This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ವೇದಪದಕ್ಕೆ ಆಧಾರವಾದ ಚತುರ್ಥ್ಯಂತ ವೇದವ್ಯಾಸಶಬ್ದವು ವ್ಯಾಸವೆಂಬ ಶಬ್ದದ
ಪೂರ್ವವರ್ಣವೆನಿಸಿದ ವ್ಯಾ ಎಂಬ ಅನುಸ್ವಾರಸಹಿತ ಬೀಜಾಕ್ಷರವು ಮೊದಲು ಇರಬೇಕು.
ಹಾಗೆಯೇ ಕಡೆಯಲ್ಲಿ ನಮಃಶಬ್ದದಿಂದ ಕೂಡಿದಾಗ ವೇದವ್ಯಾಸಾಷ್ಟಾಕ್ಷರಮಂತ್ರ-
ವೇರ್ಪಡುತ್ತದೆ. 'ವ್ಯಾಂ ವೇದವ್ಯಾಸಾಯ ನಮಃ' ಎಂದು ಮಂತ್ರದ ಸ್ವರೂಪ. ಇದು
ವೇದವ್ಯಾಸರಿಗೆ ಅತ್ಯಂತಪ್ರಿಯಮಂತ್ರವಾಗಿದ್ದು, ಜಪಿಸುವವರಿಗೆ ವ್ಯಾಖ್ಯಾನಕೌಶಲ,
ವಿಜ್ಞಾನ, ಕಾವ್ಯರಚನಾಪಟುತ್ವ ನೀಡುತ್ತದೆ. ನೃಸಿಂಹಮಂತ್ರವು ಯುದ್ಧದಲ್ಲಿ ಜಯ
ನೀಡುವಂತೆ ಇದು ವಾದದಲ್ಲಿ ಜಯ ನೀಡುವ ಸಾಮರ್ಥ್ಯ ಹೊಂದಿದೆ.
 
೧೬೬
 
ವ.ಟೀ.
 
ವೇದಪದಾಧಾರ ವೇದವ್ಯಾಸಃ ಚತುರ್ಥ್ಯಂತಃ । ಪೂರ್ವವರ್ಣ:
ಆಕಾರೋ ಬಂದಂತಃ 1 ಸೋಽಪ್ಯಾಕಾರಃ ಪುರಃಸರೋ ಯಸ್ಯ ಸಃ, ತಥಾ ನಮಸ್ಕಾರ-
ಯುತೋ ಪರಃ, ಅಷ್ಟಾಕ್ಷರ ಇತಿ ಭಾವಃ ।
 
ವೇದವ್ಯಾಸಧ್ಯಾನಶ್ಲೋಕ
 
-
 
ವಿಜ್ಞಾನರೋಚಿಃಪರಿಪೂರಿತಾಂತ-
ರ್ಬಾಹ್ಯಾಂಡಕೋಶಂ ಹರಿತೋಪಲಾಭಮ್ ।
ತರ್ಕಾಭಯೇತಂ ವಿಧಿಶರ್ವಪೂರ್ವ-
ಗೀರ್ವಾಣವಿಜ್ಞಾನದಮಾನತೋS II451
 
114511
 
ಅರ್ಥ - ತನ್ನ ವಿಜ್ಞಾನದ ಕಾಂತಿಯಿಂದ ಜಗತ್ತಿನ ಒಳಹೊರಗೆಲ್ಲ ಬೆಳಗಿಸು-
ತಿರುವವನೂ, ನೀಲಮಣಿಯಂತೆ ದೇಹಕಾಂತಿಯುಳ್ಳವನೂ, ಜ್ಞಾನಮುದ್ರೆ-
ಅಭಯಮುದ್ರೆಯನ್ನು ಕೈಗಳಲ್ಲಿ ಹೊಂದಿರುವವನೂ, ಬ್ರಹ್ಮರುದ್ರಾದಿ ಸರ್ವ-
ದೇವತೆಗಳಿಗೂ ವಿಶಿಷ್ಟಜ್ಞಾನನೀಡುವವನೂ ಆದ ವೇದವ್ಯಾಸದೇವನನ್ನು ಭಕ್ತಿ-
ಯಿಂದ ನಮಿಸುವೆ.
 
ವೇದವ್ಯಾಸಗಾಯತ್ರಿ
 
ಜ್ಞಾನಾನಂದಪುರಃ ಪೂರ್ಣೋ ವಿದ್ಯಹೇ ಧೀಮಹೇ ತಥಾ ।
ತನ್ನಃ ಪ್ರೇರಣಮಧ್ಯೆತು ವ್ಯಾಸೋ ಮಂತ್ರಾಧಿಪಾಧಿಪಃ ॥46॥
 
-
 
ಅರ್ಥ - ಚತುರ್ಥ್ಯಂತವಾದ ಜ್ಞಾನ ಮತ್ತು ಆನಂದಶಬ್ದಗಳ ನಂತರ ಕ್ರಮವಾಗಿ
ವಿದ್ಮಹೇ ಮತ್ತು ಧೀಮಹಿ ಪದಗಳನ್ನು ಪಠಿಸುವುದು. ತನ್ನಃ ಎಂಬ ಪದ ಹಾಗೂ
 
-0