This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಟೀಕಾ
ರ್ಥ - ಕಾಮೇತೌ ಎಂದರೆ ಕೀಂಕ್ಲೀಂ ಎಂಬ ಬೀಜಾಕ್ಷರದಿಂದ ಕೂಡಿರುವ
ಎಂದರ್ಥ. ಚತುರ್ಥ್ಯಂತವಾದ ಕೃಷ್ಣಶಬ್ದ ಹಾಗೂ ಗೋವಿಂದಶಬ್ದಗಳು, ನಂತರ
ಗೋಪಿಯರಿಗೆ ಪ್ರಿಯ ಎನ್ನುವ ಅರ್ಥವಿರುವ ಚತುರ್ಥ್ಯಂತಗೋಪೀಜನವಲ್ಲಭ ಎಂಬ
ಶಬ್ದ, ಕಡೆಯಲ್ಲಿ ಸ್ವಾಹಾಶಬ್ದಗಳನ್ನು ಪಠಿಸಿದಾಗ ಹದಿನೆಂಟು ಅಕ್ಷರ- ಗಳ ಮದನ-
ಗೋಪಾಲಮಂತ್ರವಾಗುವುದು. 'ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನ
ವಲ್ಲಭಾಯ ಸ್ವಾಹಾ ಓಂ' ಓಂ ಎಂದು ಮಂತ್ರಸ್ವರೂಪ. ಈ ಮಂತ್ರವು ಐಹಿಕಭೋಗಗಳೆಲ್ಲ-
ವನ್ನೂ ನೀಡಿ, ಭಗವಂತನ ಪ್ರೀತಿ ಹಾಗೂ ಪ್ರಸನ್ನತೆಯ ಫಲವಾದ ಮೋಕ್ಷವನ್ನು

ನೀಡುವುದು. ಈ ಮಂತ್ರದ ಪದಗಳಿಂದಲೇ ಪಂಚಾಂಗನ್ಯಾಸವು.
 

[^1]
 
ಕೃಷ್ಣಮಂತ್ರದ ಧ್ಯಾನಶ್ಲೋಕ
 

 
ಧ್ಯಾಯೇದ್ರಿನ್ಮಣಿನಿಭಂ ಜಗದೇಕವಂದ್ಯಂ
 
೧೬೪
 

ಸೌಂದರ್ಯಸಾರಮರಿಶಂಖವರಾಭಯಾನಿ ।
 

ದೋರ್ಭಿದ್ರರ್ದಧಾನಮಜಿತಂ ಸರಸಂ ಚ ಭೈಷ್ಮೀ-

ಸತ್ಯಾಸಮೇತಮಖಿಲಪ್ರದಮಿಂದಿರೇಶಮ್ ॥40
 
೪೦ ॥
 
ಅರ್ಥ
 
- ಇಂದ್ರನೀಲಮಣಿಯ ಕಾಂತಿಯುಳ್ಳವನೂ, ಜಗತ್ತೂಪೂಜ್ಯ- ನೂ,
ಸೌಂದರ್ಯಸಾರನೂ, ಕೈಗಳಲ್ಲಿ ಚಕ್ರಶಂಖವರಾಭಯ- ಮುದ್ರಾಧರಿಸಿರುವವನೂ,
ದಯಾಮಯನೂ, ರುಗಿಣಿಗ್ಮಿಣೀ ಸತ್ಯಭಾಮೆಯರನ್ನು ಇಕ್ಕೆಲಗಳಲ್ಲಿ ಹೊಂದಿರು-
ವವನೂ, ಯಾರಿಂದಲೂ ವಶನಾಗದವನೂ ಆಗಿರುವ ಶ್ರೀಕೃಷ್ಣನನ್ನು ಧ್ಯಾನಿಸಬೇಕು.
 

 
ಕೃಷ್ಣಷಡಕ್ಷರಮಂತ್ರ; ಏಕಾಕ್ಷರಕೃಷ್ಣಮಂತ್ರ
 

 
ಸಕಾಮಃ ಸ್ವಯಮುದ್ದೇಶೀ ನತ್ಯಂತೋSಯಂ ಷಡಕ್ಷರಃ ।

ತದಾದಿರಪಿ ಸರ್ವೆಷ್ಟಚಿಂತಾಮಣಿರುದಾಹೃತಃ
 
41 ೪೧
 

 
ಅರ್ಥ - ಕಾಮಬೀಜವಾದ ಕೀಂಕ್ಲೀಂಕಾರದಿಂದ, ಹಾಗೂ ನಮಃಪದ- ದಿಂದ ಕೂಡಿರುವ
ಚತುರ್ಥ್ಯಂತಕೃಷ್ಣಪದವು ಕೃಷ್ಣಷಡಕ್ಷರ ಎನಿಸುತ್ತದೆ. 'ಕೀಂಕ್ಲೀಂ ಕೃಷ್ಣಾಯ ನಮಃ' ಎಂಬುದು
ಮಂತ್ರದ ಸ್ವರೂಪ. ಅದೇ ಕೃಷ್ಣಮಂತ್ರದ ಆದಿಯಲ್ಲಿರುವ ಕ್ಲೀಕಾರವೂ ಕೂಡ
 

 
[^
1]. ಓಂ ಕೀಂಕ್ಲೀಂ ಹೃದಯಾಯ ನಮಃ । ಓಂ ಕೃಷ್ಣಾಯ ಶಿರಸೇ ಸ್ವಾಹಾ । ಓಂ ಗೋವಿಂದಾಯ
ಶಿಖಾಯ್ಕೆಯೈ ವೌಷಟ್ । ಓಂ ಗೋಪೀಜನವಲ್ಲಭಾಯ ಕವಚಾಯ ಹುಮ್ । ಓಂ ಸ್ವಾಹಾ

ಅಸ್ತ್ರಾಯ ಫಟ್ । ಇತಿ ದಿಬ್ಗ್ಬಂಧಃ ।