This page has been fully proofread once and needs a second look.

೧೫೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ನೃಸಿಂಹಗಾಯತ್ರೀ
 

 
ವಿದ್ಮಹೇ ಧೀಮಹೇ ಪೂರ್ವಂ ಸ್ವಯಂ ಚೈವ ಮಹಾಬಲಃ ।

ಪ್ರೇರಯೇತ್ ತನ್ನ ಇತ್ಯೇತನ್ಮಧೈ5ಧ್ಯೇऽನಂತಃ ಪ್ರಕೀರ್ತಿತಃ ॥13 ೧೩
 

 
ಅರ್ಥ- 'ಸ್ವಯಂ' ಎಂದರೆ ಚತುರ್ಥ್ಯಂತವಾದ 'ನೃಸಿಂಹಾಯ' ಎಂಬ ಪದ.
ಇದರನಂತರ ವಿದ್ಮಹೇ ಎಂಬ ಪದ. ಈ ಪದದ ನಂತರ 'ಮಹಾಬಲಾಯ' ಎಂಬ
ಪದ. ನಂತರ 'ಧೀಮಹಿ' ಎಂಬ ಪದವನ್ನು ಹೇಳಬೇಕು. ಕಡೆಯಲ್ಲಿ 'ತನ್ನೋ ಅನಂತಃ

ಪ್ರಚೋದಯಾತ್' ಎಂದು ಉಚ್ಚರಿಸಿದಾಗ ನೃಸಿಂಹಗಾಯತ್ರೀ ಮಂತ್ರವೇರ್ಪಡುತ್ತದೆ.
[^1].
 
ವ. ಟೀ. -
ಸ್ವಯಂ ನೃಸಿಂಹಶ್ಚತುರ್ಥ್ಯಂತಃ । ತದುಪರಿ ವಿದ್ಮಹೇ ಇತಿ । ತತ್ಪರಂ
ಮಹಾಬಲಃ ಚತುರ್ಥ್ಯಂತಃ । ತದುಪರಿ ಧೀಮಹೀತಿ ತನ್ನೊನೋSನಂತಃ ಪ್ರಚೋದಯಾತ್
ಇತಿ । ನೃಸಿಂಹಗಾಯತ್ರೀಮಂತ್ರೇಷು ಪೂರ್ವಯೋಃ ಮಂತ್ರಯೋಃ ಇತಿ ಶೇಷಃ ॥
 
ವ.ಟೀ.
 
-
 

 
ನೃಸಿಂಹಮಂತ್ರದ ನ್ಯಾಸಕ್ರಮ
 

 
ಪಾದೈರ್ವ್ಯಸೈ: ಸಮಸ್ಯೆ ಪತೇಃ ಸಮಸ್ತೈಶ್ಚ ಪದೈಶ್ಚಾಂಗಂ ಪ್ರಕೀರ್ತಿತಮ್ ।

ಪೂರ್ವಯೋಸ್ತತ್ರ ಪೂರ್ವಂ ತು ಸರ್ವಜ್ಞೇನ ಷಡಂಗಕಮ್ ।

ತೃತೀಯಂ ತು ದ್ವಿರಾವೃ:ತ್ತೈಃ ಪಾದೈರಂಗಸಮನ್ವಿತಮ್ ॥14 ೧೪
 

 
ಅರ್ಥ- ಹಿಂದೆ ಹೇಳಿದ ಎರಡು ನೃಸಿಂಹಮಂತ್ರಗಳಲ್ಲಿ ಪಂಚಾಂಗನ್ಯಾಸವನ್ನು
ಮಂತ್ರದ ನಾಲ್ಕು ಪಾದ ಹಾಗೂ ಸಮಸ್ತಮಂತ್ರದಿಂದ ಮಾಡಬೇಕು. ಇದಕ್ಕೆ 'ಸರ್ವಜ್ಞ'
ಎಂಬ ಪದ ಸೇರಿಸಿ ಷಡಂಗನ್ಯಾಸವನ್ನು ಮಾಡಬಹುದು. ದ್ವಿತೀಯಮಂತ್ರ ಮಂತ್ರ- ದಲ್ಲಿ
ಆರುಪದಗಳಿಂದಲೇ ಷಡಂಗನ್ಯಾಸವು. ಮೂರನೆಯದ್ದಾದ ನೃಸಿಂಹಗಾಯತ್ರಿಯಲ್ಲಾ-
ದರೋ ಪಾದಗಳನ್ನೇ ಎರಡು ಬಾರಿ ಉಚ್ಚರಿಸಿ ಷಡಂಗನ್ಯಾಸ ಮಾಡಬೇಕು.
 
[^2]
 
[^
1]. ಮಂತ್ರಸ್ವರೂಪ ಹೀಗಿದೆ -
 

"ನೃಸಿಂಹಾಯ ವಿದ್ಮಹೇ ಮಹಾಬಲಾಯ ಧೀಮಹಿ ।

ತನ್ನೋSನಂತಃ ಪ್ರಚೋದಯಾತ್ ''
 

[^
2]. ಈ ಶ್ಲೋಕದಿಂದ ಹೇಳಿದ ನ್ಯಾಸವಿವರಗಳನ್ನು ಹೀಗೆ ಸಂಗ್ರಹಿಸಬಹುದು.
 

 
ಮೊದಲನೆಯ ನೃಸಿಂಹಾನುಷ್ಟುಪ್ ಮಂತ್ರದ ಅಂಗನ್ಯಾಸ
 

 
(1) ಉಗ್ರಂ ವೀರಂ ಮಹಾವಿಷ್ಣುಂ ಹೃದಯಾಯ ನಮಃ ।

(2) ಜ್ವಲಂತಂ ಸರ್ವತೋಮುಖಂ ಶಿರಸೇ ಸ್ವಾಹಾ ।