This page has not been fully proofread.

೧೬೦
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಸಹೃದಯೋ ಮನುಃ ।
 
ಅಮೃತಂ ಸ್ವಯಮುದ್ದೇಶಯುತಃ
 
ಸತಾರೋಽಷ್ಟಾಕ್ಷರೋಽಂಗಾನಿ ಪದೈ: ವ್ಯ: ಸಮಸ್ತಕೈಃ ॥31 ॥
 
ಅರ್ಥ - ಅಮೃತಂ ಎಂದರೆ ಬಿಂದುಸಹಿತವಾದ ವಕಾರವೆಂದರ್ಥ. ಚತುರ್ಥ್ಯಂತ
ವಾದ ವಾಮನಶಬ್ದವು ಕಡೆಯಲ್ಲಿ ನಮಃಪದ ಹಾಗೂ ಆದಿಯಲ್ಲಿ ಓಂಕಾರ ಸೇರಿದಾಗ
ಎಂಟಕ್ಷರದ ವಾಮನಮಂತ್ರವಾಗುವುದು. ಅಮೃತಂ ಎಂದಿದ್ದರಿಂದ 'ಅಮೃತಾತ್ಮನೇ
ನಮಃ' ಎಂಬ ಇನ್ನೊಂದು ವಾಮನಾಷ್ಟಾಕ್ಷರಮಂತ್ರವೂ ವಿವರಿಸಿದಂತಾಗಿದೆ.
 
ಮಂತ್ರದ ನಾಲ್ಕು ಪದಗಳಿಂದಲೂ, ಸಮಸ್ತ ಮಂತ್ರದಿಂದಲೂ ಪಂಚಾಂಗನ್ಯಾಸವು.
 
ಓಂ ಅಮೃತಾತ್ಮನೇ ನಮಃ ಎಂಬ ಇನ್ನೊಂದು ಮಂತ್ರದ ಪದಗಳನ್ನು ಎರಡು ಬಾರಿ
ಆವೃತ್ತಿ ಮಾಡಿದಾಗ ಷಡಂಗನ್ಯಾಸವಾಗುವುದು.
 
ವ.ಟೀ - ಅಮೃತಂ ವಕಾರೋ ಬಿಂದುಯುತಃ । ಸ್ವಯಂ ವಾಮನಃ ಚತುರ್ಥ್ಯಂತಃ ।
ಸಹೃದಯಃ । ನಮಸ್ಕಾರಯುಕ್ತಃ । ಸಪ್ರಣವೋಽಷ್ಟಾಕ್ಷರಃ । ಅನೇನ 'ಅಮೃತಾತ್ಮನೇ ನಮಃ'
ಇತ್ಯಯ್ಯೋSಪಿ ಮಂಡೋ ವಿವೃತೋ ಭವತಿ । ಪೂರ್ವಮಂತ್ರಸ್ಯ ವ್ಯಸ್ತಸಮಸ್ತೆ: ಪದ್ಯೆ:
ಪಂಚಾಂಗಾನಿ । ಉಕ್ತಸ್ಯ ಸಪ್ರಣವಸ್ಯ ದ್ವಿರಾವೃತೈ: ಪದೈಃ ಷಡಂಗಾನೀತಿ ಭಾವಃ ॥
 
ಅಷ್ಟಾಕ್ಷರವಾಮನಮಂತ್ರದ ಧೈಯರೂಪ
 
ಉದ್ಯದ್ರವಿಪ್ರಭಮರೀಂದ್ರದ ಗದಾಂ ಚ
ಜ್ಞಾನಂ ಚ ಬಿಭ್ರತಮಜಂ ಪ್ರಿಯಯಾ ಸಮೇತಮ್ ।
ವಿಶ್ವಾವಕಾಶಮಭಿತಃ ಪ್ರತಿಪೂರಯಂತಂ
 
ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿವಂದ್ಯಮ್ ॥32
 
ಅರ್ಥ - ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಮಾನನೂ,
 
1. ಪಂಚಾಂಗನ್ಯಾಸ -
 
ಓಂ ಓಂ ಹೃದಯಾಯ ನಮಃ । ಓಂ ವಂ ಶಿರಸೇ ಸ್ವಾಹಾ । ಓಂ ವಾಮನಾಯ ಶಿಖಾಯ್ಕೆ
ವಷಟ್ । ಓಂ ನಮಃ ಕವಚಾಯ ಹುಮ್ । ಓಂ ವಂ ವಾಮನಾಯ ಅಸ್ರಾಯ ಫಟ್ ।
 
I
 
ಷಡಂಗನ್ಯಾಸ –
 
ಓಂ ಓಂ ಹೃದಯಾಯ ನಮಃ । ಓಂ ಅಮೃತಾತ್ಮನೇ ಶಿರಸೇ ಸ್ವಾಹಾ । ಓಂ ನಮಃ ಶಿಖಾಯ್ಕೆ
ವಷಟ್ 1 ಓಂ ಓಂ ಕವಚಾಯ್ ಹುಮ್ । ಓಂ ಅಮೃತಾತ್ಮನೇ ನೇತ್ರಾಭ್ಯಾಂ ವೌಷಟ್ ! ಓಂ
ನಮಃ ಅಸ್ರಾಯ ಫಟ್ ।