This page has not been fully proofread.

ಚತುರ್ಥೋಽಧ್ಯಾಯಃ
 
ಧಿಪತಿಃ । ಅನ್ನಾಧಿಪತಿರಿತ್ಯರ್ಥಃ ಸ್ಯಾತ್ । ಸೋ5ಪಿ ಚತುರ್ಥ್ಯಂತಃ ಸ್ವಾಹಾಯುಕೊS-
ಷ್ಟಾದಶಾಕ್ಷರಃ ॥
 
ದಧಿವಾಮನಮಂತ್ರದ ಅಂಗನ್ಯಾಸ - ಮಹಿಮೆ
ಅಂಗಾನಿ ತತ್ವದೈರೇವ ಮಂತ್ರಚಿಂತಾಮಣಿಯಮ್ ।
ಯಥೇಷಭಕ್ಷಭೋಜ್ಯಾದಿದಾತಾ ಮುಕ್ತಿಪ್ರದಾಯಕಃ
 
೧೫೯
 
ಅರ್ಥ ಈ ದಧಿವಾಮನಮಂತ್ರದ ಆರುಪದಗಳಿಂದಲೇ ಷಡಂಗನ್ಯಾಸ
ಮಾಡಬೇಕು. ಈ ಮಂತ್ರವು ಯಥೇಷ್ಟವಾದ ಭಕ್ಷ್ಯಭೋಜ್ಯಗಳನ್ನು, ಸಕಲ
ಸಂಪತ್ತನ್ನೂ, ಕಡೆಗೆ ಮುಕ್ತಿಯನ್ನೂ ನೀಡುವ ಮಂತ್ರಚಿಂತಾಮಣಿಯಾಗಿದೆ.
 
ದಧಿವಾಮನಮಂತ್ರದಲ್ಲಿ ಧೈಯರೂಪ
 
ಧ್ಯಾಯೇತ್ ಸುಶುಕ್ಲಮರವಿಂದದಲಾಯತಾಕ್ಷಂ
ಸೌವರ್ಣಪಾತ್ರದಧಿಭೋಜ್ಯ ಮಥಾಮೃತಂ ಚ ।
ದೋರ್ಭ್ಯಾ೦ ದಧಾನಮಖಿಲೈ ಸುರೈಃ ಸಮೇತಂ
 
ಶೀತಾಂಶುಮಂಡಲಗತಂ ರಮಯಾ ಸಮೇತಮ್ ॥30॥
 
ಅರ್ಥ ಕಮಲದಂತೆ ವಿಶಾಲನೇತ್ರಗಳುಳ್ಳವನೂ, ಸುವರ್ಣದ ಪಾತ್ರೆಯಲ್ಲಿ
ಮೊಸರನ್ನ ಹಾಗೂ ಅಮೃತವನ್ನು ತನ್ನೆರಡೂ ಕೈಗಳಲ್ಲಿ ಧರಿಸಿರುವವನೂ, ಬ್ರಹ್ಮಾದಿ
ದೇವತೆಗಳಿಂದ ಸುತ್ತುವರೆದು ರಮಾದೇವಿಯಿಂದಲೂ ಕೂಡಿರುವ ಅಚ್ಚಬಿಳಿ-
ವರ್ಣದ ದಧಿವಾಮನನನ್ನು ಚಿಂತಿಸಬೇಕು.
 
ಅಷ್ಟಾಕ್ಷರವಾಮನಮಂತ್ರ
 
1. ಅಂಗನ್ಯಾಸ ಕ್ರಮ -
1. ಓಂ ಹೃದಯಾಯ ನಮಃ
 
2. ಓಂ ನಮಃ ಶಿರಸೇ ಸ್ವಾಹಾ
4. ಓಂ ವಿಷ್ಣವೇ ಕವಚಾಯ್ ಹುಮ್
 
3. ಓಂ ಭಗವತೇ ಶಿಖಾಯ್ಕೆ ವಷಟ್
 
5. ಓಂ ಅನ್ನಾಧಿಪತಯೇ ನೇತ್ರಾಭ್ಯಾಂ ವೌಷಟ್ 6. ಓಂ ಸ್ವಾಹಾ ಅಸ್ತ್ರಾಯ ಫಟ್
 
ಇತಿ ದಿಬ್ಬಂಧಃ । ಅಸ್ಯ ಶ್ರೀ ಚಿಂತಾಮಣಿ ದಧಿವಾಮನಮಂತ್ರಸ್ಯ । ಬ್ರಹ್ಮಾ ಋಷಿಃ । ದಧಿ
ವಾಮನೋ ದೇವತಾ । ಜಪೇ ವಿನಿಯೋಗಃ ।