This page has not been fully proofread.

ತೃತೀಯೋsಧ್ಯಾಯಃ
 
ಅರ್ಥ - ಯಾವ ಮಂತ್ರಗಳಲ್ಲಿ ಋಷಿ, ಛಂದಸ್ಸು, ದೇವತೆ, ಅಂಗನ್ಯಾಸ,
ಧ್ಯಾನಗಳನ್ನು ಹೇಳಿಲ್ಲವೋ, ಅಂತಹ ಮಂತ್ರಗಳಲ್ಲಿ ಪ್ರಧಾನಮಂತ್ರವೆನಿಸಿದ ಪ್ರಣವ
ಮಂತ್ರಕ್ಕೆ ಹೇಳಿದ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿಯೂ ತಿಳಿಯಬೇಕು.
 
ಈ ತತ್ವನ್ಯಾಸಮಂತ್ರಗಳು ಪ್ರತ್ಯೇಕವಾಗಿಯೂ ಮೋಕ್ಷಾದಿಪುರುಷಾರ್ಥಗಳನ್ನು
ನೀಡಲು ಸಮರ್ಥವಾಗಿವೆ.
 
ತಂತ್ರಮಾರ್ಗಾಸ್ತು ಹರಿಣಾ ಹ್ಯಸಂಖ್ಯಾ: ಕೀರ್ತಿತಾ ಅಪಿ।
ತೇಷ್ಟಯಂ ಸುಗಮೋ ಮಾರ್ಗಃ ಸಫಲಾನುತಿಷ್ಠತಾಮ್ ॥155॥
 
1
 
ಯಾವತೋ ಹ್ಯನನುಷ್ಠಾನೇ ಕರ್ಮಪೂರ್ತಿ: ನ ವಿದ್ಯತೇ ।
ತಾವತ್ ಸಮಸ್ತಂ ಕಥಿತಂ ಅಸ್ಮಿನ್ ತಂತೇ ಯಥಾವಿಧಿ II156॥
 
ಉಪಸಂಹಾರ
 
ಪ್ರೀಯತೇಽನೇನ ಮಾರ್ಗೇಣ ಪೂಜಿತೋ ಮುಕ್ತಿದೋ ಭವೇತ್ ।
ಕಾಮದಶ್ಚ ಸ್ವಭಕ್ತಾನಾಂ ಭಗವಾನ್ ಪುರುಷೋತ್ತಮಃ ॥1571
 

 
143
 
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ಪ್ರಣೀತತಂತ್ರಸಾರಸಂಗ್ರಹ
ತೃತೀಯೋsಧ್ಯಾಯಃ ಸಂಪೂರ್ಣ: ।
 
-
 
ಅರ್ಥ - ವಸ್ತುತಃ ಶ್ರೀಹರಿಯೇ ಪಂಚರಾತ್ರಾದಿ ಆಗಮಗಳಲ್ಲಿ ಭಗವತ್ತೂಜೆ,
ಮಂತ್ರ, ಜಪ, ಹೋಮ, ಪ್ರತಿಮಾನಿರ್ಮಾಣ, ಆಲಯ ನಿರ್ಮಾಣಾದಿಗಳನ್ನು
ಬಹುರೀತಿಯಲ್ಲಿ ಬಿತ್ತರಿಸಿದ್ದಾನೆ. ಆದರೆ ಅವು ಬಹಳವಿಧವಿರುವುದರಿಂದಲೂ,
ಅತ್ಯಂತವಿಕೃತವಾಗಿರುವುದರಿಂದಲೂ, ಅಲ್ಪಜ್ಞಾನಾದಿಗಳುಳ್ಳ ಈಗಿನ ಪುರುಷರಿಗೆ
ದುರ್ಬೋಧವಾಗಿರುವುದರಿಂದಲೂ, ಅವುಗಳನ್ನು ಆಚರಿಸುವುದಕ್ಕೆ ಕಠಿಣಸಾಧ್ಯ-
ವಾದ್ದರಿಂದಲೂ ಅವುಗಳ ಸಾರಸಂಗ್ರಹವೆನಿಸಿದ ನಾವು ಹೇಳಿದ ಈ ತಂತ್ರಮಾರ್ಗವು
ಅನಾಯಾಸವಾಗಿ ತಿಳಿಯಲಿಕ್ಕೂ, ಅನುಷ್ಠಾನ ಮಾಡುವುದಕ್ಕೂ ಸುಲಭವಾಗಿದೆ.
 
1. ತತ್ವನ್ಯಾಸಕ್ಕೆ ಪ್ರಣವದಂತೆ ಋಷ್ಯಾದಿಗಳನ್ನು ತಿಳಿಯಬೇಕು.
 
"ಅಸ್ಯಶ್ರೀ ತತ್ವನ್ಯಾಸಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀ ಗಾಯ ಛಂದಃ ।
ಶಾದಿ ತತ್ವರೂಪೀ ಶ್ರೀಪರಮಾತ್ಮಾದೇವತಾ । ನ್ಯಾಸೇ ವಿನಿಯೋಗಃ 1
"ಉದ್ಯದ್ ಭಾಸ್ವತ್ ಸಮಾಭಾಸಃ
 
..' (1/18)