This page has not been fully proofread.

೧೫೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಶ್ವಾಸಸಂಖ್ಯೆ- ಪ್ರಾತರ್ಯೋಗ
 
ಶ್ವಾಸರೂಪೋ ಜಪೋ ನಿತ್ಯಮುಭಯೋರ್ವಿದ್ದದಲ್ಲಿಯೋ ॥22॥
ಏಕವಿಂಶತ್ ಸಹಸ್ರಾತ್ಮಾ ಸಷಟ್‌ಶತಮಹರ್ನಿಶಮ್ ।
ಅರ್ಪಣೀಯೋ ಹರ್ ನಿತ್ಯಂ ಪ್ರಾತರ್ಯೋಗೋ ಮಹಾನಯಮ್ ॥23॥
 
ಅರ್ಥ - ಜ್ಞಾನಿಗಳು ಹಾಗೂ ಅಜ್ಞಾನಿಗಳು ಪ್ರತಿದಿವಸವೂ 21,600 ಶ್ವಾಸ-
ರೂಪವಾದ ಹಂಸಮಂತ್ರವನ್ನು ಜಪಿಸುತ್ತಿರುತ್ತಾರೆ. ಇದನ್ನು ಪ್ರತಿದಿನವೂ
ಭಗವಂತನಿಗೆ ಅರ್ಪಿಸಬೇಕು. ಈ ಕೆಲಸವನ್ನು ವಾಯುದೇವರು ಮಾಡುವರು.
ಪ್ರಾತಃಕಾಲದಲ್ಲಿ ಅರ್ಪಿಸುವುದರಿಂದ ಇದನ್ನು ಪ್ರಾತರ್ಯೋಗ ಎನ್ನಲಾಗಿದೆ.
 
ಹಂಸಮಂತ್ರದ ಮಹಿಮೆ
 
ಅಶೇಷದೋಷದಹನಃ ತತ್ತ್ವಜ್ಞಾನಪ್ರದಾಯಕಃ ।
ಅಶ್ವರ್ಯಪ್ರದಶೈವ ಕೃತಾದ್ ಸಮುಪಾಸತಾಮ್ ।
ತಾರಯೋಗೋ5ವಮೇವ ಬ್ರಹ್ಮಾದಾವೇವ ವರ್ತತೇ ॥24॥
 
-
 
ಅರ್ಥ
 
ಈ ಮಂತ್ರವಾದರೋ
 
ಮಾಡುವವರ ಸಕಲದೋಷಗಳನ್ನು ನಾಶಪಡಿಸುತ್ತದೆ. ಅಣಿಮಾದ್ಯಷ್ಟಸಿದ್ಧಿಯನ್ನು
ನೀಡುತ್ತದೆ. ಈ ಮಂತ್ರದ ಆದಿಯಲ್ಲಿ ಓಂಕಾರ ಸೇರಿಸಿದರೆ 'ಓಂ ಹಂಸಃ
ಸೋಽಹಂ ಸ್ವಾಹಾ' ಎಂದು ಏರ್ಪಡುತ್ತದೆ. ಇದು ಇನ್ನೊಂದು ಹಂಸಮಂತ್ರ-
ವಾಗುತ್ತದೆ. ಆದರೆ ಇದನ್ನು ಜಪಿಸುವ ಅಧಿಕಾರ ಬ್ರಹ್ಮಾದಿದೇವತೆಗಳಿಗೆ ಮಾತ್ರ-
ವಿರುತ್ತದೆ.
 
ಕೃತಾದಿಚತುರ್ಯುಗಗಳಲ್ಲಿ ಮಂತ್ರಾವೃತ್ತಿ
 
ವ.ಟೀ. - ಅಥ ತಾರಯೋಗಃ = ಪ್ರಣವಯೋಗಃ । ಸೋಹ ಮಂತ್ರಃ ತಥಾ।
 
ಟೀಕಾರ್ಥ - ತಾರಯೋಗವೆಂದರೆ ಪ್ರಣವವನ್ನು ಆದಿಯಲ್ಲಿ ಸೇರಿಸುವುದು. ಹೀಗೆ
ಮಂತ್ರದ ಆದಿಯಲ್ಲಿ ಓಂಕಾರವಿರುವ ಹಂಸಮಂತ್ರವೂ ಹಂಸಮಂತ್ರವೆನಿಸುತ್ತದೆ.
 
ಹಂಸಮಂತ್ರದ ಧೈಯರೂಪ
 
ಅವತಾರಿಕಾ – ಹಂಸಮಂತ್ರದ ಧ್ಯಾನಶ್ಲೋಕವನ್ನು ತಿಳಿಸುತ್ತಾರೆ.
 
ಸ್ವಾಹಾ ಅಸ್ರಾಯ ಫಟ್ ॥ ಇತಿ ದಿಬ್ಬಂಧಃ ।