This page has not been fully proofread.

೧೫೪
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಖನಿಯಾದ ನೃಸಿಂಹನನ್ನು ಧ್ಯಾನಿಸಬೇಕು.
 
ಧೈಯಮೂರ್ತಿಯ ಬಾಹುಗಳಲ್ಲಿ ವಿಶೇಷ; ಧೈಯರೂಪದ ಧ್ಯಾನ
ಸರ್ವೆಷ್ಟಪಿ ಹಿ ಮಂತೇಷು ದ್ವಾದ್ಯನಂತಾಂತಬಾಹುಕಃ ।
ಚೇತನಾಂತಸಮಾರಭ್ಯ ಸರ್ವಗಾಂತಸ್ಥರೂಪವಾನ್ 1।16॥
ಅನಂತರೂಪೋ ಧೈಯೋSತಃ ಸ್ವಗುರೂಕ್ತಾನುಸಾರತಃ ।
ಯಥಾಯೋಗ್ಯಂ ಯಥಾಶಕ್ತಿ ತತ್ತದಾಯುದ್ಧಭೂಷಣಃ ॥17॥
 
ಅರ್ಥ - ಯಾವುದೇ ಮಂತ್ರಪ್ರತಿಪಾದ್ಯವಾದ ಭಗವನ್ನೂರ್ತಿಗಳಿಗೆ ಎರಡಾಗಲೀ
ನಾಲ್ಕಾಗಲೀ ಕೈಗಳೆಂಬ ನಿಯಮವಿರುವುದಿಲ್ಲ. ಅನಂತಾನಂತಬಾಹುಗಳಿರುತ್ತವೆ.
ಅದರಂತೆಯೇ ಭಗವಂತನ ರೂಪಗಳ ವಿಷಯದಲ್ಲಿಯೂ ಕೂಡ. ಆದರೂ ತನ್ನ
ಸಾಮರ್ಥ್ಯವನ್ನೂ, ಯೋಗ್ಯತೆಯನ್ನೂ ತಿಳಿದ ಯೋಗ್ಯಗುರುಗಳ ಉಪದೇಶದಂತೆ,
ತನಗೆ ನಿಲುಕುವ ಭಗವಂತನ ರೂಪಗಳನ್ನೂ, ಅವಯವ, ಆಯುಧ,
ಭೂಷಣಗಳನ್ನೂ ಧ್ಯಾನಿಸಬೇಕು.
 
ಶಂಖಚಕ್ರಗದಾಪದ್ಮಖಡ್ಗಖೇಟಾಃ ಸಶಾರ್ಙ್ಗಕಾಃ।
 
ಶರೋ ಮುಸಲವಚ ಹಲಃ ಪಾಶಾಂಕುಶ್ ತಥಾ ॥18।
 
ಶೂಲಂ ಚ ಭಿಂಡಿಪಾಲಶ್ಚ ಪಟ್ಟಣೋಗ್ನಿರ್ವರಾಭಯೇ ।
ತರ್ಕಮುದ್ರಾಕ್ಷಮಾಲಾ ಚ ಪುಸ್ತಕಂ ಚ ವಿದಾರಣಮ್ ।
ಇತ್ಯಾದೀನ್ಯಖಿಲಾವ ವಿಷ್ಟೊಶ್ಚಿಂತ್ಯಾನಿ ಬಾಹುಷು ॥19॥
 
ಅರ್ಥ
 
ಭಗವಂತನ ಚಕ್ರ, ಶಂಖ, ಗದೆ, ಪದ್ಮ, ಖಡ್ಗ, ಗುರಾಣಿ, ಬಿಲ್ಲು,
ಬಾಣ, ಒನಕೆ, ವಜ್ರಾಯುಧ, ನೇಗಿಲು, ಪಾಶ, ಅಂಕುಶ, ಶೂಲ, ಈಟಿ, ಭರ್ಜಿ
ಮೊದಲಾದ ಆಯುಧಗಳನ್ನೋ, ಅಗ್ನಿ, ವರಮುದ್ರೆ, ಅಭಯಮುದ್ರೆ, ಜ್ಞಾನ-
ಮುದ್ರೆಯನ್ನೋ ; ಅಕ್ಷಮಾಲೆ, ಪುಸ್ತಕ ಅಥವಾ ಇನ್ಯಾವುದೋ ಆಯುಧಗಳನ್ನು
ಧರಿಸಿರುವ ಭಗವಂತನನ್ನು ಧ್ಯಾನಿಸಬಹುದು ಅಥವಾ ತನ್ನ ಕೈಗಳಿಂದ ಶತ್ರುವಾದ
ಹಿರಣ್ಯಾಕ್ಷನನ್ನು ಬಗೆಯುತ್ತಿರುವ ನರಸಿಂಹನ ರೂಪಗಳನ್ನು ಧ್ಯಾನಿಸಬಹುದು.
 
ಹಂಸಮಂತ್ರಗಳು
 
A