This page has been fully proofread once and needs a second look.

ನಾದ- ಟಂ ಟಂಕಿನೇ ನಮಃ । ಠಂ ಠಳಕಾಯ ನಮಃ । ಡಂ ಡರಕಾಯ ನಮಃ । ಢಂ ಢರಿಣೇ ನಮಃ । ಣಂ ಣಾತ್ಮನೇ ನಮಃ ।
 
ಬಿಂದು - ತಂ ತಾರಾಯ ನಮಃ । ಥಂ ಥಭಾಯ ನಮಃ । ದಂ ದಂಡಿನೇ ನಮಃ । ಧಂ ಧನ್ವಿನೇ ನಮಃ । ನಂ ನಮ್ಯಾಯ ನಮಃ ।
 
ಘೋಷ-ಪಂ ಪರಾಯ ನಮಃ । ಫಂ ಫಲಿನೇ ನಮಃ । ಬಂ ಬಲಿನೇ
ನಮಃ । ಭಂ ಭಗಾಯ ನಮಃ । ಮಂ ಮನವೇ ನಮಃ ।
 
ಶಾಂತ- ಯಂ ಯಜ್ಞಾಯ ನಮಃ । ರಂ ರಾಮಾಯ ನಮಃ । ಲಂ ಲಕ್ಷ್ಮೀಪತಯೇ ನಮಃ । ವಂ ವರಾಯ ನಮಃ ।
 
ಅತಿಶಾಂತ-ಶಂ ಶಾಂತಸಂವಿದೇ ನಮಃ । ಷಂ ಷಡ್ಗುಣಾಯ ನಮಃ । ಸಂ ಸಾರಾತ್ಮನೇ ನಮಃ । ಹಂ ಹಂಸಾಯ ನಮಃ । ಳಂ ಳಾಳುಕಾಯ ನಮಃ ।
ಈ ಐವತ್ತುಮೂರ್ತಿಗಳು ಅಕಾರಾದಿ ಐವತ್ತುವರ್ಣಗಳಿಂದ ವಾಚ್ಯಗಳಾಗಿವೆ.
 
ವ.ಟೀ - ಪಂಚಾಶದ್ವರ್ಣವಾಚ್ಯಾಃ ಕಾ ಇತ್ಯಾಹ - ಅಜೇತಿ ॥ ಕ್ಷಕಾರಸ್ಯ ನೃಸಿಂಹೋ ದೇವತಾ । ಏತಾಃ ಪಂಚಾಶನ್ಮೂರ್ತಯಶ್ಚ ಮಮ ಅಕಾರಾದೀನಾಂ ರೂಪಗುಣಕ್ರಿಯಾದೀನಾಂ ಲಕ್ಷಕಾಃ ಜ್ಞಾಪಕಾಃ ಇತ್ಯರ್ಥ: । ವರ್ಣಾನಾಂ ವಾಚಕಶತ್ವಶಕ್ತಿಸ್ತು ಪರಮಾತ್ಮಾಧೀನೇತಿ ಯಾವತ್ ।
 
ಟೀಕಾರ್ಥ - ಪಂಚಾಶದ್ವರ್ಣಗಳಿಂದ ವಾಚ್ಯಗಳಾದ ಮೂರ್ತಿಗಳು ಯಾವುವೆಂದು ಅಜ ಇತ್ಯಾದಿ ಶ್ಲೋಕಗಳಿಂದ ತಿಳಿಸುವರು. ಕ್ಷಕಾರಕ್ಕೆ ನರಸಿಂಹ ದೇವತೆಯೆಂದು ತಿಳಿಯಬೇಕು. ಈ ನನ್ನ ಐವತ್ತು ಮೂರ್ತಿಗಳು ಅಕಾರಾದಿಅಕ್ಷರಗಳಿಗೂ ರೂಪ,
ಗುಣಕ್ರಿಯೆಗಳಿಗೂ ಜ್ಞಾಪಕಗಳಾಗಿವೆ. ಅಕಾರಾದಿವರ್ಣಗಳು ಭಗವಂತನನ್ನು ತಿಳಿಸುವ ಶಕ್ತಿಯಾದರೂ ಭಗವದಧೀನವೆಂದು ತಿಳಿಯಬೇಕು.[^1]]
 
ಅಷ್ಟಾಕ್ಷರ- ವ್ಯಾಹೃತಿಮಂತ್ರಗಳು
 
ನಾರಾಯಣಾಷ್ಟಾಕ್ಷರಶ್ಚ ತಾರಾಷ್ಟಾಕ್ಷರಭೇದವಾನ್ ।
 

 
[^1]. ವಿಶೇಷಾಂಶ - ಕ್ಷಕಾರವು ನೃಸಿಂಹನನ್ನು ತಿಳಿಸುತ್ತದೆ. ಕ್ಷ ಎಂಬುದು ಕ +ಷ ಗಳ ಯೋಗದಿಂದ ಆಗಿದ್ದು ಕಕಾರವು ಕಾಡಿನಲ್ಲಿ ವಾಸಿಸುವ ಕಾನನರಾಜನಾದ ಸಿಂಹವನ್ನು ಹೇಳಿದರೆ ಷಕಾರವು ಪುರುಷನನ್ನು ಹೇಳುತ್ತಾ ಸಿಂಹ + ಪುರುಷರ ಸಂಯೋಗವನ್ನೇ ಕ್ಷಕಾರವು ಸೂಚಿಸುತ್ತದೆ.