This page has not been fully proofread.

೧೬೮
 
ಧ್ಯಾನಿಸಬೇಕು.
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಹಯಗ್ರೀವಮಂತ್ರದ ಮಹಿಮೆ, ಧ್ಯಾನ
 
ಸೋದ್ದೇಶಸ್ತು ಸ್ವಯಂ ದೀರ್ಘಪೂರ್ವಾದ್ಯಾರ್ಣೋ ನಮೋಯುತಃ ।
ಸರ್ವವಿದ್ಯಾ ಪ್ರದೋಽಷ್ಟಾರ್ಣ: ಪ್ರತಿವಾದಿಜಯಪ್ರದಃ ।
ವಿಮುಕ್ತಿಸಾಧನಃ ಕೀರ್ತಿಬುದ್ದಿಸೊರ್ಯಪ್ರದಃ ಸದಾ ॥49॥
 
ಅರ್ಥ - ಚತುರ್ಥ್ಯಂತವಾದ ಹಯಶಿರಸ್ ವಾಚಕಪದ, ಅದರ ಮೊದಲಲ್ಲಿ ಮಂತ್ರದ
ಮೊದಲನೆಯ ವರ್ಣವಾದ ಹಕಾರವನ್ನು ಆಕಾರಬಿಂದುಸಹಿತಗಳಾಗಿ ಪಠಿಸಬೇಕು.
ಆದಿಯಲ್ಲಿ ಆಕಾರ ಹಾಗೂ ಬಿಂದು ಸಹಿತವಾದ ಆದ್ಯಕ್ಷರವಾದ ಹಕಾರ- ಯುಕ್ತವಾದದ್ದು
ಹಾಗೂ ಅಂತ್ಯದಲ್ಲಿ ನಮಃ ಎಂದು ಪದಯುಕ್ತವಾದದ್ದೇ ಹಯಗ್ರೀವ ಮಂತ್ರವು. 'ಹಾಂ
ಹಯಶಿರಸೇ ನಮಃ, ಹಾಂ ಹಯಗ್ರೀವಾಯ ನಮಃ, ಹಾಂ ಹಯಶೀರ್ಷಾಯ ನಮಃ,
ಹಾಂ ಹಯಶೀರ್ಷ ನಮಃ'' ಎಂದು ನಾಲ್ಕು ಮಂತ್ರಗಳು ವಿವಕ್ಷಿತವಾಗಿವೆ.
 
ಈ ಮಂತ್ರಜಪದಿಂದ ಶಾಸ್ತ್ರಪಾಂಡಿತ್ಯವು, ಪ್ರತಿವಾದಿನಿಗ್ರಹಸಾಮರ್ಥ್ಯವು ಲಭಿಸು
ವುದು. ಕೀರ್ತಿ, ಬುದ್ದಿ ನೀಡಿ ಕಡೆಗೆ ವಿಮುಕ್ತಿಗೂ ಸಾಧನವಾಗುವುದು.
 
=
 
ವ.ಟೀ. - ಸೋದ್ದೇಶಂ = ಚತುರ್ಥ್ಯಂತಃ । ಸ್ವಯಂ - ಹಯಶಿರಾಃ । ದೀರ್ಘವರ್ಣ-
ಪೂರ್ವಾರ್ಣಾದ್ಯಾ ಆಕಾರಬಿಂದ್ವಂತ್ ಹಕಾರ ಆದ್ಯಾಕ್ಷರಯುತಃ ನಮಸ್ಕಾರಯುಕ್ತ
ಹಯಗ್ರೀವ ಇತಿ ಭಾವಃ ॥
 
ವಂದೇ ತುರಂಗವದನಂ ಶಶಿಬಿಂಬಸಂಸ್ಥಂ
ಚಂದ್ರಾವದಾತಮಮೃತಾತ್ಮಕರೈ: ಸಮಂತಾತ್ ।
ಅಂಡಾಂತರಂ ಬಹಿರಪಿ ಪ್ರತಿಭಾಸಯಂತಂ
ಶಂಖಾಕ್ಷಪುಸ್ತಕಸುಬೋಧಯುತಾಬಬಾಹುಮ್ ॥50॥
 
ನಸ್ತೋ ಮುಖಾದಪಿ ನಿರಂತರ ಮುದ್ದಿರಂತಂ
ವಿದ್ಯಾ ಅಶೇಷತ ಉತಾಭವೇಶಮುಖ್ಯ ।
ಸಂಸೇವ್ಯಮಾನಮತಿಭಕ್ತಿಭರಾವನ-
ರ್ಲಕ್ಷ್ಯಾಮೃತೇನ ಸತತಂ ಪರಿಷಿದ್ಯಮಾನಮ್ ॥51॥