This page has not been fully proofread.

ಚತುರ್ಥೋಽಧ್ಯಾಯಃ
 
ವ.ಟೀ. - ಸ್ವನಾಮಾವರಾಹೇತಿ ನಾಮಾ ।
 
ಟೀಕಾರ್ಥ - ಅಥವಾ ಎಲ್ಲಾ ವೈಷ್ಣಮಂತ್ರಗಳಿಗೂ ಸಾಧಾರಣವಾದ ಅಂಗನ್ಯಾಸವನ್ನು
ಇಲ್ಲಿ ಹೇಳುತ್ತಿರುವರು. ಸ್ವನಾಮ್ಮಾ ಎಂದರೆ ವರಾಹ ಎಂಬ ನಾಮದಿಂದ ಎಂದರ್ಥ.
 
೧೪೯
 
ಜ್ಞಾನೈಶ್ವರ್ಯಪ್ರಭಾನಂದತೇಜಃ ಶಕ್ತಿಭಿರೇವ ವಾ ।
ಪೂರ್ಣಾತ್ಮಮಧ್ಯಗೈಃ ಸರ್ವವೈಷ್ಣವಾಂಗಾನ್ಯಥ್ ವಿದುಃ ॥8॥
 
ಅರ್ಥ - ಪೂರ್ಣ ಮತ್ತು ಆತ್ಮ ಎಂಬ ಶಬ್ದಗಳ ಮಧ್ಯದಲ್ಲಿರುವ ಜ್ಞಾನ, ಐಶ್ವರ್ಯ,
ಪ್ರಭಾ, ಆನಂದ, ತೇಜಃ ಮತ್ತು ಶಕ್ತಿ ಈ ಪದಗಳಿಂದಲೂ ಎಲ್ಲಾ ವೈಷ್ಣವ ಮಂತ್ರಗಳಿಗೆ
ಅಂಗನ್ಯಾಸ ಮಾಡಬಹುದು.
 
ವಟೀ - ಪೂರ್ಣಾತ್ಮಮಧ್ಯಗೈ: = ಪೂರ್ಣಾತಶಬ್ದಯೋಃ ಮಧ್ಯಗತೈಃ । ಜ್ಞಾನೈ-
ಶ್ವರ್ಯಾದಿಭಿಃ ವಾ ಷಡಂಗಾನಿ ವಿದುಃ ॥
 
ಶ್ರೀಕರಾಷ್ಟಾಕ್ಷರ ಮಂತ್ರ
 
ಕಾರಣಂ ಸ್ವಾಹಯಾ ಯುತಃ ।
ಮಂತ್ರೋ ಗರುಡಾರೂಢಸಂಸ್ಕೃತಿಃ ॥9॥
 
ತಿನ್ನೋದಾದಿಸ್ವಜಾಯಾಯಾಃ
ಶ್ರೀಕರೋಽಷ್ಟಾಕ್ಷರೋ
 
ಅರ್ಥ - ಉತ್ತಿಷ್ಠ ಎಂಬ ಪದದ ನಂತರ ಸಂಪತ್ಕರ ಎಂಬರ್ಥ ನೀಡುವ ಶ್ರೀಕರ
ಎಂಬ ಶಬ್ದ ಹಾಗೂ ಸ್ವಾಹಾ ಎಂಬ ಶಬ್ದಗಳು ಸೇರಿದಾಗ ಶ್ರೀಕರಾಷ್ಟಾಕ್ಷರ ಮಂತ್ರ-
ವಾಗುವುದು. ಇದಕ್ಕೆ ಗರುಡನ ಮೇಲೆ ಕುಳಿತಿರುವ ಭಗವದ್ರೂಪವೇ ಧೈಯಮೂರ್ತಿ-
ಯಾಗಿದೆ. 'ಸ್ವಜಾಯಾ ಕಾರಣಮ್' ತನ್ನ ಪತ್ನಿಯಾದ ಶ್ರೀದೇವಿಗೆ ಕಾರಣವೆಂಬರ್ಥ
ನೀಡುವ ಶ್ರೀಕರಶಬ್ದವು. ನಂತರ ಸ್ವಾಹಾಶಬ್ದ. ತಥಾ ಚ 'ಉತ್ತಿಷ್ಠ ಶ್ರೀಕರ ಸ್ವಾಹಾ'
 
1. ಇಲ್ಲಿ ತಿಳಿಸಿದ ಹಾಗೆ ಅಂಗನ್ಯಾಸ ಕ್ರಮ ಹೀಗಿದೆ
(1) ಓಂ ಪೂರ್ಣಜ್ಞಾನಾತ್ಮನೇ ಹೃದಯಾಯ ನಮಃ
(2) ಓಂ ಪೂರ್ಣೇಶ್ವರ್ಯಾತ್ಮನೇ ಶಿರಸೇ ಸ್ವಾಹಾ
(3) ಓಂ ಪೂರ್ಣಪ್ರಭಾತ್ಮನೇ ಶಿಖಾಯ್ಕ ವೌಷಟ್
(4) ಓಂ ಪೂರ್ಣಾನಂದಾತ್ಮನೇ ಕವಚಾಯ್ ಹುಮ್
(5) ಓಂ ಪೂರ್ಣತೇಜಾತ್ಮನೇ ನೇತ್ರಾಭ್ಯಾಂ ವಷಟ್
(6) ಓಂ ಪೂರ್ಣಶಕ್ಯಾತನೇ ಅಸ್ರಾಯ ಫಟ್