This page has been fully proofread once and needs a second look.

142
 
-
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಪ್ರಧಾನವತ್ ।
 
ಋಷಿಚಂಚ್ಛಂದೋದೇವತಾಂಗಧ್ಯಾನಾನು
 
ಜೇ
ಕ್ತೌ ಪ್ರಧಾನವತ್ ।
ಜ್ಞೇ
ಯಾ ಮಂತ್ರಾಃ ಸಮಸ್ತಾಸ್ತೇ ಪೃಥಙ್ಮೋಕ್ಷಾದಿದಾಯಕಾಃ 154
 
॥ ೧೫೪ ॥
 
ಓಂ ಪರಾಯ ಉಪಸ್ಥಾತ್ಮನೇ ಮನವೇ ನಮಃ (ಎಡಗೈಕಿರುಬೆರಳು)

ಓಂ ಪರಾಯ ಶಬ್ದಾತನೇ ಬೃಹಸ್ಪತಿ ಪ್ರಾಣಾಭ್ಯಾಂ ನಮಃ । (ಬಲಪಾದದ ಹೆಬ್ಬೆರಳು)

ಓಂ ಪರಾಯ ಸ್ಪರ್ಶಾತ್ಮನೇ ಅಪಾನಾಯ ನಮಃ । (ಬಲಪಾದದ ತೋರಬೆರಳು)

ಓಂ ಪರಾಯ ರೂಪಾತ್ಮನೇ ವ್ಯಾನಾಯ ನಮಃ 1(ಬಲಪಾದದ ಮಧ್ಯದ ಬೆರಳು)

ಓಂ ಪರಾಯ ರಸಾತ್ಮನೇ ಉದಾನಾಯ ನಮಃ (ಬಲಪಾದದ ಬೆರಳು)

ಓಂ ಪರಾಯ ಗಂಧಾತ್ಮನೇ ಸಮಾನಾಯ ನಮಃ 1(ಬಲಪಾದದ ಕಿರುಬೆರಳು)

ಓಂ ಪರಾಯ ಆಕಾಶಾತ್ಮನೇ ಮಹಾಗಣಪತೆಯೇ ನಮಃ । (ಎಡಪಾದದ ಹೆಬ್ಬೆರಳು)

ಓಂ ಪರಾಯ ವಾದ್ಯ್ವಾತ್ಮನೇ ಪ್ರವಹ ವಾಯವೇ ನಮಃ । (ಎಡಪಾದದ ಎರಡನೆಬೆರಳು)

ಓಂ ಪರಾಯ ತೇಜ ಆತ್ಮನೇ ವಹ್ನಯೇ ನಮಃ (ಎಡಪಾದದ ಮಧ್ಯಬೆರಳು)

ಓಂ ಪರಾಯ ಅಬಾತನೇ ವರುಣಾಯ ನಮಃ (ಎಡಪಾದದ ನಾಲ್ಕನೆಬೆರಳು)

ಓಂ ಪರಾಯ ಪೃಥಿವ್ಯಾತ್ಮನೇ ಶನೈಶ್ಚರಧರಾಭ್ಯಾಂ ನಮಃ । (ಎಡಪಾದದ ಕಿರುಬೆರಳು)
 

ಇದು ಸೃಷ್ಟಿನ್ಯಾಸ. ಇದರಲ್ಲಿ ಮಹದಾದಿ ತತ್ವಗಳಿಂದಾರಂಭಿಸಿ ಪೃಥಿವಿಯವರೆಗೂ ಇರುವುದು
ತತ್ವನ್ಯಾಸವು. ಬಲಗೈಯ ಹೆಬ್ಬೆರಳಿನಿಂದಾರಂಭಿಸಿ ಕಿರುಬೆರಳುಗಳವರೆಗೂ ನ್ಯಾಸವಿರುತ್ತದೆ.

ಸಂಹಾರನ್ಯಾಸದಲ್ಲಿ ಎಡಗಾಲಿನ ಕಿರುಬೆರಳಿನಿಂದಾರಂಭಿಸಿ 'ಪರಾಯ ಪೃಥಿವ್ಯಾತ್ಮನೇ
ಶನೈಶ್ಚರಧರಾಭ್ಯಾಂ ನಮಃ' ಎಂಬಲ್ಲಿಂದ ಪ್ರಾರಂಭವಾಗಿ ಪಂಚಭೂತಗಳು, ಬಲಗಾಲಿನ

ಕಿರುಬೆರಳಿನಿಂದ ಶಬ್ದಾದಿತನ್ಮಾತ್ರೆಗಳು, ಎಡಗೈಯ ಕಿರುಬೆರಳಿ- ನಿಂದಾರಂಭಿಸಿ ಐದು
ಜ್ಞಾನೇಂದ್ರಿಯಗಳು, ಬಲಗೈ ಕಿರುಬೆರಳಿ- ನಿಂದ ಪಂಚಕರ್ಮೇಂದ್ರಿಯಗಳು, ಎಡತೊಡೆಯಲ್ಲಿ
ಮನಸ್ತತ್ವ, ಬಲತೊಡೆಯಲ್ಲಿ ಅಹಂಕಾರ, ಎಡತೋಳು ಮಹತ್ತತ್ವ, ಬಲತೋಳು
ಅವ್ಯಕ್ತತತ್ವ. ಶಕ್ತಾತ್ಯಾದಿಗಳು ಹಿಂದಿನಂತೆಯೇ ಮಾಲಾಕಾರವಾಗಿ ನ್ಯಾಸವು. ಇದು ಸಂಹಾರನ್ಯಾಸ.

ಕಲಾಕರ್ಷಣೆ ಹಾಗೂ ಪೂಜಾನಂತರಸನ್ನಿಧಾನವನ್ನು ಹಿಂದಕ್ಕೆ ಪಡೆಯಲು ಸಂಹಾರಕ್ರಮವು.
ಪೂಜಾಕಾಲದಲ್ಲಿ ತತ್ವನ್ಯಾಸ ಮಾಡಿ ಸಂಕಲ್ಪ ಮಾಡಿ ಪೀಠಪೂಜೆಯಾದ ಮೇಲೆ
ಸೃಷ್ಟಿಕ್ರಮ ದಿಂದ ಇನ್ನೊಂದು ಬಾರಿ ನ್ಯಾಸ. ಪೂಜೆ ಮುಗಿದ ಮೇಲೆ ಸಂಹಾರಕ್ರಮದಿಂದ
ಪುನಃ ತತ್ವನ್ಯಾಸ. ಮಠಗಳಲ್ಲಿ ಸಂಸ್ಥಾನ ಪೂಜೆಯಲ್ಲಿ ಈ ಕ್ರಮವನ್ನು ನೋಡಬಹುದು. ಹೀಗೆ
ಮೂರು- ಬಾರಿ ನ್ಯಾಸವು.
 
B
 

ಸ್ಥಿತಿನ್ಯಾಸ - ಅರ್ಧಭಾಗ ಕ್ರಮವಾಗಿಯೂ, ಅರ್ಧಭಾಗ ವ್ಯತಯುತ್ಕ್ರಮವಾಗಿಯೂ ನ್ಯಾಸ
ಮಾಡಿದರೆ ಸ್ಥಿತಿನ್ಯಾಸ.
 

ದ್ದೌ ಮೂರ್ಧಾನಮಾರಭ್ಯ ವದನಾವಧಿಕಶ್ಚಯಃ ।

ಪಾದಾದಿ ಹೃದಯಾಂತಶ್ಚ ಸ್ಥಿತಿರೇವ ಪ್ರಕೀರ್ತಿತಾಃ ॥