This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಟೀಕಾರ್ಥ ಕಾಮೇತ ಎಂದರೆ ಕೀಂ ಎಂಬ ಬೀಜಾಕ್ಷರದಿಂದ ಕೂಡಿರುವ
ಎಂದರ್ಥ. ಚತುರ್ಥ್ಯಂತವಾದ ಕೃಷ್ಣಶಬ್ದ ಹಾಗೂ ಗೋವಿಂದಶಬ್ದಗಳು, ನಂತರ
ಗೋಪಿಯರಿಗೆ ಪ್ರಿಯ ಎನ್ನುವ ಅರ್ಥವಿರುವ ಚತುರ್ಥ್ಯಂತಗೋಪೀಜನವಲ್ಲಭ ಎಂಬ
ಶಬ್ದ, ಕಡೆಯಲ್ಲಿ ಸ್ವಾಹಾಶಬ್ದಗಳನ್ನು ಪಠಿಸಿದಾಗ ಹದಿನೆಂಟು ಅಕ್ಷರಗಳ ಮದನ-
ಗೋಪಾಲಮಂತ್ರವಾಗುವುದು. 'ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನ
ವಲ್ಲಭಾಯ ಸ್ವಾಹಾ' ಓಂ ಎಂದು ಮಂತ್ರಸ್ವರೂಪ. ಈ ಮಂತ್ರವು ಐಹಿಕಭೋಗಗಳೆಲ್ಲ-
ವನ್ನೂ ನೀಡಿ, ಭಗವಂತನ ಪ್ರೀತಿ ಹಾಗೂ ಪ್ರಸನ್ನತೆಯ ಫಲವಾದ ಮೋಕ್ಷವನ್ನು
ನೀಡುವುದು. ಈ ಮಂತ್ರದ ಪದಗಳಿಂದಲೇ ಪಂಚಾಂಗನ್ಯಾಸವು.
 
ಕೃಷ್ಣಮಂತ್ರದ ಧ್ಯಾನಶ್ಲೋಕ
 
ಧ್ಯಾಯೇದ್ದರಿನ್ಮಣಿನಿಭಂ ಜಗದೇಕವಂದ್ಯಂ
 
೧೬೪
 
ಸೌಂದರ್ಯಸಾರಮರಿಶಂಖವರಾಭಯಾನಿ ।
 
ದೋರ್ಭಿದ್ರಧಾನಮಜಿತಂ ಸರಸಂ ಚ ಭೈ-
ಸತ್ಯಾಸಮೇತಮಖಿಲಪ್ರದಮಿಂದಿರೇಶಮ್ ॥40
 
ಅರ್ಥ
 
ಇಂದ್ರನೀಲಮಣಿಯ ಕಾಂತಿಯುಳ್ಳವನೂ, ಜಗತ್ತೂಜ್ಯನೂ,
ಸೌಂದರ್ಯಸಾರನೂ, ಕೈಗಳಲ್ಲಿ ಚಕ್ರಶಂಖವರಾಭಯಮುದ್ರಾಧರಿಸಿರುವವನೂ,
ದಯಾಮಯನೂ, ರುಗಿಣಿ ಸತ್ಯಭಾಮೆಯರನ್ನು ಇಕ್ಕೆಲಗಳಲ್ಲಿ ಹೊಂದಿರು-
ವವನೂ, ಯಾರಿಂದಲೂ ವಶನಾಗದವನೂ ಆಗಿರುವ ಶ್ರೀಕೃಷ್ಣನನ್ನು ಧ್ಯಾನಿಸಬೇಕು.
 
ಕೃಷ್ಣಷಡಕ್ಷರಮಂತ್ರ; ಏಕಾಕ್ಷರಕೃಷ್ಣಮಂತ್ರ
 
ಸಕಾಮಃ ಸ್ವಯಮುದ್ದೇಶೀ ನತ್ಯಂತೋSಯಂ ಷಡಕ್ಷರಃ ।
ತದಾದಿರಪಿ ಸರ್ವೆಷ್ಟಚಿಂತಾಮಣಿರುದಾಹೃತಃ
 
॥41॥
 
ಅರ್ಥ - ಕಾಮಬೀಜವಾದ ಕೀಂಕಾರದಿಂದ, ಹಾಗೂ ನಮಃಪದದಿಂದ ಕೂಡಿರುವ
ಚತುರ್ಥ್ಯಂತಕೃಷ್ಣಪದವು ಕೃಷ್ಣಷಡಕ್ಷರ ಎನಿಸುತ್ತದೆ. 'ಕೀಂ ಕೃಷ್ಣಾಯ ನಮಃ' ಎಂಬುದು
ಮಂತ್ರದ ಸ್ವರೂಪ. ಅದೇ ಕೃಷ್ಣಮಂತ್ರದ ಆದಿಯಲ್ಲಿರುವ ಕ್ಲೀಕಾರವೂ ಕೂಡ
 
1. ಓಂ ಕೀಂ ಹೃದಯಾಯ ನಮಃ । ಓಂ ಕೃಷ್ಣಾಯ ಶಿರಸೇ ಸ್ವಾಹಾ । ಓಂ ಗೋವಿಂದಾಯ
ಶಿಖಾಯ್ಕೆ ವೌಷಟ್ । ಓಂ ಗೋಪೀಜನವಲ್ಲಭಾಯ ಕವಚಾಯ ಹುಮ್ । ಓಂ ಸ್ವಾಹಾ
ಅಸ್ತ್ರಾಯ ಫಟ್ । ಇತಿ ದಿಬ್ಬಂಧಃ ।