This page has not been fully proofread.

ಐವತ್ತು ಮಾತೃಕಾರೂಪಗಳು
 
ನಾದ ಟಂ ಟಂಕಿನೇ ನಮಃ । ಠಂ ಠಳಕಾಯ ನಮಃ । ಡಂ ಡರಕಾಯ
ನಮಃ । ಢಂ ಢರಿಣೇ ನಮಃ । ಣಂ ಣಾತ್ಮನೇ ನಮಃ ।
 
-
 
ಬಿಂದು ತಂ ತಾರಾಯ ನಮಃ । ಥಂ ಥಭಾಯ ನಮಃ । ದಂ ದಂಡಿನೇ
ನಮಃ । ಧಂ ಧನೇ ನಮಃ । ನಂ ನಮ್ಯಾಯ ನಮಃ ।
 
ಘೋಷ
 
ಪಂ ಪರಾಯ ನಮಃ । ಫಂ ಫಲಿನೇ ನಮಃ । ಬಂ ಬಲಿನೇ
ನಮಃ । ಭಂ ಭಗಾಯ ನಮಃ । ಮಂ ಮನವೇ ನಮಃ ।
 
-
 
ಶಾಂತ
 
ಯಂ ಯಜ್ಞಾಯ ನಮಃ । ರಂ ರಾಮಾಯ ನಮಃ । ಲಂ ಲಕ್ಷ್ಮೀ
ಪತಯೇ ನಮಃ । ವಂ ವರಾಯ ನಮಃ ।
 
-
 
7
 
ಅತಿಶಾಂತ
 
ಶಂ ಶಾಂತಸಂವಿದೇ ನಮಃ । ಷಂ ಷಡ್ಗುಣಾಯ ನಮಃ । ಸಂ
ಸಾರಾತ್ಮನೇ ನಮಃ । ಹಂ ಹಂಸಾಯ ನಮಃ । ಳಂ ಳಾಳುಕಾಯ ನಮಃ ।
 
-
 
ಈ ಐವತ್ತುಮೂರ್ತಿಗಳು ಅಕಾರಾದಿ ಐವತ್ತುವರ್ಣಗಳಿಂದ ವಾಚ್ಯಗಳಾಗಿವೆ.
ವ.ಟೀ - ಪಂಚಾಶದ್ವರ್ಣವಾಚ್ಯಾಃ ಕಾ ಇತ್ಯಾಹ - ಅಜೇತಿ ॥ ಕ್ಷಕಾರಸ್ಯ ನೃಸಿಂಹೋ
ದೇವತಾ । ಏತಾಃ ಪಂಚಾಶನ್ಮೂರ್ತಯಶ್ಚ ಮಮ ಅಕಾರಾದೀನಾಂ ರೂಪಗುಣಕ್ರಿಯಾ-
ದೀನಾಂ ಲಕ್ಷಕಾ ಜ್ಞಾಪಕಾಃ ಇತ್ಯರ್ಥ: 1 ವರ್ಣಾನಾಂ ವಾಚಕಶತ್ವಶಕ್ತಿಸ್ತು ಪರಮಾತ್ಮಾ-
ಧೀನೇತಿ ಯಾವತ್ ।
 
ಟೀಕಾರ್ಥ - ಪಂಚಾಶದ್ವರ್ಣಗಳಿಂದ ವಾಚ್ಯಗಳಾದ ಮೂರ್ತಿಗಳು ಯಾವುವೆಂದು
ಅಜ ಇತ್ಯಾದಿ ಶ್ಲೋಕಗಳಿಂದ ತಿಳಿಸುವರು. ಕ್ಷಕಾರಕ್ಕೆ ನರಸಿಂಹ ದೇವತೆಯೆಂದು
ತಿಳಿಯಬೇಕು. ಈ ನನ್ನ ಐವತ್ತು ಮೂರ್ತಿಗಳು ಅಕಾರಾದಿಅಕ್ಷರಗಳಿಗೂ ರೂಪ,
ಗುಣಕ್ರಿಯೆಗಳಿಗೂ ಜ್ಞಾಪಕಗಳಾಗಿವೆ. ಅಕಾರಾದಿವರ್ಣಗಳು ಭಗವಂತನನ್ನು ತಿಳಿಸುವ
ಶಕ್ತಿಯಾದರೂ ಭಗವದಧೀನವೆಂದು ತಿಳಿಯಬೇಕು.
 
ಅಷ್ಟಾಕ್ಷರ- ವ್ಯಾಹೃತಿಮಂತ್ರಗಳು
 
ನಾರಾಯಣಾಷ್ಟಾಕ್ಷರತ್ನ ತಾರಾಷ್ಟಾಕ್ಷರಭೇದವಾನ್ ।
 
1. ವಿಶೇಷಾಂಶ - ಕ್ಷಕಾರವು ನೃಸಿಂಹನನ್ನು ತಿಳಿಸುತ್ತದೆ. ಕ್ಷ ಎಂಬುದು ಕ +ಷ ಗಳ ಯೋಗದಿಂದ
ಆಗಿದ್ದು ಕಕಾರವು ಕಾಡಿನಲ್ಲಿ ವಾಸಿಸುವ ಕಾನನರಾಜನಾದ ಸಿಂಹವನ್ನು ಹೇಳಿದರೆ ಷಕಾರವು
ಪುರುಷನನ್ನು ಹೇಳುತ್ತಾ ಸಿಂಹ + ಪುರುಷರ ಸಂಯೋಗವನ್ನೇ ಕ್ಷಕಾರವು ಸೂಚಿಸುತ್ತದೆ.