This page has not been fully proofread.

ಚತುರ್ಥೋಽಧ್ಯಾಯಃ
 
೧೬೩
 
ಅರ್ಥ ಗೋತ್ರವಾಚಕಗಳಾದ ಚತುರ್ಥ್ಯಂತಗಳಾದ ಪರಶುರಾಮ ಹಾಗೂ
ದಾಶರಥಿರಾಮರ ವಾಚಕಗಳಾದ ಭಾರ್ಗವ ಹಾಗೂ ರಾಘವಪದಗಳು, ಅವುಗಳ
ಆದಿಯಲ್ಲಿ ಮಂತ್ರದ ಪೂರ್ವಾಕ್ಷರಗಳಾದ ಭಾಂ, ರಾಂ ಎಂಬ ಅಕ್ಷರಗಳು, ಹಾಗೂ
ಓಂಕಾರ, ಕಡೆಯಲ್ಲಿ ನಮಃ ಪದ ಸೇರಿಸಿದಾಗ "ಓಂ ಭಾಂ ಭಾರ್ಗವಾಯ ನಮಃ, ಓಂ
ರಾಂ ರಾಮಾಯ ನಮಃ' ಎಂಬ ಭಾರ್ಗವಾಷ್ಟಾಕ್ಷರ ಹಾಗೂ ರಾಘವಾಷ್ಟಾಕ್ಷರಮಂತ್ರಗಳು
ಏರ್ಪಡುತ್ತವೆ.
 
ವ.ಟೀ.
 
ನಿಜಗೋತ್ರಮ್, ಭಾರ್ಗವಶ್ಚತುರ್ಥ್ಯಂತಃ । ಪೂರ್ವಾಕ್ಷರಂ ಭಕಾರಃ,
ಆಕಾರಃ ಬಿಂದ್ವಂತಃ । ನಮಸ್ಕಾರಯುತೋಽಷ್ಟಾಕ್ಷರೋಽಪರೋ
 
ಭಾರ್ಗವಮಂತ್ರ: ।
 
-
 
ಭಾರ್ಗವ, ರಾಮಮಂತ್ರಮಹಿಮಾವಿಚಾರ
 
ತೇ ಚ ಬೀಜೇ ಬೀಜಭೂತೇ ಧರ್ಮಾದೀನಾಮಶೇಷತಃ ।
 
ಅರ್ಥ - ಭಾಂ, ರಾಂ, ಎಂಬ ಬೀಜಾಕ್ಷರಗಳೂ ಸಹ ಸ್ವತಂತ್ರಮಂತ್ರಗಳಾಗಿದ್ದು
ಜಪಿಸುವವರ ಧರ್ಮಾದಿಪುರುಷಾರ್ಥನೀಡಲು ಸಮರ್ಥವಾಗಿವೆ.
 
ಏತೇ ವಿಜಯದಾ ಮಂತ್ರಾ ಜ್ಞಾನಮೋಕ್ಷಪ್ರದಾಯಕಾಃ ।
ಹಿರಣ್ಯರತ್ನರಾಜ್ಯಾದಿಸಮಭೀಷ್ಟಸುರದ್ರುಮಾ
 
113811
 
ಅರ್ಥ - ಈ ಮಂತ್ರಗಳು ವಿಜಯಪ್ರದಗಳಾಗಿದ್ದು, ಜ್ಞಾನ, ಮೋಕ್ಷಾದಿಗಳನ್ನು
ಕೊಡಲು ಸಮರ್ಥವಾಗಿವೆ. ಇದಲ್ಲದೆ ಸುವರ್ಣ, ರತ್ನ, ರಾಜ್ಯಾದಿ ಐಹಿಕಫಲ-
ಗಳನ್ನು ನೀಡಲು ಸಮರ್ಥವಾಗಿರುವವು.
 
ಅಷ್ಟಾದಶಾಕ್ಷರಮದನಗೋಪಾಲಕೃಷ್ಣಮಂತ್ರ
 
ಕೃಷ್ಣ ಗೋವಿಚ್ಚ ಕಾಮೇತಃ ಸೋದ್ದೇಶೋ ಬಲ್ಲವೀಜನಃ ।
ಪ್ರಿಯಶ್ಚ ತಾದೃಶಸ್ವಾಹಾಯುಕ್ತ ಷ್ಟಾದಶವರ್ಣಕಃ ।
 
ಪರಂಗಾನಿ ಸಂಪ್ರೀತಿಕಾಮಮೋಕ್ಷಪ್ರದೋ ಮನುಃ ॥39॥
 
ವ.ಟಿ. - ಕಾಮಯುತಃ = ಕ್ಲಿಂಕಾರಯುತಃ । ಕೃಷ್ಣಃ ಚತುರ್ಥ್ಯಂತಃ । ಗೋವಿಂದೋ
ಗೋವಿಂದಶ್ಚತುರ್ಥ್ಯಂತಃ । ವಲ್ಲವೀಜನಪ್ರಿಯಃ । ಗೋಪೀಜನವಲ್ಲಭಃ ತಾದೃಶಃ ತಾದೃತ
ಚತುರ್ಥ್ಯಂತಃ । ಸ್ವಾಹಾಯುಕ್ತ ಷ್ಟಾದಶಾಕ್ಷರಃ ॥