Proofing

This page has not been fully proofread.

ಚತುರ್ಥೋಽಧ್ಯಾಯಃ
 
ಅರ್ಥ
 
ವಿಯತ್ ಸ ಇತಿ ಯುಗ್ಯಾರ್ಣೇ ವಿಪರೀತಶ್ಚ ಸ ಸ್ಮೃತಃ ।
ಸ ಸರ್ಗಹೀನೋ ವೇತಶ್ಚ ಬಿಂದುಹೀನೋತ್ತರಸ್ತಥಾ ॥20।
ತ್ರಯ ಏತೇ ಮಹಾಮಂತ್ರಾಃ ಪುರುಷಾರ್ಥಚತುಷ್ಟಯೇ ।
ಕಲ್ಪವೃಕ್ಷಾಃ ಪ್ರಿಯಾ ವಿಷ್ಟೋ ವಿಶೇಷಾತ್ ಜ್ಞಾನದಾಯಕಾಃ ॥21॥
ವಿಯತ್ ಎಂದರೆ ಹಕಾರವು. ಇದಕ್ಕೆ ಬಂದು ಸೇರಿಸಿದರೆ ಹಂ
ಎಂದಾಗುತ್ತದೆ. ಇದರ ನಂತರ ಸಕಾರ ಸೇರಿಸಿದಾಗ 'ಹಂಸಃ' ಎಂದು ಎರಡಕ್ಷರಗಳ
ಒಂದು ಮಂತ್ರವಾಗುತ್ತದೆ. ಅದೇ ಅಕ್ಷರಗಳನ್ನು ಹಿಂದುಮುಂದಾಗಿಸಿದರೆ 'ಸೋSಹಂ'
ಎಂದಾಗುತ್ತದೆ. ಇದು ಇನ್ನೊಂದು ಮಂತ್ರ. ಸಃ ಎಂಬಲ್ಲಿನ ವಿಸರ್ಗವನ್ನು ತೆಗೆದು
ವಾಕಾರ ಸೇರಿಸಿ, ಅದರ ನಂತರದ ಹಂ ಎಂಬಲ್ಲಿನ ಅನುಸ್ವಾರ ತೆಗೆದು ಆಕಾರ
ಸೇರಿಸಿದರೆ ಸ್ವಾಹಾ ಎಂದಾಗಿ ಮೂರನೇ ಮಂತ್ರವೇರ್ಪಡುತ್ತದೆ. ಹೀಗೆ ಇವು ಮೂರು
ಮಂತ್ರಗಳು, 'ಹಂಸಃ ಸೋಽಹಂ ಸ್ವಾಹಾ' ಎಂಬುದು ಹಂಸಮಂತ್ರದ ಸ್ವರೂಪ.
 
www
 
ವ.ಟೀ. ವಿಯದ್ವರ್ಣಾಃ ಹಕಾರಃ, ಬಿಂದ್ವಂತಃ । ತತ್ಪರಃ ಸಕಾರಃ । ಅಯಮೇಕೋ
ಮಂತ್ರಃ । ಸ ಏವೇತಿ ವಿಪರೀತಃ । ಪ್ರಾತಿಲೋನೋಕ್ತ ಏಕೋ ಮಂತ್ರಃ । ಸಕಾರಸ್ಯ
ಓಂಕಾರಸಂಯೋಗೇ ವಿಶೇಷಃ । ತತ್ಪರಂ ಸಃ ಸಕಾರಃ ಸರ್ಗಹೀನೋ ಬಿಂದುಹೀನಃ ।
ವಾಕಾರೇಣ ಯುಕ್ತಃ । ಉತ್ತರಃ ಮಕಾರೋಽಪಿ ತಥಾ = ಬಿಂದುಹೀನಃ ದೀರ್ಘಯುಕ್ತಃ ।
ಸ್ವಾಹಾ ಇತಿ ಭಾವಃ । ಅಯಮೇಕೋ ಮಂತ್ರಃ । ಏವಮೇತೇ ತ್ರಯೋ ಮಂತ್ರಾಃ ॥
 
೧೫೫
 
ಹಂಸಮಂತ್ರದ ಅಂಗನ್ಯಾಸ
 
ಏತೈರೇವ ದ್ವಿರಾವೃತ್ತೆ: ಅಂಗಮೇಷಾಂ ಪ್ರಕೀರ್ತಿತಮ್ ।
 
ಅರ್ಥ - ಈ ಮೂರುಮಂತ್ರಗಳನ್ನು ಎರಡು ಬಾರಿ ಆವೃತ್ತಿಗೊಳಿಸಿದಾಗ
ಷಡಂಗನ್ಯಾಸವೇರ್ಪಡುತ್ತದೆ.
 
1. ಷಡಂಗನ್ಯಾಸಕ್ರಮವು ಹೀಗಿದೆ -
ಹಂಸಃ ಹೃದಯಾಯ ನಮಃ ।
ಸೋಽಹಂ ಶಿರಸೇ ಸ್ವಾಹಾ ।
ಸ್ವಾಹಾ ಶಿಖಾಯ್ಸ ವಷಟ್ ।
ಹಂಸಃ ಕವಚಾಯ ಹುಮ್ ।
 
1
 
ಸೋಽಹಂ ನೇತ್ರಾಭ್ಯಾಂ ವೌಷಟ್ ।