ಸ್ವಯಮುದ್ದೇಶವಾನ್ ಪೂರ್ವವರ್ಣಪೂರ್ವೊ ನಮೋಯುತಃ ।
ಸತಾರೋSಷ್ಟಾಕ್ಷರಶೈವ ನವಾರ್ಣಶ್ಚ ಮನೂ ಸ್ಮೃತ್ II521
 
ಅರ್ಥ - ಸ್ವಯಂ ಎಂದರೆ ಕಪಿಲ ಹಾಗೂ ದತ್ತಾತ್ರೇಯ ಎಂಬ ಶಬ್ದಗಳೆಂದರ್ಥ.
ಓಂಕಾರದಿಂದ ಕೂಡಿರುವ, ತನ್ನ ಮೊದಲನೆಯ ಅಕ್ಷರಗಳಿಂದ ಕೂಡಿರುವ,
ಚತುರ್ಥ್ಯಂತಗಳಾದ ಕಪಿಲ, ದತ್ತಾತ್ರೇಯ ಶಬ್ದಗಳ ಕಡೆಯಲ್ಲಿ ನಮಃಶಬ್ದದಿಂದ
ಕೂಡಿದಾಗ ಕಪಿಲಾಷ್ಟಾಕ್ಷರ ಹಾಗೂ ದತ್ತಾತ್ರೇಯಾಷ್ಟಕ್ಷರ ಮಂತ್ರಗಳ ಆದಿ ಅಕ್ಷರಗಳು ಕ
ಮತ್ತು ದ ಎಂದು ಅಭಿಪ್ರಾಯ.
 
ವ.ಟಿ. - ಸ್ವಯಂ ಕಪಿಲದತ್ತಾತ್ರೇಮ್ । ಸ್ವಪೂರ್ವಾಕ್ಷರಪೂರ್ವಾಕ್ಟರ್‌ । ಸಪ್ರಣವ್ ।
ನಮಸ್ಕಾರಯುತ್ । ಕ್ರಮೇಣಾಷ್ಟಾಕ್ಷ ಕ, ದ ಪೂರ್ವಾರ್ಣ್ ಇತಿ ಭಾವಃ ॥
 
1
 
ಉಭಯೋರಕಪ್ರಕಾರಂ ಧ್ಯಾನಮಾಹ - ಪ್ರೋದ್ಯದಿತಿ ॥
 
ಅರ್ಥ ಕಪಿಲ ಹಾಗೂ ದತ್ತಾತ್ರೇಯ ಈ ಎರಡೂ ಮಂತ್ರಗಳಿಗೆ ಸಮಾನವಾದ
ಧ್ಯಾನಶ್ಲೋಕವನ್ನು 'ಪ್ರೋದ್ಯತ್' ಎಂದು ಹೇಳುತ್ತಾರೆ.
 
ಪ್ರೋದ್ಯದಿವಾಕರಸಮಾನತನುಂ ಸಹಸ್ರ-
ಸೂರ್ಯೋರುದೀಧಿತಿಭಿರಾಪ್ತಸಮಸ್ತಲೋಕಮ್ ।
ಜ್ಞಾನಾಭಯಾಂಕಿತಕರಂ ಕಪಿಲಂ ಚ ದತ್ತಂ
 
ಧ್ಯಾಯೇದಜಾದಿಸಮಿತಿಂ ಪ್ರತಿ ಬೋಧಯಂತಮ್ ॥53॥