This page has been fully proofread once and needs a second look.

ಚತುರ್ಥೋಽಧ್ಯಾಯಃ
 
೧೬೧
 
ಹಸ್ತಗಳಲ್ಲಿ ಚಕ್ರಶಂಖಗದಾಜ್ಞಾನಮುದ್ರೆಯನ್ನು ಧರಿಸಿರು- ವವನೂ, ರಮಾದೇವಿ-
ಯಿಂದ ಯುಕ್ತನೂ, ತನ್ನ ಕಾಂತಿಯಿಂದ ಜಗತ್ತನ್ನೆಲ್ಲ ಬೆಳಗುತ್ತಿರುವವನೂ ಆಗಿದ್ದು
ಬ್ರಹ್ಮಾದಿಸಕಲ- ದೇವತಾವಂದ್ಯನಾದ ಆದ್ಯಂತಶೂನ್ಯನಾದ ವಿಷ್ಣುವನ್ನು ಧ್ಯಾನಿಸಬೇಕು.
 

 
ತ್ರಿವಿಕ್ರಮಗಾಯತ್ರೀ
 

 
ತ್ರಿವಿಕ್ರಮಸ್ತು ಸೋದ್ದೇಶೋ ವಿಶ್ವರೂಪಶ್ಚ ತತ್ಪರಃ।

ಧೀವಿದ್ದೌ ಚ ಮಹೇ ವಿಷ್ಣು:ಣುಃ ತನ್ನಃ ಪ್ರೇರಣಮಧ್ಯಗಃ
 
113311
 
॥ ೩೩ ॥
 
ಅರ್ಥ - ಚತುರ್ಥ್ಯಂತವಾದ ತ್ರಿವಿಕ್ರಮ ಪದ, ಅದರ ನಂತರ ವಿಶ್ವರೂಪ ಎಂಬ
ಪದವು. ತ್ರಿವಿಕ್ರಮಪದದ ನಂತರ ವಿದ್ಹಿ ಎಂದು, ವಿಶ್ವರೂಪಪದದ ನಂತರ ಧೀಮಹಿ
ಎಂದು, ತನ್ನೋ ವಿಷ್ಣುಣುಃ ಪ್ರಚೋದಯಾತ್ ಎಂದು ಸೇರಿಸಿದರೆ ವಾಮನಗಾಯತ್ರೀ

ಮಂತ್ರವೇರ್ಪಡುತ್ತದೆ".
 
[^1]
 
ವ.ಟೀ. - ಸೋದ್ದೇಶಃ ಚತುರ್ಥ್ಯಂತಃ ತ್ರಿವಿಕ್ರಮಃ । ತತ್ಪರಂ ವಿಶ್ವರೂಪ ಇತಿ ಯಾವತ್ ।
ತ್ರಿವಿಕ್ರಮಾತ್ ಪರಂ ವಿದ್ಮಹಿ, ವಿಶ್ವರೂಪಾತ್ ಪರಂ ಧೀಮಹೀತಿ । ತನ್ನೋ ವಿಷ್ಣು
ಣುಃ
ಪ್ರಚೋದಯಾತ್ ಇತಿ ಚ ಯೋಜ್ಯಮ್ ।
 

 
ರಾಮಷಡಕ್ಷರಮಂತ್ರ
 

 
ಸ್ವಯಮುದ್ದೇಶಸಂಯುಕ್ತಃ ತದಾದ್ಯರ್ಣಪುರಃಸರಃ ।
 

ಸನತಿಃ ಷಡಕ್ಷರೋ ಮಂತ್ರೋ ವರ್ಣೈರಂಗಕ್ರಿಯಾ ಮತಾ II34 ೩೪
 

 
ಅರ್ಥ - ಚತುರ್ಥ್ಯಂತವಾದ ಜಾಮದಗ್ನರಾಮ ಹಾಗೂ ದಾಶರಥಿ ರಾಮ ಹೀಗೆ
ಉಭಯರಾಮರಿಗೂ ಸೇರಿದ ಮಂತ್ರವಿದು. ಚತುರ್ಥ್ಯಂತರಾಮಶಬ್ದ, ಅದರ ಆದಿಯಲ್ಲಿ
'ರಾಂ' ಎಂಬ ಶಬ್ದ, ಕಡೆಯಲ್ಲಿ 'ನಮಃ'ಶಬ್ದ.
 

 
'ಓಂ ರಾಂ ರಾಮಾಯ ನಮಃ' ಎಂಬುದು ರಾಮಷಡಕ್ಷರಮಂತ್ರದ ಸ್ವರೂಪ. ಇದೇ
ಪರಶುರಾಮ ಹಾಗೂ ದಾಶರಥಿರಾಮಮಂತ್ರವೂ ಆಗುತ್ತದೆ. ಮಂತ್ರದಲ್ಲಿ ಆರು
ಅಕ್ಷರಗಳಿಂದಲೇ ಷಡಂಗನ್ಯಾಸ- ವನ್ನು ಮಾಡಿಕೊಳ್ಳಬೇಕು.
 

 
[^
1]. 'ತ್ರಿವಿಕ್ರಮಾಯ ವಿದ್ಮಹಿ, ವಿಶ್ವರೂಪಾಯ ಧೀಮಹಿ । ತನ್ನೋ ವಿಷ್ಣುಃ ಪ್ರಚೋದಯಾತ್'
ಎಂದು ಮಂತ್ರದ ಸ್ವರೂಪವು.
 

[^
2.
 
]. ಅಂಗನ್ಯಾಸವು ಹೀಗೆ ಏರ್ಪಡುತ್ತದೆ -
 

ಓಂ ರಾಂ ಹೃದಯಾಯ ನಮಃ । ಓಂ ರಾಂ ಶಿರಸೇ ಸ್ವಾಹಾ । ಓಂ ಮಾಂ ಶಿಖಾಯ್ಕೆ
 
ಯೈ