This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ವೇದಪದಕ್ಕೆ ಆಧಾರವಾದ ಚತುರ್ಥ್ಯಂತ ವೇದವ್ಯಾಸಶಬ್ದವು ವ್ಯಾಸವೆಂಬ ಶಬ್ದದ
ಪೂರ್ವವರ್ಣವೆನಿಸಿದ ವ್ಯಾ ಎಂಬ ಅನುಸ್ವಾರಸಹಿತ ಬೀಜಾಕ್ಷರವು ಮೊದಲು ಇರಬೇಕು.
ಹಾಗೆಯೇ ಕಡೆಯಲ್ಲಿ ನಮಃಶಬ್ದದಿಂದ ಕೂಡಿದಾಗ ವೇದವ್ಯಾಸಾಷ್ಟಾಕ್ಷರ ಮಂತ್ರ-
ವೇರ್ಪಡುತ್ತದೆ. 'ವ್ಯಾಂ ವೇದವ್ಯಾಸಾಯ ನಮಃ' ಎಂದು ಮಂತ್ರದ ಸ್ವರೂಪ. ಇದು
ವೇದವ್ಯಾಸರಿಗೆ ಅತ್ಯಂತಪ್ರಿಯಮಂತ್ರ ವಾಗಿದ್ದು, ಜಪಿಸುವವರಿಗೆ ವ್ಯಾಖ್ಯಾನಕೌಶಲ,
ವಿಜ್ಞಾನ, ಕಾವ್ಯ- ರಚನಾಪಟುತ್ವ ನೀಡುತ್ತದೆ. ನೃಸಿಂಹಮಂತ್ರವು ಯುದ್ಧದಲ್ಲಿ ಜಯ
ನೀಡುವಂತೆ ಇದು ವಾದದಲ್ಲಿ ಜಯ ನೀಡುವ ಸಾಮರ್ಥ್ಯ ಹೊಂದಿದೆ.
 
೧೬೬
 

 
ವ.ಟೀ.
 
- ವೇದಪದಾಧಾರಃ ವೇದವ್ಯಾಸಃ ಚತುರ್ಥ್ಯಂತಃ । ಪೂರ್ವವರ್ಣ:
ಣಃ ಆಕಾರೋ ಬಂದಂಬಿಂದ್ವಂತಃ 1 ಸೋಽಪ್ಯಾಕಾರಃ ಪುರಃಸರೋ ಯಸ್ಯ ಸಃ, ತಥಾ ನಮಸ್ಕಾರ-
ಯುತೋ ಪರಃ, ಅಷ್ಟಾಕ್ಷರ ಇತಿ ಭಾವಃ ।
 

 
ವೇದವ್ಯಾಸಧ್ಯಾನಶ್ಲೋಕ
 
-
 

 
ವಿಜ್ಞಾನರೋಚಿಃಪರಿಪೂರಿತಾಂತ-

ರ್ಬಾಹ್ಯಾಂಡಕೋಶಂ ಹರಿತೋಪಲಾಭಮ್ ।

ತರ್ಕಾಭಯೇತಂ ವಿಧಿಶರ್ವಪೂರ್ವ-

ಗೀರ್ವಾಣವಿಜ್ಞಾನದಮಾನತೋS II451
 
114511
 
ಸ್ಮಿ ॥ ೪೫ ॥
 
ಅರ್ಥ - ತನ್ನ ವಿಜ್ಞಾನದ ಕಾಂತಿಯಿಂದ ಜಗತ್ತಿನ ಒಳಹೊರಗೆಲ್ಲ ಬೆಳಗಿಸು-
ತಿರುವವನೂ, ನೀಲಮಣಿಯಂತೆ ದೇಹಕಾಂತಿಯುಳ್ಳ- ವನೂ, ಜ್ಞಾನಮುದ್ರೆ-
ಅಭಯಮುದ್ರೆಯನ್ನು ಕೈಗಳಲ್ಲಿ ಹೊಂದಿರುವವನೂ, ಬ್ರಹ್ಮರುದ್ರಾದಿ ಸರ್ವ-
ದೇವತೆಗಳಿಗೂ ವಿಶಿಷ್ಟಜ್ಞಾನನೀಡುವವನೂ ಆದ ವೇದವ್ಯಾಸದೇವನನ್ನು ಭಕ್ತಿ-

ಯಿಂದ ನಮಿಸುವೆ.
 

 
ವೇದವ್ಯಾಸಗಾಯತ್ರಿ
 

 
ಜ್ಞಾನಾನಂದಪುರಃ ಪೂರ್ಣೋ ವಿದ್ಹೇ ಧೀಮಹೇ ತಥಾ ।

ತನ್ನಃ ಪ್ರೇರಣಮಧ್ಯೆಯೇತು ವ್ಯಾಸೋ ಮಂತ್ರಾಧಿಪಾಧಿಪಃ ॥46 ೪೬
 
-
 

 
ಅರ್ಥ - ಚತುರ್ಥ್ಯಂತವಾದ ಜ್ಞಾನ ಮತ್ತು ಆನಂದಶಬ್ದಗಳ ನಂತರ ಕ್ರಮವಾಗಿ
ವಿದ್ಮಹೇ ಮತ್ತು ಧೀಮಹಿ ಪದಗಳನ್ನು ಪಠಿಸುವುದು. ತನ್ನಃ ಎಂಬ ಪದ ಹಾಗೂ
 
-0